ವಿದ್ಯುತ್ ತಂತಿಗೆ ಸಿಲುಕಿದ್ದ ಫ್ಲೆಕ್ಸ್ ತೆರವು

filter: 0; jpegRotation: 90; fileterIntensity: 0.000000; filterMask: 0;
ಹ್ಯಾಂಡ್ ಪೋಸ್ಟ್ ಸರ್ಕಲ್‌ನಲ್ಲಿ ವಿದ್ಯುತ್ ತಂತಿಗೆ ಸಿಲುಕಿದ್ದ ಫ್ಲೆಕ್ಸ್‌ಅನ್ನು ಸೆಸ್ಕ್ ಸಿಬ್ಬಂದಿ ಗುರುಪ್ರಸಾದ್ ಕ್ರೇನ್ ಮೇಲೆ ಕುಳಿತು ತೆರವು ಮಾಡಿದರು.
Published on

ಎಚ್.ಡಿ.ಕೋಟೆ : ತಾಲೂಕಿನ ಹ್ಯಾಂಡ್‌ಪೋಸ್ಟ್ ಸರ್ಕಲ್‌ನಲ್ಲಿ ಬಿರುಗಾಳಿ ಮಳೆಗೆ ಹಾರಿ ಹೋಗಿ ವಿದ್ಯುತ್ ತಂತಿಯ ಮೇಲೆ ಬಿದ್ದಿದ್ದ ಬೃಹತ್ ಫ್ಲೆಕ್ಸ್ ಅನ್ನು ಸೆಸ್ಕ್ ಸಿಬ್ಬಂದಿ ಕ್ರೇನ್ ಸಹಾಯದಿಂದ ಭಾನುವಾರ ತೆರವುಗೊಳಿಸಿದರು.

ಕಳೆದ ಒಂದು ವಾರದಿಂದ ತಾಲೂಕಿನಲ್ಲಿ ಉತ್ತಮ ಮಳೆಯಾಗುತ್ತಿದ್ದು, ಶನಿವಾರವೂ ಸಹ ಭಾರೀ ಗಾಳಿ ಮಳೆಯಾಗಿತ್ತು. ಪರಿಣಾಮ ರಾತ್ರಿ ಎಚ್.ಡಿ.ಕೋಟೆಯ ಹ್ಯಾಂಡ್ ಪೋಸ್ಟ್ ಸರ್ಕಲ್ ವೃತ್ತದ ಮೈಸೂರು ರಸ್ತೆಯಲ್ಲಿ ಕಟ್ಟಡದ ಮೇಲೆ ಅಳವಡಿಸಲಾಗಿದ್ದ ಖಾಸಗಿ ಸಂಸ್ಥೆಯೊಂದರ ಜಾಹಿರಾತಿನ ಬೃಹತ್ ಫ್ಲೆಕ್ಸ್ ಗಾಳಿಗೆ ಹಾರಿ ಹೋಗಿ ಎಚ್.ಡಿ.ಕೋಟೆ ರಸ್ತೆಯ ಮಧ್ಯೆ ಹಾದು ಹೋಗಿರುವ ವಿದ್ಯುತ್ ತಂತಿಯ ಮೇಲೆ ಬಿದ್ದಿತ್ತು. ಇದರಿಂದ ರಾತ್ರಿ ಪೂರ್ತಿ ವಿದ್ಯುತ್ ನಿಲುಗಡೆಯಾಗಿತ್ತು. ಅಲ್ಲದೇ ವಾಹನಗಳ ಸಂಚಾರಕ್ಕೂ ಅಡಚಣೆಯಾಗಿತ್ತು. ಸಾರ್ವಜನಿಕರು ರಾತ್ರಿ ಸಹಾಯವಾಣಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ರಾತ್ರಿ ಗಾಳಿ ಮಳೆ ಇದ್ದ ಹಿನ್ನೆಲೆಯಲ್ಲಿ ಸಿಬ್ಬಂದಿ ತೆರವುಗೊಳಿಸಲು ಸಾಧ್ಯವಾಗಿರಲಿಲ್ಲ.

ಬೆಳಗ್ಗೆ ಸ್ಥಳಕ್ಕೆ ಬಂದ ಅಧಿಕಾರಿಗಳು ಹಾಗೂ ಸಿಬ್ಬಂದಿ ಕ್ರೇನ್ ಬಳಕೆ ಮಾಡಿಕೊಂಡು ಫ್ಲೆಕ್ಸ್ ತೆರವಿಗೆ ಮುಂದಾದರು. ಆದರೆ ಫ್ಲೆಕ್ಸ್ ತಂತಿಗಳ ನಡುವೆ ಸಿಲುಕಿ ರಸ್ತೆಗೆ ಚಾಚಿಕೊಂಡಿದ್ದರಿಂದ ತೆರವಿಗೆ ಅಡ್ಡಿಯಾಗಿತ್ತು. ಕೂಡಲೇ ಕಾರ್ಯ ಪ್ರವೃತ್ತರಾದ ಲೈನ್‌ಮನ್ ಎಚ್.ಮಟಕೆರೆಯ ಗುರುಪ್ರಸಾದ್ ಕ್ರೇನ್ ಮೇಲೆ ಹತ್ತಿ ಎತ್ತರದಲ್ಲಿ ಸಿಲುಕಿದ್ದ ಫ್ಲೆಕ್ಸ್ ಅನ್ನು ಬಿಡಿಸಿ ತೆರವುಗೊಳಿಸುವಲ್ಲಿ ಯಶಸ್ವಿಯಾದರು. ಕಾರ್ಯಾಚರಣೆಯಲ್ಲಿ ಲೈನ್ ಮನ್‌ಗಳಾದ ಕೃಷ್ಣ, ಡಿ.ಕುಮಾರ್, ಚರಣ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net