ರೇಣುಕಸ್ವಾಮಿ ಹತ್ಯೆ ಕೇಸ್​: ಆರೋಪಿ ದರ್ಶನ್​ ಜಾಮೀನು ಅರ್ಜಿ ಅ.5ಕ್ಕೆ ಮುಂದೂಡಿಕೆ

renukaswamy murder case
Published on

ಬೆಂಗಳೂರು: ಇಂದು ಚಿತ್ರದುರ್ಗ ರೇಣುಕಸ್ವಾಮಿ ಭೀಕರ ಹತ್ಯೆ ಪ್ರಕರಣದಲ್ಲಿ (Renukaswamy Murder Case) ಜೈಲುವಾಸ ಅನುಭವಿಸುತ್ತಿರುವ ಆರೋಪಿ ದರ್ಶನ್ (Actor Darshan)​ ಜಾಮೀನು ಅರ್ಜಿ ವಿಚಾರಣೆಯನ್ನು ನಡೆಸಿದ ಬೆಂಗಳೂರಿನ 57ನೇ ಸಿಸಿಎಚ್​ ನ್ಯಾಯಾಲಯ, ಅರ್ಜಿ ವಿಚಾರಣೆಯನ್ನು ಮತ್ತೊಮ್ಮೆ ಮುಂದೂಡಿದೆ.

ಈ ಹಿಂದೆ ಸೆ.30ಕ್ಕೆ ಆರೋಪಿ ದರ್ಶನ್​ ಜಾಮೀನು ಅರ್ಜಿ ಮುಂದೂಡಿದ್ದ ಕೋರ್ಟ್​, ಅ.04ಕ್ಕೆ ವಿಚಾರಣೆ ಮುಂದೂಡಿಕೆ ಮಾಡಿತ್ತು. ಅದರ ಅನ್ವಯ ಇಂದು ಸುದೀರ್ಘ ವಿಚಾರಣೆ ನಡೆಸಿದ ಬೆಂಗಳೂರಿನ 57ನೇ ಸಿಸಿಎಚ್​ ನ್ಯಾಯಾಲಯ, ಇದೀಗ ಅರ್ಜಿ ವಿಚಾರಣೆಯನ್ನು ಮತ್ತೊಮ್ಮೆ ಮುಂದೂಡಿಕೆ ಮಾಡಿದ್ದು, ಅ.05ರ ಮಧ್ಯಾಹ್ನ 12:30ಕ್ಕೆ ವಿಚಾರಣೆ ಕರೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net