

ಸೂರ್ಯಪಾನ ನಮ್ಮ ಋಷಿ-ಮುನಿಗಳು, ದೇವತೆಗಳ ನಿರಾಹಾರ ಜೀವನವನ್ನು ಅಳವಡಿಸಿಕೊಳ್ಳಲು ಸಾಧಿಸಿಕೊಂಡಿದ್ದ ತಂತ್ರ. ಇದರಿಂದ ದೈಹಿಕ ಆರೋಗ್ಯವನ್ನು ಪಡೆಯುವುದಲ್ಲದೆ ಮನುಷ್ಯನ ಆಹಾರದ ಮೇಲಿನ ಅವಲಂಬನೆ ತಪ್ಪುತ್ತದೆ. ಸೂರ್ಯಪಾನದ ಸಿದ್ಧಿ ಪಡೆಯುವುದರಿಂದ ದೈಹಿಕ, ಮಾನಸಿಕ ಆರೋಗ್ಯ ಮಾತ್ರವಲ್ಲದೆ, ಆಧ್ಯಾತ್ಮಿಕ ಪ್ರಗತಿಯನ್ನು ಸಾಧಿಸಬಹುದು.
ಸೂರ್ಯಶಕ್ತಿ ನಮ್ಮ ದೇಹದಲ್ಲಿ ಮಾರ್ಪಾಡಾಗುವ ರೀತಿ: ಉದಯ ಅಥವಾ ಸೂರ್ಯಾಸ್ತದ ಸೂರ್ಯಕಿರಣವನ್ನು ನಾವು ಕಣ್ಣಿನ ಮೂಲಕ ನೋಡಿದಾಗ ಅದು ದೇಹಕ್ಕೆ ಬೇಕಾದ ಶಕ್ತಿಯಾಗಿ ಹೇಗೆ ಮಾರ್ಪಾಡುತ್ತದೆ ಎಂಬುದರ ಕುರಿತು ಪ್ರಧಾನ ವಾದಗಳು ಹೀಗಿವೆ.
ಋಗ್ವೇದದಲ್ಲಿ ವಿಪುಲವಾಗಿ ವರ್ಣಿತವಾದ ಸೂರ್ಯಪಾನ ತಂತ್ರಜ್ಞಾನವನ್ನು ಆಧುನಿಕ ಪ್ರಪಂಚಕ್ಕೆ ಪರಿಚಯಿಸಿದ ಹೀರಾರತನ್ ಮಾನೇಕ್ ಅವರದು ಮೊದಲನೇ ವಾದ. ಅವರ ಪ್ರಕಾರ ದೇಹವನ್ನು ಕಟ್ಟಿರುವ ಜೀವಕಣಗಳು ಕಿರಣವನ್ನು ಶಕ್ತಿಯನ್ನಾಗಿ ಪರಿವರ್ತಿಸಬಲ್ಲ ಫೋಟೋ ವಾಲ್ಟಿಕ್ ಗುಣವನ್ನು ಹೊಂದಿವೆ. ನಾವು ಸೂರ್ಯಪಾನದ ಮೂಲಕ ಜೀವಕಣಗಳಿಗೆ ಅದರ ಈ ಗುಣದ ಮರುಪರಿಚಯ ಮಾಡಿಸುತ್ತೇವೆ. ಹಾಗಾಗಿ ಜೀವಕಣಗಳು ಸೂರ್ಯಶಕ್ತಿಯನ್ನು ದೇಹಕ್ಕೆ ಬೇಕಾದ ಶಕ್ತಿಯಾಗಿ ಪರಿವರ್ತಿಸಲು ಆರಂಭಿಸುತ್ತವೆ. ಮನುಷ್ಯ ತನ್ನ ಮಿದುಳಿನ ಶಕ್ತಿಯ ಅತಿ ಸಣ್ಣ ಭಾಗವನ್ನು ಶೇ. 10ರಷ್ಟು ಮಾತ್ರ ಉಪಯೋಗಿಸುತ್ತಿದ್ದಾನೆ. ಸೂರ್ಯಪಾನವು ಮಿದುಳಿನ ಶಕ್ತಿಯ ಸರಿಯಾದ ಹಾಗೂ ಹೆಚ್ಚಿನ ಉಪಯೋಗಕ್ಕೆ ಕಾರಣವಾಗುತ್ತದೆ. ಕಣ್ಣಿನ ಮೂಲಕ ಮಿದುಳಿಗೆ ಹಾಗೂ ದೇಹಕ್ಕೆ ತಲುಪುವ ಸೂರ್ಯಕಿರಣಗಳು ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ. ಮಾನೇಕ್ ಅವರ ಪ್ರಕಾರ ಪ್ರತಿದಿನ ಸೂರ್ಯಪಾನ ಮಾಡುವುದರಿಂದ ಕಣ್ಣಿನ ದೋಷಗಳು ನಿವಾರಣೆಯಾಗುತ್ತವೆ. ಕ್ರಿಯಾಶೀಲನಾಗುತ್ತಾನೆ, ಚರ್ಮದೋಷಗಳು ವಾಸಿಯಾಗುತ್ತವೆ ಹಾಗೂ ಮಾನಸಿಕವಾಗಿ ವ್ಯಕ್ತಿ ಉತ್ತಮನಾಗುತ್ತಾನೆ.
