ಪುನರಾರಂಭವಾದ ರಾಮೇಶ್ವರಂ ಕೆಫೆ

Rameshwaram Cafe
Published on

ಬೆಂಗಳೂರು: ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಕುಂದಲಹಳ್ಳಿಯಲ್ಲಿರುವ ರಾಮೇಶ್ವರಂ ಕೆಫೆ ಶನಿವಾರದಿಂದ ಪುನರಾರಂಭಗೊಂಡಿದ್ದು, ಎಂದಿನಂತೆ ಗ್ರಾಹಕರು ತುಂಬಿ ತುಳುಕುತ್ತಿದ್ದರು. ಬೆಳಗ್ಗೆಯಿಂದಲೇ ಜನ ಕೆಫೆಗೆ ಭಾರೀ ಸಂಖ್ಯೆಯಲ್ಲಿ ಬರಲಾಂಭಿಸಿದರು.


ಮುಂಜಾನೆ ೬.೩೦ರ ಸುಮಾರಿಗೆ ರಾಷ್ಟ್ರಗೀತೆ ಹಾಡುವ ಮೂಲಕ ಕೆೆಯನ್ನು ಆರಂಭಿಸಲಾಯಿತು.
ಹೆಚ್ಚಿನ ಭದ್ರತೆಗಾಗಿ ಕೆಫೆಯಲ್ಲಿ ಎರಡು ಮೆಟಲ್ ಡಿಟೆಕ್ಟರ್ ಅಳವಡಿಸಲಾಗಿದ್ದು, ಜತೆಗೆ ಹ್ಯಾಂಡ್ ಡಿಟೆಕ್ಟರ್ ಮೂಲಕ ಕೆಫೆಗೆ ಬರುವ ಪ್ರತಿಯೊಬ್ಬರನ್ನೂ ತಪಾಸಣೆ ನಡೆಸಿ ಒಳಬಿಡಲಾಗುತ್ತಿದೆ.


ಮಾ.೧ ರಂದು ಕೆೆಯಲ್ಲಿ ಬಾಂಬ್ ಸ್ಪೋಟಗೊಂಡು ಹಲವರು ಗಾಯಗೊಂಡು, ಆತಂಕದ ವಾತಾವರಣ ಉಂಟಾಗಿತ್ತು. ಇದೀಗ ಪುನರಾರಂಭಗೊಂಡಿರುವುದರಿಂದ ಕೆೆಗೆ ಆಗಮಿಸುತ್ತಿರುವ ಗ್ರಾಹಕರಲ್ಲಿ ಯಾವುದೇ ಆತಂಕ ಇರಲಿಲ್ಲ. ಮಾಜಿ ಸೈನಿಕರನ್ನು ಭದ್ರತೆಗೆ ನೇಮಿಸಲಾಗಿದ್ದು, ಖುದ್ದು ಹೋಟೆಲ್ ಮಾಲೀಕರು ಮುಂದೆ ನಿಂತು ಸಿಬ್ಬಂದಿಯನ್ನು ಹುರಿದುಂಬಿಸುತ್ತಿದ್ದರು. ಗ್ರಾಹಕರನ್ನು ಬರಮಾಡಿಕೊಳ್ಳುತ್ತಿದ್ದುದು ಕಂಡುಬಂದಿತು. ಬಾಂಬ್ ಸ್ಫೋಟಗೊಂಡು ಕೆಫೆಯಲ್ಲಿ ಹಲವು ವಸ್ತುಗಳು ಹಾನಿಗೊಳಗಾಗಿದ್ದವು. ಎಲ್ಲವನ್ನೂ ಸರಿಪಡಿಸಿ ಶುಕ್ರವಾರವಷ್ಟೇ ಹೋಮ, ಹವನ, ಪೂಜೆ ಮಾಡಿ ಪುನರ್ ಆರಂಭಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಶನಿವಾರ ಬೆಳಿಗ್ಗೆಯಿಂದ ಕೆಫೆ ಪ್ರಾರಂಭವಾಗಿದ್ದು, ನಿರಾತಂಕವಾಗಿ ಗ್ರಾಹಕರು ಬಂದು ಹೋಗುತ್ತಿದ್ದ ದೃಶ್ಯಗಳು ಕಂಡು ಬಂದವು.


ಮರು ವಿನ್ಯಾಸ:
ಎನ್‌ಐಎ, ಎನ್‌ಎಸ್‌ಜಿ, ಸಿಸಿಬಿ ಹಾಗೂ ಇತರೆ ತನಿಖಾ ಸಂಸ್ಥೆಗಳು ಸ್ಥಳ ಮಹಜರು ಹಾಗೂ ಇತರೆ ಸಾಕ್ಷ್ಯಾ ಸಂಗ್ರಹ ಕಾರ್ಯ ಮುಕ್ತಾಯಗೊಳಿಸಿದ ಹಿನ್ನೆಲೆಯಲ್ಲಿ ಹೋಟೆಲ್‌ನ ಮಾಲೀಕ ರಾಘವೇಂದ್ರ ರಾವ್, ಇಡೀ ಹೋಟೆಲ್ ಅನ್ನು ಮರು ವಿನ್ಯಾಸಗೊಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net