ಅಪಾಯ ಆಹ್ವಾನಿಸುತ್ತಿರುವ ಮರದ ಕೊಂಬೆ ತೆರವುಗೊಳಿಸಿ

IMG20250717074231
ಕೊಪ್ಪ ಕಾವೇರಿ ಬಡಾವಣೆ ಸಮೀಪ ಬಿ.ಎಂ. ರಸ್ತೆ ಪಕ್ಕದಲ್ಲಿ ಮರದ ಕೊಂಬೆ ಮುರಿದು ವಿದ್ಯುತ್ ತಂತಿಗೆ ಸಿಲುಕಿ ಅಪಾಯಕ್ಕೆ ಆಹ್ವಾನಿಸುತ್ತಿರುವುದು.
Published on

ಬೈಲುಕುಪ್ಪೆ: ವಿದ್ಯುತ್ ಕಂಬದ ವೈರಿಗೆ ಮರದ ಕೊಂಬೆಯೊಂದು ಸಿಲುಕಿ ನೇತಾಡುತ್ತಿದ್ದು, ಅಪಾಯವನ್ನು ಆಹ್ವಾನಿಸುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಕೊಂಬೆ ತೆರವುಗೊಳಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿ.ಎಂ. ರಸ್ತೆ ಪಕ್ಕದ ಕಾವೇರಿ ಬಡಾವಣೆ ಸಮೀಪದಲ್ಲಿ . ಮೂರು ದಿನದಿಂದಲೂ ಕಾಡು ಜಾತಿಯ ಮರದ ರೆಂಬೆ ಕಸಿದು ಹೈ ವೋಲ್ಟ್ ವಿದ್ಯುತ್ ಕಂಬದ ತಂತಿಗೆ ಸಿಲುಕಿದೆ. ಸಾರ್ವಜನಿಕರು ದಿನನಿತ್ಯ ಓಡಾಡುವ ಈ ರಸ್ತೆಯಲ್ಲಿ ಅಪಾಯದ ಹಂಚಿನಲ್ಲಿ ಈ ಮರದ ರೆಂಬೆ ಸಿಲುಕಿದೆ. ಮೇಯಲು ಬಿಟ್ಟ ದನ-ಕರುಗಳು ಹಾಗೂ ಮೇಕೆಗಳ ಹೊಡೆತಕ್ಕೆ ಮುರಿದಿದ್ದ ಈ ಕೊಂಬೆಗೆ ಉಜ್ಜಿಕೊಂಡು ಹೋದರೆ ಕರೆಂಟ್ ಪಾಸ್ ಆಗುವ ಸಾಧ್ಯತೆ ಇದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ ಸಾರ್ವಜನಿಕರಿಗೆ ಅಪಾಯಕಾಗುವ ಮುನ್ನ ಕ್ರಮ ತೆಗೆದುಕೊಳ್ಳಬೇಕೆಂದು ಒತಾಯಿಸಿದ್ದಾರೆ.

ಮರದ ಕೊಂಬೆ ಮುರಿದು ನೇತಾಡುತ್ತಾ ಅಪಾಯಕ್ಕೆ ಆಹ್ವಾನಿಸುತ್ತಿರುವ ವಿಷಯ ನನ್ನ ಗಮನಕ್ಕೆ ಬಂದಿರಲಿಲ್ಲ. ಕೂಡಲೇ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುತ್ತೇನೆ.

ಸುನಿಲ್ ಯಾದವ್. ಸೆಸ್ಕ್ ಇಂಜಿನಿಯರ್, ಕೊಪ್ಪ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net