ರೀಲ್ಸ್​ ಹುಚ್ಚು; ಗಂಗಾ ನದಿಯಲ್ಲಿ ಮುಳುಗಿ ಮಹಿಳೆ ಸಾವು| Viral vedeo

reel
Published on

Uttara Kanda| ಸೋಷಿಯಲ್​ ಮೀಡಿಯಾದಲ್ಲಿ ಜನಪ್ರಿಯತೆ ಗಳಿಸಲು ಜನರು ಮಾಡಬಾರದ್ದನ್ನೆಲ್ಲಾ ಮಾಡುತ್ತಾರೆ. ಕೆಲವೊಂದು ಸಲ ತಮ್ಮ ಸುರಕ್ಷತೆಯನ್ನೂ ಸಹ ಲೆಕ್ಕಿಸದೆ ರೀಲ್ಸ್​ ಮಾಡಲು ಮುಂದಾಗುತ್ತಾರೆ. ಇಲ್ಲೊಂದು ಅಂತಹದ್ದೇ ಒಂದು ಪಘಟನೆ ಬೆಳಕಿಗೆ ಬಂದಿದೆ. ಮಹಿಳೆಯೊಬ್ಬರು ರೀಲ್ಸ್​ ಮಾಡುವಾಗ ಗಂಗಾ ನದಿಯಲ್ಲಿ ಕೊಚ್ಚಿ ಹೋಗುತ್ತಿರುವ ಹೃದಯವಿದ್ರಾವಕ ವಿಡಿಯೋವೊಂದು ಬೆಳಕಿಗೆ ಬಂದಿದೆ.

ನೇಪಾಳಿ ಮಹಿಳೆಯೊಬ್ಬರು ತನ್ನ ಕುಟುಂಬದೊಂದಿಗೆ ಉತ್ತರಕಾಶಿಗೆ ಭೇಟಿ ನೀಡಿದ್ದಳು. ಈ ಮಹಿಳೆ ಉತ್ತರಾಖಂಡದ, ಉತ್ತರಕಾಶಿಯ ಮಣಿಕರ್ಣಿಕಾ ಘಾಟ್‌ನಲ್ಲಿರುವ ಗಂಗಾ ನದಿಯಲ್ಲಿ ನಿಂತು, ನೀರಿನ ಬಲವಾದ ಪ್ರವಾಹದ ಹೊರತಾಗಿಯೂ ಕ್ಯಾಮೆರಾಗೆ ಪೋಸ್ ನೀಡಿದ್ದಾಳೆ. ಆದರೆ ಇದಾದ ಕೆಲವೇ ಕ್ಷಣಗಳಲ್ಲಿ ಅವಳು ನೀರಿನ ರಭಸಕ್ಕೆ ಸಿಲುಕಿಕೊಂಡು ನದಿಗೆ ಜಾರಿ ಬಿದ್ದಿದ್ದಾಳೆ. ಕೊನೆಗೆ ನದಿ ನೀರಿನ ರಭಸಕ್ಕೆ ಸಿಲುಕಿ ಆ ಮಹಿಳೆ ಕೊಚ್ಚಿಕೊಂಡು ಹೋಗಿದ್ದಾಳೆ.

ಮುಂದುವರೆದ ಶೋಧಕಾರ್ಯ:

ಈ ಅಪಘಾತದ ನಂತರ ಅಲ್ಲಿದ್ದ ಜನರು ಆಘಾತಕ್ಕೊಳಗಾಗಿದ್ದರು ಹಾಗೆ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಗಲಿಲ್ಲ. ಅಲ್ಲಿನ ಸ್ಥಳೀಯರು ಅಧಿಕಾರಿಗಳಿಗೆ ಮಾಹಿತಿ ನೀಡಿದ ನಂತರ ಅವರು ತ್ವರಿತವಾಗಿ ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ ಮತ್ತು ಸ್ಥಳೀಯ ಪೊಲೀಸರು ದೊಡ್ಡ ಪ್ರಮಾಣದ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಸ್ಥಳಕ್ಕೆ ಬಂದಿದ್ದು, ರಕ್ಷಣಾ ತಂಡದ ವ್ಯಾಪಕ ಪ್ರಯತ್ನಗಳ ಹೊರತಾಗಿಯೂ ಮಹಿಳೆಯ ಶವ ಇನ್ನೂ ಪತ್ತೆಯಾಗಿಲ್ಲ ಎಂದು ಹೇಳಲಾಗಿದೆ.

ಪ್ರವಾಸಿಗರಿಗೆ ಎಚ್ಚರಿಕೆ ಸಂದೇಶ:

(ಏಜೆನ್ಸೀಸ್)

ನದಿ ದಂಡೆಗಳಲ್ಲಿ ಮತ್ತು ಇತರ ಅಪಾಯಕಾರಿ ಪ್ರದೇಶಗಳಲ್ಲಿ ತೀವ್ರ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಪ್ರವಾಸಿಗರು ಮತ್ತು ಸ್ಥಳೀಯ ನಿವಾಸಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಸಾಮಾಜಿಕ ಮಾಧ್ಯಮಕ್ಕಾಗಿ ಚಿತ್ರೀಕರಣ ಮಾಡುವಾಗ ಸುರಕ್ಷತಾ ನಿಯಮಗಳನ್ನು ನಿರ್ಲಕ್ಷಿಸುವುದು ಮಾರಕ ಪರಿಣಾಮಗಳಿಗೆ ಕಾರಣವಾಗಬಹುದು ಎಂಬ ಕಾರಣದಿಂದ ಈ ಎಚ್ಚರಿಕೆ ಸಂದೇಶ ರವಾನಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net