ಜೀವನ ಸಾರ್ಥಕ್ಯಕ್ಕೆ ಧಾರ್ವಿುಕತೆ ಅಗತ್ಯ

Untitled design (8)
Published on

ಶೃಂಗೇರಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಆಶೀರ್ವಚನ

ಹಿಂದು ಧರ್ಮದಲ್ಲಿ ದೇವಸ್ಥಾನಗಳಿಗೆ ಅಪಾರ ವೈಶಿಷ್ಟ್ಯದೆ. ಶಾಸ್ತ್ರೋಕ್ತವಾಗಿ, ನಿಯಮಬದ್ಧವಾಗಿ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡುವುದರಿಂದ ದೈವತ್ವ ಶಕ್ತಿ ಮರುಸ್ಥಾಪನೆಯಾಗುತ್ತದೆ ಎಂದು ಶೃಂಗೇರಿ ಶಾರದಾ ಪೀಠದ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದರು.

ಪಾಲಿಕೊಪ್ಪದಲ್ಲಿ ನೂತನವಾಗಿ ನಿರ್ವಣಗೊಂಡಿರುವ ಶ್ರೀ ಶಿವಶಕ್ತಿ ಧಾಮದ ಲೋಕಾರ್ಪಣೆ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ದೇವಾಲಯದಲ್ಲಿ ಪ್ರಾಣಪ್ರತಿಷ್ಠಾಪನೆಗೊಂಡ ಶಿವಲಿಂಗಕ್ಕೆ ‘ಆನಂದೇಶ್ವರ’, ವಿನಾಯಕನಿಗೆ ‘ವಿಜಯ ಗಣಪತಿ’ ಹಾಗೂ ಪಾರ್ವತಿಗೆ ‘ಜ್ಞಾನಾಂಬಿಕೆ’ ಎಂದು ನಾಮಕರಣ ಮಾಡಲಾಗಿದೆ ಎಂದು ವಿವರಿಸಿದರು.

ಉಪನಿಷತ್​ಗಳಲ್ಲಿ ಹೇಳಿದಂತೆ ಪರಮಾತ್ಮನ ಸಚ್ಚಿದಾನಂದ ಸ್ವರೂಪವೇ ಆನಂದೇಶ್ವರ. ಮೊದಲ ಪೂಜಿತ ದೇವರು ಗಣೇಶ, ಹೀಗಾಗಿ ವಿಜಯ ಗಣಪತಿ ಹಾಗೂ ನಮಗೆ ಎಲ್ಲಕ್ಕೂ ಮೂಲ ಕೇಂದ್ರವಾದ ಜ್ಞಾನ ಮೂಲವಾಗಿರುವುದರಿಂದ ಜ್ಞಾನಾಂಬಿಕೆ ಎಂದು ನಾಮಕರಣ ಮಾಡಲಾಗಿದೆ. ದೇವರೊಬ್ಬನೇ ನಾಮ ಹಾಗೂ ರೂಪ ಬೇರೆ ಬೇರೆ ಎಂದರು.

ಸನಾತನ ಧರ್ಮದಲ್ಲಿ ಅನೇಕ ಆಚರಣೆಗಳಿವೆ. ಅದಕ್ಕೆ ಕಾರಣಗಳೂ ಹಲವು ಇವೆ. ನೈಜ ಧರ್ಮದ ಬಗೆಗೆ ಗೊತ್ತಿಲ್ಲದಿದ್ದರೆ ವೇದಶಾಸ್ತ್ರಗಳಲ್ಲಿ ಪ್ರಮಾಣಪೂರ್ವಕವಾಗಿ ಇರುವ ಆಚರಣೆಗಳನ್ನು ಅರ್ಥೈಸಿಕೊಂಡು ಮುನ್ನಡೆಯಬೇಕು. ಆದಿ ಶಂಕರಾಚಾರ್ಯರು ಕಣ್ಣು ಮುಚ್ಚಿ ಯಾವುದನ್ನೂ ಮಾಡಬೇಡ; ವಿತಂಡ-ಕುತರ್ಕ, ಆಕ್ಷೇಪವೂ ಬೇಡ ಎಂದು ವಿವರಿಸಿದ್ದಾರೆ.

ಅಲ್ಲದೆ, ದೇವರ ಹೆಸರಲ್ಲಿ ಆಗುತ್ತಿದ್ದ ವಾಗ್ಯುದ್ಧಗಳನ್ನು ಸರಿಪಡಿಸಿ, ಐಕ್ಯಮತ ಸಾಧಿಸಿದ್ದಾರೆ. ಸನಾತನ ಧರ್ಮವು ಹೂವಿನ ಹಾರವಿದ್ದಂತೆ. ವಿವಿಧ ಸಂಪ್ರದಾಯ, ಪರಂಪರೆಗಳು ಹೂವುಗಳಿದ್ದಂತೆ. ಇವುಗಳನ್ನು ಒಂದುಗೂಡಿಸುವ ದಾರವು ಅದ್ವೈತ ಸಿದ್ಧಾಂತ. ಶಂಕರಾಚಾರ್ಯ ಸಿದ್ಧಾಂತವನ್ನು ಆಧಾರವಾಗಿಟ್ಟುಕೊಂಡಾಗ ಮಾತ್ರ ನಮ್ಮ ಸನಾತನ ಧರ್ಮಕ್ಕೆ ಮಹತ್ವಪೂರ್ಣವಾದ ಅರ್ಥ ಬರುತ್ತದೆ. ಉಪನಿಷತ್ ಸಿದ್ಧಾಂತ ಇಟ್ಟುಕೊಂಡು ಶಂಕರಾಚಾರ್ಯರು ಜನರಿಗೆ ಉಪದೇಶ ನೀಡಿದರು. ದೇಶಾದ್ಯಂತ ಸಂಚರಿಸಿ ನಮ್ಮಲ್ಲಿರುವ ಒಡಕು ಹೋಗಲಾಡಿಸಿ ಒಂದುಗೂಡಿಸಿದರು ಎಂದರು.

ಅವರವರ ಕರ್ತವ್ಯಗಳು ಬೇರೆ ಬೇರೆ. ಅದನ್ನು ಹೇಗೆ ಮಾಡಬೇಕೆಂಬುದನ್ನು ನಾವು ಮೊದಲು ಅರಿತುಕೊಳ್ಳಬೇಕು. ಧಾರ್ವಿುಕ ಮತ್ತು ಲೌಕಿಕ ಕರ್ತವ್ಯಗಳು ಬೇರೆ. ಜೀವನ ನಡೆಸಲು ಲೌಕಿಕ ಕಾರ್ಯ ಅಗತ್ಯ. ಜೀವನ ಸಾರ್ಥಕಗೊಳಿಸಲು ಧಾರ್ವಿುಕ ಕಾರ್ಯ ಮಾಡಬೇಕು. ಎಲ್ಲರೂ ಈ ತೆರನಾಗಿ ತಮ್ಮ ಕರ್ತವ್ಯ ಮಾಡಿದರೆ, ಸನಾತನ ಧರ್ಮವು ನಿಯಮಾನುಸಾರ ನಡೆಯುತ್ತದೆ. ಧರ್ಮ ಶ್ರೇಷ್ಠವಾದದು ಎಂಬುದನ್ನು ಯಾರೂ ಮರೆಯುವಂತಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net