

ಕಲಕೇರಿ: ಗ್ರಾಮದಲ್ಲಿ 40 ವರ್ಷದಿಂದ ಬ್ಯಾಂಕಿಂಗ್ ಸೇವೆ ನೀಡುತ್ತಿರುವ ಬ್ಯಾಂಕ್ ಆ್ ಬರೋಡಾ ಶಾಖೆಯು ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡಿದ್ದು, ಸ್ಥಳಾಂತರಗೊಂಡ ಶಾಖೆಯನ್ನು ಕಲಬುರಗಿ ಪ್ರಾದೇಶಿಕ ವ್ಯವಸ್ಥಾಪಕ ವಿ. ರವೀಂದ್ರಬಾಬು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ವಿಜಯಪುರ ರಸ್ತೆಯ ಕಿತ್ತೂರು ರಾಣಿ ಚನ್ನಮ್ಮ ವೃತ್ತ ಬಳಿ ಸುಸಜ್ಜಿತ ಕಟ್ಟಡಕ್ಕೆ ಸ್ಥಳಾಂತರಗೊಂಡಿದ್ದು, ಗ್ರಾಹಕರು ಬ್ಯಾಂಕಿನೊಂದಿಗೆ ಸಹಕರಿಸಬೇಕೆಂದು ಕೋರಿದರು.
ಶಾಖಾ ವ್ಯವಸ್ಥಾಪಕ ಶ್ರೀನಿವಾಸ ನಾಯ್ಡು, ಸಹಾಯಕ ವ್ಯವಸ್ಥಾಪಕ ಚಂದ್ರಶೇಖರ ರಾಠೋಡ, ಶ್ಯಾಮ ಸುಂದರ, ವಿನೋದಕುಮಾರ, ಭವಾನಿ ಪ್ರಸಾದ, ಅಂಭಾಜಿ ಪವಾರ, ಗೂಳಪ್ಪ ವಡ್ಡೋಡಗಿ, ಗುರುರಾಜ ಅಡಕಿ, ಸಾಯಿನಾಥ ನಾಯ್ಕ್, ಮಾಹಾಂತೇಶ ಮಾಗಣಗೇರಿ, ಪ್ರಜ್ವಲ್ ಅಡಕಿ, ರಾಜಶೇಖರ ಜಂಬಗಿ ಪಾಲ್ಗೊಂಡಿದ್ದರು.