ಇನ್ನೊಂದು ವಾದ - ಆಧ್ಯಾತ್ಮ ಮಾರ್ಗದಲ್ಲಿ ಸಾಧನೆ ನಡೆಸಿರುವ ಅತೀಂದ್ರಿಯ ಶಕ್ತಿಯಿಂದ ಗುಣಪಡಿಸುವ ಸಂಶೋಧಕಿ ಕತ್ರೀನಾ ರಾಫೆಲ್ ಅವರದು. ಆಕೆಯ ಪ್ರಕಾರ ಸೂರ್ಯನು ಆಧ್ಯಾತ್ಮಿಕ ಶಕ್ತಿ, ಬೆಳಕು ಮತ್ತು ಭೌತಿಕ ಪ್ರಭಾವಲಯ ಸಂಗಮ. ಕಾಣಲಾಗದ್ದು ಎಂಬ ಶಕ್ತಿಯನ್ನು ಅವನೊಬ್ಬನ ಮೂಲಕವೇ ನಾವು ಕಾಣಬಲ್ಲೆವು. ಕುಂಡಲಿನೀ ಶಕ್ತಿಯನ್ನು ನಾವು ಸೂರ್ಯಪಾನದ ಮೂಲಕ ಉತ್ತೇಜಿಸುತ್ತೇವೆ. ಹಾಗಾಗಿ ದೇಹದ ಬಂಧನಗಳಾದ ಹಸಿವು, ಕಾಯಿಲೆಗಳನ್ನು ಎಂದೆಂದಿಗೂ ಸೂರ್ಯಪಾನದ ಮೂಲಕ ನಿವಾರಿಸಬಲ್ಲೆವು ಎನ್ನುತ್ತಾಳೆ.
ಶಶಾಂಕಾಸನ: ಸೂರ್ಯನಮಸ್ಕಾರದ ಅಧೋಮುಖ ಶ್ವಾನಾಸನದ ಸ್ಥಿತಿಯ ನಂತರ ಉಸಿರನ್ನು ತೆಗೆದುಕೊಳ್ಳುತ್ತ ಎರಡೂ ಮಂಡಿಗಳನ್ನು ಊರಿ ಉಸಿರು ಬಿಡುತ್ತ ಹಿಮ್ಮಡಿಯ ಮೇಲೆ ಕುಳಿತು ಹಣೆಯನ್ನು ನೆಲಕ್ಕೆ ತಾಗಿಸಬೇಕು.
ಲಾಭಗಳು: ಇದೊಂದು ವಿಶ್ರಾಂತಿ ಭಂಗಿ. ಉಸಿರಾಟ, ಹೃದಯ ಬಡಿತ ಸಾಮಾನ್ಯ ಸ್ಥಿತಿಗೆ ಬರಲು, ಮನಸ್ಸು ಪ್ರಶಾಂತಗೊಳ್ಳಲು ಸಹಾಯಕ.