ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೇ: 2 ತಿಂಗಳ ನಂತರ ಬಾಗಿಲು ತೆರೆದ ಧಾರ್ಮಿಕ ಶ್ರದ್ಧಾಕೇಂದ್ರಗಳು

Published on

ನವದೆಹಲಿ: ಕೋವಿಡ್-19 ಲಾಕ್​ಡೌನ್ ಕಾರಣಕ್ಕೆ ಎರಡು ತಿಂಗಳ ಕಾಲ ಮುಚ್ಚಿದ್ದ ಎಲ್ಲ ಧಾರ್ಮಿಕ ಶ್ರದ್ಧಾಕೇಂದ್ರಗಳು ಇಂದು ಮುಂಜಾನೆಯೇ ಬಾಗಿಲು ತೆರೆದು ಭಕ್ತರಿಗೆ ದರ್ಶನ, ಸೇವೆಗೆ ಅನುಕೂಲ ಮಾಡಿಕೊಟ್ಟಿವೆ. ಆದರೆ, ಸ್ಟಾಂಡರ್ಡ್​ ಆಪರೇಟಿಂಗ್ ಪ್ರೊಸೀಜರ್​ (ಎಸ್​ಒಪಿ)ಯನ್ನು ಎಲ್ಲರೂ ಪಾಲಿಸಬೇಕಾದ್ದು ಕಡ್ಡಾಯ.

ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ, ದೇವಸ್ಥಾನಗಳು, ಚರ್ಚ್​, ಮಸೀದಿ ಮತ್ತು ಇತರೆ ಧಾರ್ಮಿಕ ಶ್ರದ್ಧಾಕೇಂದ್ರಗಳಲ್ಲಿ ಭಕ್ತರು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕರೊನಾ ಸೋಂಕು ತಡೆಯುವ ದೃಷ್ಟಿಯಿಂದ ಅತೀಅವಶ್ಯ. ತೀರ್ಥ, ಪ್ರಸಾದ ವಿತರಣೆಗೆ ಅವಕಾಶವಿಲ್ಲ. ಬಹುತೇಕ ಧಾರ್ಮಿಕ ಶ್ರದ್ಧಾಕೇಂದ್ರಗಳಲ್ಲಿ ಭಕ್ತರು ಒಳಪ್ರವೇಶಿಸುವ ಮೊದಲೇ ಅವರನ್ನು ಸ್ಯಾನಿಟೈಸ್ ಮಾಡುವುದಕ್ಕೆ ವ್ಯವಸ್ಥೆ ಮಾಡಲಾಗಿದೆ.

ಶಿರ್ಡಿ ಸೇರಿ ದೇಶದ ನಾನಾ ಭಾಗಗಳ ದೇವಸ್ಥಾನಗಳು ಭಕ್ತರಿಗೆ ತೆರೆದುಕೊಂಡಿರುವ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಆಗಿದ್ದು, ಗಮನಸೆಳೆಯುತ್ತಿವೆ. ಎಲ್ಲ ಕಡೆಯೂ ಸಾಮಾಜಿಕ ಅಂತರ ಮತ್ತು ಇತರೆ ಕೋವಿಡ್ ನಿಯಮಗಳನ್ನು ಪಾಲಿಸುತ್ತಿರುವುದು ಕಂಡುಬಂದಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net