ಚಂದ್ರು ಮತ್ತೆ ಬರಲ್ಲ, ಆದ್ರೆ ಸತ್ಯಾಂಶ ಹೊರಬರುತ್ತೆ: ಶಾಸಕ ರೇಣುಕಾಚಾರ್ಯ

Renukacharya
Published on

ದಾವಣಗೆರೆ: ಸಹೋದರನ ಪುತ್ರ ಚಂದ್ರಶೇಖರ್ ಅಂತ್ಯಸಂಸ್ಕಾರ ನೆರವೇರಿದ್ದು, ಈ ಕುರಿತು ಶಾಸಕ ರೇಣುಕಾಚಾರ್ಯ ಪ್ರತಿಕ್ರಿಯೆ ನೀಡಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಅಂತ್ಯಸಂಸ್ಕಾರದ ಬಳಿಕ ಮಾಧ್ಯಮದವರ ಜತೆ ಮಾತನಾಡಿದ ಅವರು, ಕೆಲವು ಬೆಳವಣಿಗೆ ಬಗ್ಗೆ ಹೇಳಿಕೊಂಡಿದ್ದಾರೆ.

ಕುಂದೂರು ಗ್ರಾಮ ಸೇರಿದಂತೆ ಎಲ್ಲರೂ ಪ್ರೀತಿ ತೋರಿಸಿದ್ದಾರೆ. ನನಗೆ ಎಷ್ಟು ಜನ ಪ್ರೀತಿ ತೋರಿಸಿದ್ದರೋ ಅವರು ಚಂದ್ರುಗೂ ಅಷ್ಟೇ ಪ್ರೀತಿ ತೋರಿಸಿದ್ದರು. ಆದರೆ ಚಂದ್ರು ಶವವಾಗಿ ಬಂದ. ಚಂದ್ರು ವಾಪಸ್ ಬರಲ್ಲ ನಿಜ, ಅದಾಗ್ಯೂ ಸತ್ಯಾಂಶ ಹೊರಗೆ ಬರುತ್ತದೆ ಎಂದು ರೇಣುಕಾಚಾರ್ಯ ಹೇಳಿದ್ದಾರೆ.

ಪ್ರಕರಣ ಕುರಿತಂತೆ ಎಲ್ಲರೂ ಪೋನ್ ಮಾಡಿ ವಿಚಾರಣೆ ಮಾಡಿದ್ದಾರೆ. ಗೃಹ ಸಚಿವರು ಸಂಪೂರ್ಣ ತನಿಖೆ ಮಾಡಿಸುವ ಭರವಸೆ ನೀಡಿದ್ದಾರೆ. ನಿನ್ನ ಜತೆ ಸರ್ಕಾರ ಇದೆ, ಎಲ್ಲ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ. ನಿನ್ನ ಜನಪ್ರಿಯತೆ ನೋಡಿ ಆಗದವರು ಹೀಗೆ ಮಾಡಿದ್ದಾರೆ, ಮತ್ತೆ ಮನೆಗೆ ಬರುತ್ತೇನೆ ಅಂದಿದ್ದಾರೆ ಸಿಎಂ ಭರವಸೆ ನೀಡಿದ್ದಾಗಿ ರೇಣುಕಾಚಾರ್ಯ ಹೇಳಿದ್ದಾರೆ.

ಯಡಿಯೂರಪ್ಪ ಅವರು ನಾಲ್ಕೈದು ಬಾರಿ ಪೋನ್ ಮಾಡಿ ವಿಚಾರಿಸಿದ್ದಾರೆ. ಶೋಭಾ ಕರಂದ್ಲಾಜೆ, ಸಿ.ಟಿ ರವಿ ಸೇರಿದಂತೆ ರಾಜ್ಯಾಧ್ಯಕ್ಷರೂ ಪೋನ್ ಮಾಡಿ ನಿನ್ನ ಜೊತೆ ಇದ್ದೇನೆ ಅಂದಿದ್ದಾರೆ. ಮೊಮ್ಮಗ ಅಜ್ಜಿಯ ಮಡಿಲಿನಲ್ಲಿ ಮಲಗಿದ್ದಾನೆ. ಸಂಪೂರ್ಣ ಸಹಾಯ ನೀಡಿದ ಎಲ್ಲರಿಗೂ ಧನ್ಯವಾದ ಎಂದು ರೇಣುಕಾಚಾರ್ಯ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net