ಕರೊನಾ ನಿಯಂತ್ರಣಕ್ಕಾಗಿ ಮೃತ್ಯುಂಜಯ ಹೋಮ ನೆರವೇರಿಸಿದ ರೇಣುಕಾಚಾರ್ಯ

renuka may
Published on

ಹೊನ್ನಾಳಿ : ಕರೊನಾ ಅಟ್ಟಹಾಸಕ್ಕೆ ಇಡೀ ವಿಶ್ವವೇ ಕಂಗಾಲಾಗಿದ್ದು ಕರೊನಾ ನಿಯಂತ್ರಣದ ಜತೆಗೆ ಲೋಕ ಸುಭಿಕ್ಷವಾಗಿರಲೆಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಮೃತ್ಯುಂಜಯ ಹೋಮ ನೆರವೇರಿಸಿದರು.

ಪಟ್ಟಣದ ಹಿರೇಕಲ್ಮಠದಲ್ಲಿ ನಡೆದ ಹೋಮಕ್ಕೆ ಒಡೆಯರ್ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು. ಕರೊನಾದಿಂದಾಗಿ ಇಡೀ ವಿಶ್ವವೇ ಹೈರಾಣಾಗಿ ಹೋಗಿದ್ದು, ಹೋಮ ಲೋಕಕ್ಕೆ ಸನ್ಮಂಗಳ ಉಂಟು ಮಾಡಲಿ ಎಂದು ಪ್ರಾರ್ಥಿಸಿದರು.

ರೇಣುಕಾಚಾರ್ಯ ಮಾತನಾಡಿ, ಲಾಕ್‍ಡೌನ್ ಆದಾಗಿನಿಂದ ಕರೊನಾ ವಾರಿಯರ್ಸಗಳು ಕುಟುಂಬವನ್ನು ಮರೆತು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಕೆಲಸ ಮಾಡುತ್ತಿದ್ದು ದೇವರು ಅವರಿಗೆ ಒಳ್ಳೆಯದನ್ನು ಮಾಡಲಿ. ಹೊನ್ನಾಳಿ ತಾಲೂಕು ಕರೊನಾ ಮುಕ್ತವಾಗಲಿ ಎಂಬ ಉದ್ದೇಶದಿಂದ ಮೃತ್ಯುಂಜಯ ಹೋಮ ಮಾಡಿದ್ದು ಇಡೀ ಲೋಕವೇ ಕರೊನಾದಿಂದ ಮುಕ್ತವಾಗಲಿ ಎಂದರು. ಸುಮಾ ರೇಣುಕಾಚಾರ್ಯ ಹೋಮದಲ್ಲಿ ಪಾಲ್ಗೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net