ಖ್ಯಾತ ನಟಿ ರೇಖಾ, ತಮ್ಮ ಸೆಕ್ರೆಟರಿ ಜತೆ ಲಿವ್​-ಇನ್​ ರಿಲೇಶನ್​ಶಿಪ್​ನಲ್ಲಿ ಇದ್ದಾರಾ? ವಿವಾದ ಹುಟ್ಟಿಸಿದ ಜೀವನಚರಿತ್ರೆ!

Rekha - Final
Published on

ನವದೆಹಲಿ: ಖ್ಯಾತ ನಟಿ ರೆಖಾರ ವೈಯಕ್ತಿಕ ಜೀವನವನ್ನು ಯಾವಾಗಲೂ ಹದ್ದಿನಗಣ್ಣಿನಿಂದ ವೀಕ್ಷಿಸುವ ಜನರಿದ್ದಾರೆ. ಸೂಪರ್​ಸ್ಟಾರ್ ಅಮಿತಾಬ್ ಬಚ್ಚನ್ ಅವರೊಂದಿಗಿನ ಅವರ ಪ್ರೀತಿಯ ಸಂಬಂಧದ ಬಗ್ಗೆ ಈಗಲೂ ಮಾತನಾಡಲಾಗುರತ್ತದೆ. ಈ ಎಲ್ಲದರ ಮಧ್ಯೆ, ರೆಖಾ ಅವರ ಜೀವನಚರಿತ್ರೆ ಈಗ ಕೆಲವು ಆಘಾತಕಾರಿ ವಿಷಯಗಳನ್ನು ಹೊರಗೆಡವಿದ್ದು, ವಿವಾದಗಳನ್ನು ಹುಟ್ಟಿಸಿದೆ.

ತನ್ನ ಸೆಕ್ರೆಟರಿ ಜತೆ ಲಿವ್-ಇನ್ ಸಂಬಂಧದಲ್ಲಿದ್ರಾ ರೆಖಾ?

ಅವರ ಜೀವನಚರಿತ್ರೆ, ರೆಖಾ: ದಿ ಅನ್ಟೋಲ್ಡ್ ಸ್ಟೋರಿ ಪ್ರಕಾರ, ಅನುಭವಿ ನಟಿ ತನ್ನ ಕಾರ್ಯದರ್ಶಿ ಫರ್ಜಾನಾ ಅವರೊಂದಿಗೆ ಲಿವ್​ ಇನ್ ಸಂಬಂಧದಲ್ಲಿದ್ದಾರೆ. ವರದಿಯ ಪ್ರಕಾರ, ಕಾರ್ಯದರ್ಶಿಯನ್ನು ಹೊರತುಪಡಿಸಿ ಬೇರೆ ಯಾರಿಗೂ ರೆಖಾ ಅವರ ಬೆಡ್​ರೂಮ್​ಗೆ ಪ್ರವೇಶಿಸಲು ಅವಕಾಶವಿಲ್ಲ. “ಫರ್ಜಾನಾ ರೆಖಾಗೆ ಪರಿಪೂರ್ಣ ಸಂಗಾತಿ. ಆಕೆ ರೇಖಾರ ಸಲಹೆಗಾರ್ತಿ, ಸ್ನೇಹಿತೆ ಮತ್ತು ಅವಳ ಬೆಂಬಲಿಗಳೂ ಹೌದು. ರೆಖಾಗೆ ಅವಳಿಲ್ಲದೆ ಬದುಕಲು ಸಾಧ್ಯವಿಲ್ಲ. ವಾಸ್ತವವಾಗಿ, ರೆಖಾ ಅವರ ವಿಶ್ವಾಸಾರ್ಹ ಕಾರ್ಯದರ್ಶಿ ಫರ್ಜಾನಾ ಅವರ ಪ್ರೇಮಿ ಎಂದು ಕೆಲವರು ಹೇಳಿಕೊಂಡಿದ್ದಾರೆ" ಎಂದು ಇ-ಟೈಮ್ಸ್ ಉಲ್ಲೇಖಿಸಿರುವಂತೆ ರೆಖಾ ಅವರ ಜೀವನಚರಿತ್ರೆಯ ಆಯ್ದ ಭಾಗದಲ್ಲಿದೆ.

ಫರ್ಜಾನಾ ರೆಖಾ ಜೀವನ ನಿಯಂತ್ರಿಸುತ್ತಾರಾ?

ಫರ್ಜಾನಾ ರೆಖಾ ಅವರ ಜೀವನ, ಅವರ ದೈನಂದಿನ ವ್ಯವಹಾರಗಳನ್ನು ಮೇಲ್ವಿಚಾರಣೆ ಮಾಡುತ್ತಾರೆ. ಅಷ್ಟೇ ಅಲ್ಲದೇ ನಟಿ ಯಾರೊಂದಿಗೆ ಮಾತನಾಡುತ್ತಿದ್ದಾರೆ ಎಂಬುದರ ಬಗ್ಗೆ ನಿಗಾ ಇಡುತ್ತಾರೆ ಎಂದು ಜೀವನಚರಿತ್ರೆ ಹೇಳಿದೆ. “ ಫರ್ಜಾನಾ ರೆಖಾ ಅವರ ಜೀವನ ಮತ್ತು ಮನೆಗೆ ಯಾರೆಲ್ಲ ಬರುತ್ತಾರೆ, ಹೋಗುತ್ತಾರೆ ಎನ್ನುವುದರ ಕುರಿತಾಗಿ ಬಿಗಿಯಾಗಿ ಮೇಲ್ವಿಚಾರಣೆ ಮಾಡುತ್ತಾರೆ. ಅವಳು ಅಸಾಧಾರಣ ಗೇಟ್ ಕೀಪರ್ ಮತ್ತು ರೆಖಾ ಜೀವನದ ಪ್ರತಿ ನಿಮಿಷ, ಪ್ರತಿ ಫೋನ್ ಕರೆಯನ್ನು ಪರಿಶೀಲಿಸಬೇಕೆಂದು ಹೇಳಲಾಗುತ್ತದೆ"ಎಂದು ಪುಸ್ತಕದಲ್ಲಿ ಬರೆಯಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net