ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿ ಪಕ್ಷದ ಅನೇಕ ನಾಯಕರು ತಾವಿರುವ ಮನೆ, ಇನ್ನಿತರ ಸರ್ಕಾರಿ ಆಸ್ತಿಗಳ ಬಾಡಿಗೆಯನ್ನು ಬಾಕಿ ಉಳಿಸಿಕೊಂಡಿದ್ದಾರೆಂಬ ಅಂಶ ಮಾಹಿತಿ ಹಕ್ಕು ಕಾಯ್ದೆ (ಆರ್ಟಿಐ) ಅರ್ಜಿಯಿಂದ ಬಹಿರಂಗ ಆಗಿದೆ. ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯ ಕೊಟ್ಟಿದೆ ಎಂದು ಅರ್ಜಿದಾರ ಸುಜಿತ್ ಪಟೇಲ್ ಹೇಳಿದ್ದಾರೆ.