ಧರ್ಮಸಮ್ಮತ- ನಿಷಿದ್ಧ

1-683899f7e0418
Published on
ಪ್ರವಾದಿ(ಸ) ಮಹಮದ್ ಪ್ರಜೆಗಳಿಗೆ ನ್ಯಾಯ ದೊರಕಿಸಿಕೊಡಲು ಹಲವಾರು ಬಗೆಯಲ್ಲಿ ಪ್ರಯತ್ನಿಸುತ್ತಿದ್ದರು. ಒಮ್ಮೆ ಅವರು ಹೀಗೆ ಹೇಳಿದರು: ಮೂರು ಬಗೆಯ ಜನರ ವಿರುದ್ಧ ತಾನು ನಿರ್ಣಾಯಕ ದಿನದಂದು ಮೊಕದ್ದಮೆ ಹೂಡುವೆನೆಂದು ಅಲ್ಲಾಹನು ಹೇಳುತ್ತಾನೆ.

1. ನನ್ನ ಹೆಸರಿನಲ್ಲಿ ಯಾರಾದರೂ ಬಂದು ಒಪ್ಪಂದ ಮಾಡಿ, ಅದನ್ನು ಸಕಾರಣವಿಲ್ಲದೆ ಮುರಿಯುವವರು. 2. ಒಬ್ಬ ಸ್ವತಂತ್ರ, ಸಜ್ಜನ ವ್ಯಕ್ತಿ ಯನ್ನು ಅಪಹರಿಸಿ, ಆತನನ್ನು ಗುಲಾಮನನ್ನಾಗಿಸಿ ಮಾರುವವರು. 3. ಕಾರ್ವಿುಕರನ್ನು ನೇಮಿಸಿ, ಅವರಿಂದ ಪೂರ್ಣಸೇವೆ ಪಡೆದುಕೊಂಡು, ಮಜೂರಿ(ಕೂಲಿ) ನೀಡದವರು. ಸುಳ್ಳು ಆಣೆ ಹಾಕುವುದು ಯಾವಾ ಗಲೂ ಕೆಟ್ಟಚಾಳಿಯೇ. ಆದರೆ ಮಸೀದಿಯಲ್ಲಂತೂ ಅದು ಮತ್ತಷ್ಟು ಕೆಟ್ಟದಾಗಿದೆ.

ಏಕೆಂದರೆ ಅಸರ್ ನಮಾಜಿನಲ್ಲಿ (ಐದು ಗಂಟೆ ಸಮಯ) ದೇವಚರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ಆದ್ದರಿಂದ ಅವರೆಲ್ಲರ ಎದುರು ಸುಳ್ಳು ಆಣೆ ಹಾಕಿದಂತಾಗುತ್ತದೆ. ಅವರೆಲ್ಲರೂ ಒಬ್ಬ ಮುಸ್ಲಿಮನ ಸ್ವತ್ತನ್ನು ಕಬಳಿಸಲು ತಮ್ಮ ಮುಂದೆ ಸುಳ್ಳು ಆಣೆ ಹಾಕಲಾಗಿದೆ ಎಂದು ಸಾಕ್ಷಿ ಹೇಳುವವರು. ಮಾನವ ದಿನನಿತ್ಯ ಬಳಸುವ ಪದಾರ್ಥ-ವಸ್ತುಗಳಲ್ಲಿ ಧರ್ಮಸಮ್ಮತ ವಸ್ತುಗಳೂ ಧರ್ಮ ನಿಷಿದ್ಧ ವಸ್ತುಗಳೂ ಇವೆ.

ಆರೋಗ್ಯದ ದೃಷ್ಟಿಯಿಂದ ಇದು ಸರಿಯಾದ ವಿಚಾರವೇ ಆಗಿದೆ. ಅವುಗಳ ಮಧ್ಯೆ ಇರಬಹುದಾದ ಸಂದೇಹಾಸ್ಪದ ವಸ್ತುಗಳನ್ನು ವರ್ಜಿಸುವವರು ದೊಡ್ಡ ಪಾಪಗಳಿಂದ ಮುಕ್ತರಾಗುವರು. ಯಾರು ಸಂದೇಹಾಸ್ಪದ ಪಾಪಗಳನ್ನು ಮಾಡುವ ಧೈರ್ಯ ತೋರು ವನೋ ಅವನು ಪಾಪಗಳಲ್ಲಿ ಸಿಲುಕುವ ಸಂಭವವಿದೆ. ಪಾಪಗಳು ಅಲ್ಲಾಹನ ನಿಷಿದ್ಧ ಮೇರೆಗಳಾಗಿವೆ. ಅವುಗಳಲ್ಲಿ ಪ್ರವೇಶಿಸುವುದು ಅಪರಾಧವೇ ಸರಿ. ಒಟ್ಟಾರೆ ಇದರ ತಾತ್ಪರ್ಯವೇನೆಂದರೆ ಧರ್ಮಸಮ್ಮತವೆಂದೋ, ನಿಷಿದ್ಧ ವೆಂದೋ ಅಸ್ಪಷ್ಟವಾದ ಕೆಲ ವಸ್ತುಗಳು ಅರ್ಧಭಾಗ ಧರ್ಮಸಮ್ಮತ ವೆಂಬಂತೆಯೂ, ನಿಷಿದ್ಧವೆಂಬಂತೆಯೂ ತೋರುತ್ತವೆ.

ಇಂತಹ ಸಂದರ್ಭಗಳಲ್ಲಿ ಅವುಗಳ ಹತ್ತಿರವೂ ಸುಳಿಯದಿರುವುದು ಸತ್ಯ ವಿಶ್ವಾಸಿಯ ಮಟ್ಟಿಗೆ ಶ್ರೇಯಸ್ಕರ. ಒಟ್ಟಾರೆ ಸಂದೇಹಾಸ್ಪದ ವಸ್ತುಗಳನ್ನು ತೊರೆಯ ಬೇಕೆಂಬುದೇ ಈ ಚಿಂತನೆಯ ಸಾರ, ಮಾನವನ ನಡೆವಳಿಕೆಯಲ್ಲಿ ಇವು ಕಂಡುಬರುವವು ಎಂಬುದು ಈ ಹದೀಸ್​ನ ಬೋಧನೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net