ನಾರಾಯಣ ಗೌಡರನ್ನು ಕೂಡಲೇ ಬಿಡುಗಡೆ ಮಾಡಿ

karave
ನಾರಾಯಣ ಗೌಡ ಬಂಧನ ಖಂಡಿಸಿ ಕರವೇ ಕಾರ್ಯಕರ್ತರು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಜ್ಯೋತಿ ಸೋಮಶೇಖರ್, ಆರ್.ಮಂಜು, ನ್ಯಾಮತ್, ಬಾಲಮುರಳಿ, ಶೈಲೇಶ್ ಇತರರಿದ್ದರು.
Published on

ಶಿವಮೊಗ್ಗ: ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ವಿ.ನಾರಾಯಣ ಗೌಡ ಬಂಧನ ಖಂಡಿಸಿ, ಅವರನ್ನು ಕೂಡಲೇ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಕರವೇ ಕಾರ್ಯಕರ್ತರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಟಿ.ಎ.ನಾರಾಯಣಗೌಡ ದಿಟ್ಟತನದಿಂದ ಹೋರಾಟ ಮಾಡುತ್ತಾರೆ. ಅನ್ಯ ಭಾಷೆಯ ನಾಮಲಕಗಳ ವಿರುದ್ಧದ ಹೋರಾಟವನ್ನು ಆರಂಭಿಸಿದಾಗ ಹೋರಾಟಕ್ಕೂ ಅವಕಾಶ ಕೊಡದೇ ಅವರನ್ನು ಬಂಧಿಸಿದ್ದು ಖಂಡನೀಯ. ಕನ್ನಡ ಹೋರಾಟಗಾರರನ್ನು ಜೈಲುಗಟ್ಟುವ ಸ್ಥಿತಿ ಬಂದಿರುವುದು ದುರಂತ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲೂ ಕನ್ನಡೇತರ ಬರಹದ ಫಲಕಗಳಿವೆ. ಸಿಎಂ ಸೂಚನೆಯಂತೆ ಶೇ.60 ನಾಮಫಲಕ ಕನ್ನಡದಲ್ಲೇ ಇರಬೇಕು. ಉದ್ಯಮಿಗಳಿಗೆ ಪರವಾನಗಿ ನೀಡುವ ಸಂದರ್ಭದಲ್ಲೇ ಕನ್ನಡ ನಾಮಫಲಕ ಕಡ್ಡಾಯದ ಬಗ್ಗೆ ಅಧಿಕಾರಿಗಳು ಸೂಚನೆ ನೀಡಬೇಕು ಎಂದು ಆಗ್ರಹಿಸಿದರು.
ಕರವೇ ಜಿಲ್ಲಾಧ್ಯಕ್ಷ ಆರ್.ಮಂಜು, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜ್ಯೋತಿ ಸೋಮಶೇಖರ್, ಪ್ರಮುಖರಾದ ಶೈಲೇಶ್, ಬಾಲಮುರಳಿ, ವಿಜಯ್‌ಕುಮಾರ್, ನ್ಯಾಮತ್ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net