ಮಲಯಾಳಂನ ಜನಪ್ರಿಯ ನಟಿ ರೆಂಜೂಷಾ ಮೆನನ್ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆ..!

red
Published on

ಮಲಯಾಳಂ ಚಲನಚಿತ್ರ ಮತ್ತು ಟಿವಿ ಸೀರಿಯಲ್​​ಗಳಲ್ಲಿ ನಟಿಸುತ್ತಿದ್ದ ಖ್ಯಾತ ನಟಿ ರೆಂಜೂಷಾ ಮೆನನ್ ತಮ್ಮ ಅಪಾರ್ಟ್​​​ಮೆಂಟ್​​​ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ನಟಿ ತನ್ನ ಕುಟುಂಬದೊಂದಿಗೆ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದ್ದು ಆಕೆಗೆ 35 ವರ್ಷಗಳಾಗಿತ್ತು.


ಶ್ರೀಕರಿಯಂ ಪೊಲೀಸರು ಸಾವಿನ ಕುರಿತಂತೆ ಹೆಚ್ಚಿನ ತನಿಖೆಯನ್ನ ಆರಂಭಿಸಿದ್ದಾರೆ.
ಸೋಮವಾರ ಬೆಳಿಗ್ಗೆ ಆಕೆಯ ಕೋಣೆ ದೀರ್ಘಕಾಲದವರೆಗೆ ಲಾಕ್ ಆಗಿರುವುದನ್ನು ಕಂಡು ಕುಟುಂಬಸ್ಥರು ಕಳವಳಗೊಂಡಿದ್ದಾರೆ.\


ಬಾಗಿಲು ಬಂದ್​​​ ಆಗಿರೋದನ್ನ ಗಮನಿಸಿದ ಕುಟುಂಬಸ್ಥರು, ಬಲವಂತವಾಗಿ ಬಾಗಿಲನ್ನ ಮುರಿದು ಕೋಣೆಗೆ ಪ್ರವೇಶಿಸಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ರೆಂಜೂಷಾ ಮೆನನ್ ಶವ ಪತ್ತೆಯಾಗಿದೆ.


ಆಕೆಯ ದುರಂತ ಸಾವಿಗೆ ನಿಖರ ಕಾರಣ ತಿಳಿಯಲು ಆಕೆಯ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪೊಲೀಸರು ಕೂಲಂಕುಷವಾಗಿ ತನಿಖೆ ನಡೆಸಲಾಗುತ್ತೆ ಎಂದು ತಿಳಿಸಿದ್ದಾರೆ.


ರೆಂಜೂಷಾ ಮೆನನ್ ಅವರು ಹಲವಾರು ಟಿವಿ ಚಾನೆಲ್‌ಗಳಲ್ಲಿ ಹಲವಾರು ದೂರದರ್ಶನ ಧಾರಾವಾಹಿಗಳಲ್ಲಿ ಕಾಣಿಸಿಕೊಂಡ ಪ್ರಸಿದ್ಧ ನಟಿ. ಜತೆಗೆ ಸಾಕಷ್ಟು ಚಲನಚಿತ್ರಗಳಲ್ಲಿಯೂ ನಟಿಸಿದ್ದಾರೆ.


'ಸಿಟಿ ಆಫ್ ಗಾಡ್', 'ಮರಿಕ್ಕುಂಡೋರು ಕುಂಜಾಡು', 'ಬಾಂಬೆ ಮಾರ್ಚ್', 'ಕಾರ್ಯಸ್ಥಾನ', 'ಒನ್ ವೇ ಟಿಕೆಟ್', 'ಅತ್ಭುತ ದ್ವೀಪ' ಸೇರಿದಂತೆ ಹಲವಾರು ದೂರದರ್ಶನ ಕಾರ್ಯಕ್ರಮಗಳು ಮತ್ತು ಚಲನಚಿತ್ರಗಳಲ್ಲಿ ಪೋಷಕ ಪಾತ್ರಗಳಿಗೆ ಹೆಸರುವಾಸಿಯಾಗಿದ್ದಾರೆ.
ಈ ಪಾತ್ರಗಳು ಆಕೆಯನ್ನು ಮನೆಮಾತಾಗಿಸಿದವು ಮತ್ತು ಆಕೆಗೆ ಮತ್ತಷ್ಟು ಫೇಮ್​ ತಂದುಕೊಟ್ಟಂತಹ ಪಾತ್ರಗಳು.


ಹಲವಾರು ಧಾರಾವಾಹಿಗಳಲ್ಲಿ ನಿರ್ಮಾಪಕಿಯಾಗಿಯೂ ರೆಂಜೂಷಾ ಮೆನನ್ ಕೆಲಸ ಮಾಡಿದ್ದಾರೆ. ಇದಲ್ಲದೆ, Ms ಮೆನನ್ ವೃತ್ತಿಪರ ಭರತನಾಟ್ಯ ನೃತ್ಯಗಾರ್ತಿಯೂ ಆಗಿದ್ದರು. ಅವರು ತಂದೆ ಸಿ ಜಿ ರವೀಂದ್ರನಾಥ್ ಮತ್ತು ತಾಯಿ ಉಮಾದೇವಿ ಅವರನ್ನು ಅಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net