ರೇಣುಕಸ್ವಾಮಿ ಕೊಲೆ ಪ್ರಕರಣ: ನಾಳೆ ಚಾರ್ಜ್‌ಶೀಟ್ ಸಲ್ಲಿಕೆ

Darshan Bail Cancel
Published on

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಬಹುತೇಕ ಪೂರ್ಣವಾಗಿದ್ದು, ಇನ್ನು ಒಂದೆರಡು ದಿನದಲ್ಲಿ ಚಾರ್ಜ್‌ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದೆಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಸಾಕ್ಷ್ಯಾಧಾರಗಳನ್ನು ಆಧರಿಸಿ ದೋಷಾರೋಪಣಾ ಪಟ್ಟಿ ಸಿದ್ಧಪಡಿಸಿದ್ದು, ಅದನ್ನು ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ (ಎಸ್‌ಎಸ್‌ಪಿ) ಪರಿಶೀಲನೆ ನಡೆಸಿದ್ದು, ಕೆಲವೊಂದು ವಿಷಯಗಳ ಬಗ್ಗೆ ಸ್ಪಷ್ಟನೆ ಕೇಳಿದ್ದಾರೆ. ಅದಕ್ಕೂ ನಾವು ಉತ್ತರ ಸಿದ್ಧಪಡಿಸಿದ್ದೇವೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಲವು ಸಾಕ್ಷ್ಯಾಧಾರಗಳು ಸಿಕ್ಕಿದ್ದು, ಅದರ ಪೂರ್ಣ ವಿವರ ಒಳಗೊಂಡಿರುವ ಚಾರ್ಜ್‌ಶೀಟ್ ಅನ್ನು ಇನ್ನೆರಡು ದಿನಗಳೊಳಗೆ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಆಯುಕ್ತರು ತಿಳಿಸಿದರು. ಬೆಂಗಳೂರಿನ ವಿಧಿ-ವಿಜ್ಞಾನ ಪ್ರಯೋಗಾಲಯದಿಂದ ಎಲ್ಲಾ ವರದಿಗಳು ಬಂದಿದ್ದು, ಜತೆಗೆ ಅದಕ್ಕೆ ಸೇರಿದ ಪೂರಕ ಪ್ರಶ್ನೆಗಳಿಗೆ ಉತ್ತರ ಸಿದ್ಧಪಡಿಸಲಾಗಿದೆ. ಹೈದರಾಬಾದ್‌ನ ಸಿಎಫ್‌ಎಸ್‌ಎಲ್‌ನಿಂದ ಕೆಲ ವರದಿಗಳು ಬರುವುದು ಬಾಕಿ ಇದೆ. ಆದರೂ ಸಹ ಅದರ ತನಿಖೆ ಬಾಕಿ ಇಟ್ಟು ನಾವು ಮುಂದುವರಿಯುತ್ತಿದ್ದೇವೆ. ಫೈನಲ್ ಚಾರ್ಜ್‌ಶೀಟ್ ಸಲ್ಲಿಸಲು ಆಗದಿದಿದ್ದರೆ ಪ್ರಾಥಮಿಕ ದೋಷಾರೋಪಣ ಪಟ್ಟಿ ಸಲ್ಲಿಸಿ ಬಿಎನ್‌ಎಸ್ ಅಡಿಯಲ್ಲಿ ಅವಕಾಶ ಕೇಳಲಾಗುತ್ತದೆ. ಆರೋಪಿಗಳಿಗೆ ಯಾವ ಸೆಕ್ಷನ್‌ನಡಿ ಶಿಕ್ಷೆಯಾಗಬಹುದು ಎಂಬುದನ್ನು ಸಾಕ್ಷಿ ಆಧಾರಗಳ ಮೇಲೆ ನಿರ್ಧಾರವಾಗುತ್ತದೆ ಎಂದು ವಿವರಿಸಿದರು:
ವೈರಲ್ ಆದ ೆಟೋದಲ್ಲಿ ನಟ ದರ್ಶನ್ ಜತೆ ಇದ್ದ ವಿಲ್ಸನ್ ಗಾರ್ಡನ್ ನಾಗ ಮತ್ತು ಇತರರ ಬಗ್ಗೆ ಜೈಲು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಅವರ ಸ್ಥಳಾಂತರ ಬಗ್ಗೆ ನ್ಯಾಯಾಲಯ ನಿರ್ಧರಿಸಲಿದೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮೇಲೆ ಪ್ರಕರಣದ ತನಿಖೆಯನ್ನು ಸಿಐಡಿ ನಡೆಸುತ್ತಿದ್ದು, ಈ ಪ್ರಕರಣ ದಾಖಲಿಸಿದ ಮಹಿಳೆಯ ಸಾವು ಕುರಿತಂತೆ ಮಹಿಳೆ ಆಯೋಗವು ಬರೆದಿರುವ ಪತ್ರ ನಮಗೆ ಇನ್ನು ತಲುಪಿಲ್ಲ ಪತ್ರ ಬಂದ ನಂತರ ಅದನ್ನು ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು ಎಂದು ದಯಾನಂದ್ ತಿಳಿಸಿದರು.

