ಹೆಚ್ಚುವರಿ ಬಸ್​ ವ್ಯವಸ್ಥೆಗೆ ಮನವಿ

vemgal ps
ವೇಮಗಲ್​ ಪೊಲೀಸ್​ ಠಾಣೆ ಆವರಣದಲ್ಲಿ ಹಮ್ಮಿಕೊಂಡಿದ್ದ ಎಸ್​ಸಿ&ಎಸ್​ಟಿ ಕುಂದು ಕೊರತೆ ಸಭೆಯಲ್ಲಿ ವೃತ್ತ ನಿರೀಕ್ಷಕ ಬಿ.ಪಿ.ಮಂಜು, ಮುಖಂಡರಾದ ಕಲ್ವಮಂಜಲಿ ಶಿವಣ್ಣ, ಪುರಹಳ್ಳಿ ಜಿ.ಯಲ್ಲಪ್ಪ,ನಾಗನಾಳ ರಮೇಶ್​, ಕಲ್ಕೆರೆ ವಿಜಯ್​ ಕುಮಾರ್​, ವಲ್ಲಬ್ಬಿ ತಾರಕ್​ ಮಂಜು, ಬೈರಂಡಹಳ್ಳಿ ನಾಗೇಶ್​ ಇದ್ದರು.
Published on

ವೇಮಗಲ್​: ಪಟ್ಟಣದ ವೇಮಗಲ್​ ಪೊಲೀಸ್​ ಠಾಣೆ ಆವರಣದಲ್ಲಿ ವೃತ್ತ ನಿರೀಕ್ಷಕ ಬಿ.ಪಿ.ಮಂಜು ನೇತೃತ್ವದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಕುಂದು ಕೊರತೆ ಸಭೆಯಲ್ಲಿ ಹಲವು ವಿಚಾರಗಳನ್ನು ಚರ್ಚಿಸಲಾಯಿತು.

ಪುರಹಳ್ಳಿ ಜಿ.ಯಲ್ಲಪ್ಪ ಮಾತನಾಡಿ, ವೇಮಗಲ್​ನಿಂದ ಬೆಂಗಳೂರಿಗೆ ನಿತ್ಯ ಬೆಳಗ್ಗೆ 6ರಿಂದ 8 ಗಂಟೆಗೆ ಕೆಎಸ್​ಆರ್​ಟಿಸಿ ಬಸ್​ ವ್ಯವಸ್ಥೆ ಮಾಡಲು ಹಾಗೂ ಬೆಳಗ್ಗೆ 8 ರಿಂದ 10 ಗಂಟೆಯವರೆಗೆ ಎಚ್​.ಕ್ರಾಸ್​ ಕಡೆಯಿಂದ ಕೋಲಾರಕ್ಕೆ ಬಸ್ಸುಗಳ ಸಂಖ್ಯೆ ಕಡಿಮೆ ಇದ್ದು, ಶಾಲಾ&-ಕಾಲೇಜಿಗೆ ಹೋಗುವ ಮಕ್ಕಳಿಗೆ ತುಂಬಾ ತೊಂದರೆಯಾಗುತ್ತಿದೆ. ಇನ್ನೂ ಆ ಸಮಯದಲ್ಲಿ 2 ಅಥವಾ 3 ಬಸ್ಸನ್ನು ಎಚ್​.ಕ್ರಾಸ್​ ಕಡೆಯಿಂದ ಕೋಲಾರ್​ಗೆ ಹೋಗುವಂತೆ ವ್ಯವಸ್ಥೆ ಮಾಡಲು ಸಂಬಂಧಪಟ್ಟ ಕೆಎಸ್​ಆರ್​ಟಿಸಿ ಜಿಲ್ಲಾಧಿಕಾರಿಗಳಿಗೆ ಸರ್ಕಲ್​ ಇನ್​ಸ್ಪೆಕ್ಟರ್​ ಕಡೆಯಿಂದ ಒಂದು ಮನವಿ ಮಾಡಬೇಕು ಎಂದರು.

ನರಸಾಪುರದ ಸತೀಶ್​ ಮಾತನಾಡಿ, ವೇಮಗಲ್​, ನರಸಾಪುರದ ಪ್ರಯಾಣಿಕರ ತಂಗುದಾಣ ಮತ್ತು ಅವಶ್ಯವಿರುವ ಸ್ಥಳಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಬೇಕು ಎಂದು ಮನವಿ ಮಾಡಿದರು.

ನಾಗನಾಳ ರಮೇಶ್​, ತಾರಕ್​ ಮಂಜು, ಸುಧಾಕರ್​ ಅವರು ವಿವಿಧ ಸಮಸ್ಯೆಗಳನ್ನು ಬಗೆಹರಿಸಿಲು ಮನವಿ ಮಾಡಿದರು.

ಪೊಲೀಸ್​ ಇನ್​ಸ್ಪೆಕ್ಟರ್​ ಬಿ.ಪಿ ಮಂಜು ಮಾತನಾಡಿ, ಸಿಸಿ ಕ್ಯಾಮರಾಗಳ ವಿಚಾರವಾಗಿ ಈಗಾಗಲೇ ಸಂಬಂಧಪಟ್ಟವರ ಬಳಿ ಚರ್ಚಿಸಲಾಗಿದೆ. ಸ್ಥಳಿಯ ನಿರುದ್ಯೋಗಿಗಳಿ ಉದ್ಯೋಗ, ಸ್ಥಳಿಯಮಟ್ಟದಲ್ಲಿ ಮುಂದಿನ ಸಭೆ ಮಾಡಲು ಪ್ರಯತ್ನಿಸಲಾಗುವುದು ಎಂದರು.

ರಾಜಕಲ್ಲಹಳ್ಳಿ ಬಿಬಿಎಂಪಿ ಶ್ರೀನಿವಾಸ್​, ರಾಮಪುರ ಮುನಿರಾಜು, ಚನ್ನಪ್ಪನಹಳ್ಳಿ ನಾಗರಾಜ್​, ಚಂಸಂದ್ರ ಮುನಿರಾಜು, ನರಸಾಪುರ ಸತೀಶ್​, ಆರ್ಜೆನಹಳ್ಳಿ ಕೃಷ್ಣಪ್ಪ, ಕುರುಗಲ್​ ಗಿರೀಶ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net