

ಬೆಂಗಳೂರು: ನೀರಿನಾಸರೆಗಳ ಮತ್ತು ನೀರಾವರಿ ಯೋಜನೆಗಳ ಸಮಗ್ರ ದತ್ತಾಂಶಗಳನ್ನು ಸಂಗ್ರಹಿಸಲು ನೀರಾವರಿ ಗಣತಿ ಕೈಗೊಳ್ಳಲಾಗುತ್ತಿದೆ.
ಜಲ ಶಕ್ತಿ ಮಂತ್ರಾಲಯದ ಜಲಸಂಪನ್ಮೂಲ, ನದಿ ವಿಕಾಸ ಮತ್ತು ಗಂಗಾ ಸಂಸ್ಕರಣ ಇಲಾಖೆಯ, ಸಣ್ಣ ನೀರಾವರಿ ಅಂಕಿ-ಅಂಶಗಳ ವಿಭಾಗವು ಪ್ರತಿ 5 ವರ್ಷಗಳಿಗೊಮ್ಮೆ ಕರ್ನಾಟಕವೂ ಸೇರಿ ರಾಷ್ಟ್ರಾದ್ಯಂತ ವಿವಿಧ ನೀರಾವರಿ ಮತ್ತು ನೀರಿನಾಸರೆಗಳ ಗಣತಿಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಗಣತಿ ದತ್ತಾಂಶಗಳು ನೀರಾವರಿ ಇಲಾಖೆಯ ವಿವಿಧ ಯೋಜನೆಗಳ ಮೇಲ್ವಿಚಾರಣೆ ಮತ್ತು ಮೌಲ್ಯ ಮಾಪನಕ್ಕೆ ಸಾಧನಗಳಾಗಿ ಕಾರ್ಯನಿರ್ವಹಿಸುತ್ತವೆ.
ಪ್ರಾದೇಶಿಕ ತರಬೇತಿ ಕಾರ್ಯಾಗಾರವು ಬೆಂಗಳೂರಿನಲ್ಲಿ ಡಿಸೆಂಬರ್ 11 ರಿಂದ 13 ರ ವರೆಗೆ 3 ದಿನಗಳ ಕಾಲ ಜರುಗಿ, ಇದರಲ್ಲಿ ಮೊಬೈಲ್ ಅಪ್ಲಿಕೇಶನ್ ಮೂಲಕ ಗಣತಿ ಪ್ರಪತ್ರಗಳನ್ನು ತುಂಬುವ ಕುರಿತು ವಿಸ್ತೃತ ತರಬೇತಿಯನ್ನು ನೀಡಲಾಯಿತು. ಕರ್ನಾಟಕವೂ ಸೇರಿ ರಾಷ್ಟ್ರಾದ್ಯಂತ ನಾಲ್ಕು ರೀತಿಯ ಗಣತಿಗಳನ್ನು ನಡೆಸಲಾಗುತ್ತದೆ. ಅವುಗಳೆಂದರೆ 7ನೇ ಸಣ್ಣ ನೀರಾವರಿ ಗಣತಿ, 2ನೇ ನೀರಿನಾಸರೆಗಳ ಗಣತಿ, 1ನೇ ಮಧ್ಯಮ ಮತ್ತು ಬೃಹತ್ ನೀರಾವರಿ ಗಣತಿ ಮತ್ತು 1ನೇ ಚಿಲುಮೆಗಳ ಗಣತಿಗಳಾಗಿವೆ.