ಹೆಡಗೇವಾರ್‌ ಸ್ಮಾರಕದೊಳಗೆ ನಾನು ಹೋಗಿದ್ದ ವಿಡಿಯೋ ರಿಲೀಸ್ ಮಾಡಿ: ಬಿಜೆಪಿಗೆ ಸವಾಲು ಹಾಕಿದ ಗೂಳಿಹಟ್ಟಿ

goolihatti
Published on

ಚಿತ್ರದುರ್ಗ: ಹೆಡಗೇವಾರ್‌ ಸ್ಮಾರಕದೊಳಗೆ ನಾನು ಹೋಗಿದ್ದ ವಿಡಿಯೋ ರಿಲೀಸ್ ಮಾಡಿ ಎಂದು ಬಿಜೆಪಿ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಸವಾಲು ಹಾಕಿದ್ದಾರೆ.

ಆರ್ ಎಸ್ ಎಸ್ ಸಂಸ್ಥಾಪಕ ಹೆಡಗೇವಾರ್‌  ಅವರ ಮ್ಯೂಸಿಯಂ ಪ್ರವೇಶಕ್ಕೆ ದಲಿತ ಅನ್ನುವ ಕಾರಣಕ್ಕೆ ನನ್ನನ್ನು ನಿರಾಕರಿಸಿದ್ದರು ಎಂದು ಬಿಜೆಪಿ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಈ ಹಿಂದೆ ಹೇಳಿದ್ದರು. ಇದಕ್ಕೆ ಬಿಜೆಪಿ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಈಗ ಮತ್ತೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಹೆಡಗೇವಾರ್‌  ಸ್ಮಾರಕದೊಳಗೆ ನಾನು ಹೋಗಿದ್ದ ವಿಡಿಯೋ ರಿಲೀಸ್ ಮಾಡಿ. ವಿಡಿಯೋ ರಿಲೀಸ್ ಮಾಡಿದರೆ ನಿಮ್ಮ ಮನೆಗಳಲ್ಲಿ ಕಸ ಗುಡಿಸುವ ಕೆಲಸ ಮಾಡಿಕೊಂಡಿರುತ್ತೇನೆ ಎಂದು ಗೂಳಿಹಟ್ಟಿ ಶೇಖರ್ ಆಗ್ರಹಿಸಿದ್ದಾರೆ.

ಶಾಸಕ ಗೂಳಿಹಟ್ಟಿ ಶೇಖರ್ ಅವರು ಮಾಡಿದ್ದ ಆರೋಪಕ್ಕೆ ಬಿಜೆಪಿ ನಾಯಕರು ನೀಡಿದ್ದ ಆಕ್ಷೇಪದ ಹೇಳಿಕೆಗಳಿಗೆ ಆಡಿಯೋ ಮೂಲಕ ತಿರುಗೇಟು ನೀಡಿದ್ದಾರೆ. ವಿರೋಧ ಪಕ್ಷದ ನಾಯಕ ಆರ್ ಅಶೋಕ್, ಮಾಜಿ ಶಾಸಕ ಪಿ ರಾಜೀವ್, ಚಲವಾದಿ ನಾರಾಯಣಸ್ವಾಮಿ, ಮತ್ತು ಸುರೇಶ್ ಕುಮಾರ್‌ಗೆ ವಾಟ್ಸಾಪ್‌ ಆಡಿಯೋ ಮೂಲಕ ಸವಾಲು ಹಾಕಿದ್ದಾರೆ.

ಸಿಸಿ ಕ್ಯಾಮರಾ ದೃಶ್ಯ ಇರುತ್ತೆ ಅಲ್ವಾ ರಿಲೀಸ್ ಮಾಡಿ. ರಿಲೀಸ್ ಮಾಡಿದ್ರೆ ನಿಮ್ಮ ಮನೆ ಗೇಟ್ ಕೀಪರ್ ಆಗಿ ಕೆಲಸ ಮಾಡ್ತೇನೆ. ಕೆಲವು ತಿಂಗಳ ಹಿಂದೆ ನಾನು ಈ ವಿಷಯವನ್ನು ಹೇಳಿದ್ದರೆ ಇನ್ನಷ್ಟು ಸೀಟ್ ಕಳೆದುಕೊಳ್ತಿದ್ದರು ಎಂದು ಆಡಿಯೋ ಸಂದೇಶ ಮೂಲಕ ಟಾಂಗ್ ಕೊಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net