

ನವದೆಹಲಿ: ಲಾಕ್ಡೌನ್ 4.0 ಆರಂಭವಾದ ಬಳಿಕ ರಾಷ್ಟ್ರದಲ್ಲಿ ರೈಲು, ಬಸ್ಗಳ ಸಂಚಾರ ಮರುಆರಂಭವಾಗುವ ಆಶಾಭಾವ ಮೂಡಿತ್ತು. ಆದರೆ, ಭಾರತೀಯ ರೈಲ್ವೆ ಇದಕ್ಕೆ ತಣ್ಣೀರೆರೆಚಿದೆ. ಜೂನ್ 30ರವರೆಗೆ ರೈಲುಗಳ ಸಂಚಾರ ಪುನರಾರಂಭವಾಗುವ ಯಾವುದೇ ಸಾಧ್ಯತೆಗಳಿಲ್ಲ ಎಂದು ಅದು ಸ್ಪಷ್ಟಪಡಿಸಿದೆ.
ಜೂನ್ 30ರವರೆಗಿನ ಎಲ್ಲ ನಿಯಮಿತ ರೈಲುಗಳ ಟಿಕೆಟ್ಗಳೆಲ್ಲವನ್ನೂ ರದ್ದುಗೊಳಿಸಿ, ಮುಂಗಡ ಟಿಕೆಟ್ ಕಾಯ್ದಿರಿಸಿದವರ ಬ್ಯಾಂಕ್ಗಳಿಗೆ ಹಣ ಹಿಂದಿರುಗಿಸಿರುವುದಾಗಿ ಭಾರತೀಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: 77 ಸಾವಿರ ದಾಟಿದ ಕರೊನಾ ಸೋಂಕಿತರ ಸಂಖ್ಯೆ
ಆದರೆ, ಸದ್ಯ ಆರಂಭಿಸಿರುವ 15 ಜೋಡಿ ವಿಶೇಷ ರೈಲು, ಶ್ರಮಿಕ್ ಸ್ಪೆಶಲ್ ರೈಲುಗಳ ಸಂಚಾರ ಅಬಾಧಿತವಾಗಿ ಮುಂದುವರಿಯಲಿದೆ ಎಂದು ಹೇಳಿದ್ದಾರೆ.