ಇನ್ನು ದಲಿತ ಸಮುದಾಯದ ನಿಷೇಽತ ಪದ ಪ್ರಯೋಗ ಮಾಡಿರುವ ವಿಡಿಯೋ ವೈರಲ್ ಬಗ್ಗೆ, ಅದು ಎರಡು ವರ್ಷ ಹಿಂದಿನದ್ದು ಇದ್ದು, ಅದನ್ನು ತಿರುಚಿದ್ದಾರೆ. ಒಂದು ಗುಂಪು, ಪಟ್ಟಭದ್ರ ಹಿತಾಸಕ್ತಿಗಳು ನನ್ನ ವಿರುದ್ಧ ಸಂಚು ಮಾಡುತ್ತಿದ್ದಾರೆ. ನನ್ನ ಬೆಳವಣಿಗೆ ಮತ್ತು ನಾನು ಮಂತ್ರಿ ಆಗಿದ್ದನ್ನು ಅವರಿಗೆ ಸಹಿಸಲು ಆಗುತ್ತಿಲ್ಲ. ಕುತಂತ್ರಿಗಳು ಎಂದ ಬಳಿಕ ಅಲ್ಲಿ ನಮ್ಮ ಪಕ್ಷದವರು, ಬೇರೆಯವರು ಇರಬಹುದು. ಅವರು ಮಂತ್ರಿ ಆಗಿದ್ದಾಗ ನಾನು ಯಾರಿಗೂ ತೊಂದರೆ ಕೊಟ್ಟಿಲ್ಲ. ನಾನು ದ್ವೇಷವನ್ನು ಮಾಡಲ್ಲ. ನನಗೆ ರಾಜ್ಯ ಸರ್ಕಾರ ಜವಾಬ್ದಾರಿ ನೀಡಿದೆ. ಜನರು ಮತ್ತು ಈ ಭಾಗದ ಅಭಿವೃದ್ಧಿ ಪಡಿಸಬೇಕು ಅದನ್ನು ಮಾಡುತ್ತೇನೆ ಎಂದು ಹೇಳಿದರು.