ಮಾಹಿತಿ ಕೊಟ್ಟ ಇನ್‌ಸ್ಟಾಗ್ರಾಂ:
ನಟ ದರ್ಶನ್ ಆ್ಯಂಡ್ ಗ್ಯಾಂಗ್‌ನಿಂದ ರೇಣುಕಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ
ಕೊನೆಗೂ ಕೊಲೆಗೆ ಕಾರಣ ಪತ್ತೆ ಹಚ್ಚುವಲ್ಲಿ ಕಾಮಾಕ್ಷಿಪಾಳ್ಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಪೊಲೀಸರ ಮನವಿ ಮಣಿದ ಇನ್‌ಸ್ಟಾಗ್ರಾಂ ಕಂಪನಿಯವರು ಮೃತ ರೇಣುಕಾಸ್ವಾಮಿ, ಪವಿತ್ರಾಗೌಡಗೆ ಕಳುಹಿಸಿದ್ದ ಮೇಸೆಜ್ಗಳ ಕುರಿತು ಮಾಹಿತಿ ನೀಡಿದ್ದಾರೆ. ಅದರಲ್ಲಿ ರೇಣುಕಸ್ವಾಮಿ ಪವಿತ್ರಾಗೌಡ ಅವರಿಗೆ ಕಳುಹಿಸಿದ್ದ ಅಶ್ಲೀಲ ೆಟೋ ಮೇಸೆಜ್ಗಳ ಮಾಹಿತಿ ಇದೆ. ಈ ಮೂಲಕ ರೇಣುಕಸ್ವಾಮಿ ಪವಿತ್ರಾಗೌಡ ಅಶ್ಲೀಲ ಸಂದೇಶ ಕಳುಹಿಸಿರುವುದು ದೃಢವಾಗಿದೆ ತಿಳಿದು ಬಂದಿದೆ. ಈ ಹಿಂದೆ ರೇಣುಕಸ್ವಾಮಿ ಕಳುಹಿಸಿದ್ದ ಮೆಸೇಜ್ಗಳ ಕುರಿತು ಮಾಹಿತಿ ನೀಡುವಂತೆ ಪೊಲೀಸರು ಇನ್‌ಸ್ಟಾಗ್ರಾಂಗೆ ರೇಣುಕಸ್ವಾಮಿ ಐಡಿ ಸಮೇತ ಪತ್ರ ಬರೆದಿದ್ದ ಪೊಲೀಸರು. ಇನ್‌ಸ್ಟಾಗ್ರಾಂ ಕೊಟ್ಟ ಮಾಹಿತಿಯಲ್ಲಿ ರೇಣುಕಸ್ವಾಮಿ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಹಾಗೂ ಅಶ್ಲೀಲ ಪೋಟೋ ಕಳುಹಿಸಿರುವುದು ಪತ್ತೆಯಾಗಿದೆ. ಈ ಮಾಹಿತಿಯನ್ನು ಪೊಲೀಸರು ಚಾರ್ಜ್‌ಶೀಟ್ ಉಲ್ಲೇಸಿದ್ದಾರೆ ಎಂದು ತಿಳಿದು ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net