ಬೆಳಗಾವಿ: ಕಾಂಗ್ರೆಸ್ ನೀಡಿದ ಗ್ಯಾರಂಟಿಯಾದ ಗೃಹಲಕ್ಷ್ಮಿ ಯೋಜನೆಯ 2000 ರೂ. ನೆರವು ಒಂದು ಮನೆಯಲ್ಲಿ ಅತ್ತೆಗೆ ಕೊಡಬೇಕೋ, ಸೊಸೆಗೆ ಕೊಡಬೇಕೋ ಎಂಬ ಪ್ರಶ್ನೆ ಇದೆ. ಆದರೆ, ಮನೆಯಲ್ಲಿ ಹಿರಿಯರಾದ ಅತ್ತೆಗೆ ಪ್ರಾಧಾನ್ಯತೆ ಕೊಡಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅತ್ತೆಯೇ ಮನೆಯ ಯಜಮಾನಿ. ಹಾಗಾಗಿ ಅತ್ತೆಗೆ ಈ ನೆರವು ಸಿಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿ ವೇಳೆ ಅವರು ಮಾತನಾಡಿದರು. ಗೃಹ ಲಕ್ಷ್ಮಿ ಯೋಜನೆ
ಮನೆಯಲ್ಲಿ ಹಿರಿಯರಾದ ಅತ್ತೆಗೆ ಆದ್ಯತೆ ಕೊಡಲಾಗುತ್ತದೆ. ಅತ್ತೆ ಆಶೀರ್ವಾದದಿಂದ ಅದು ಸೋಸೆಗೂ ಮುಟ್ಟಬಹುದು ಎಂದು ಸಮಜಾಯಿಸಿ ನೀಡಿದರು.
ಇದಕ್ಕೆ ಧ್ವನಿಗೂಡಿಸಿದ ಸಚಿವ ಸತೀಶ ಜಾರಕಿಹೊಳಿ, ಅತ್ತೆ ಸೊಸೆಗೆ ಕೊಡಿ ಎಂದು ಹೇಳಿದರೆ ಅವರಿಗೆ ಕೊಡುತ್ತೇವೆ. ಮೊದಲು ಅತ್ತೆಗೆ ಕೊಡುತ್ತೇವೆ. ನಂತರ ಅತ್ತೆ ಪ್ರೀತಿಯಿಂದ ಸೊಸೆಗೆ ಟ್ರಾನ್ಸಫರ್ ಮಾಡಿದರೆ. ಟ್ರಾನ್ಸಫರ್ ಎಂದು ಕೆಳಗಡೆ ಈ ರೀತಿ ಬರೆಯಬೇಕಾಗುತ್ತದೆ ಎಂದು ಹಾಸ್ಯ ಚಟಾಕಿ ಹಾರಿಸಿದರು.