'ಸಗಣಿ ಲೇಪಿಸುವುದರಿಂದ ತಂಪಾಗಿರುತ್ತದೆ ಎನ್ನುವುದಾದರೆ, ನಿಮ್ಮ ಕಚೇರಿಗೆ ಎ.ಸಿ. ಯಾಕೆ? ಕ್ಲಾಸ್​ರೂಮ್​​ ಗೋಡೆಗಳಿಗೆ ಸಗಣಿ ಬಳಿದ ಪ್ರಾಂಶುಪಾಲರ ಕಚೇರಿಗೂ ಸಗಣಿ!  Cow Dung

Delhi College Principal
Published on

ನವದೆಹಲಿ: ದೆಹಲಿ ವಿಶ್ವವಿದ್ಯಾಲಯದ ಲಕ್ಷ್ಮಿಬಾಯಿ ಕಾಲೇಜಿನ ಪ್ರಾಂಶುಪಾಲರು ತರಗತಿಯ ಗೋಡೆಗಳಿಗೆ ಹಸುವಿನ ಸಗಣಿ ಹಚ್ಚುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸರಣಿ ವಿಡಿಯೋಗಳಲ್ಲಿ ಸೆರೆಹಿಡಿಯಲಾದ ದೃಶ್ಯವನ್ನು ಸ್ವತಃ ಪ್ರಾಂಶುಪಾಲರೇ ಕಾಲೇಜಿನ ಅಧ್ಯಾಪಕರಿಗಾಗಿ ರಚಿಸಿದ ವಾಟ್ಸ್​ಆ್ಯಪ್​ ಗ್ರೂಪ್​ನಲ್ಲಿ ಹಂಚಿಕೊಂಡಿದ್ದಾರೆ.  ಈ ವಿಡಿಯೋ ವೂರಲ್​ ಆಗುತ್ತಿದ್ದಂತೆ. ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆ (ಡಿಯುಎಸ್‌ಯು) ಅಧ್ಯಕ್ಷ ರೋನಕ್ ಖತ್ರಿ ಅವರು ಲಕ್ಷ್ಮೀಬಾಯಿ ಕಾಲೇಜಿನ ಪ್ರಾಂಶುಪಾಲರ ಕಚೇರಿಯ ಗೋಡೆಗೆ ಮಂಗಳವಾರ ಸಗಣಿ ತಟ್ಟುವ ಮೂಲಕ ವಿರೂಪಗೊಳಿಸಿದರು.

'ಸಗಣಿ ಲೇಪಿಸುವುದರಿಂದ ತಂಪಾಗಿರುತ್ತದೆ ಎನ್ನುವುದಾದರೆ, ನಿಮ್ಮ ಕಚೇರಿಗೆ ಎ.ಸಿ. ಏಕೆ ಬೇಕು? ಸಗಣಿಯನ್ನೇ ಬಳಿಯುತ್ತೇವೆ' ಎಂದು ಪ್ರಾಂಶುಪಾಲರ ಕಚೇರಿಯ ಗೋಡೆಗೆ ಹಸುವಿನ ಸಗಣಿ ಅಂಟಿಸಿದರು. ನೀವು ಸಂಶೋಧನೆ ಮಾಡಲು ಬಯಸಿದರೆ, ಅದನ್ನು ನಿಮ್ಮ ಮನೆಯಲ್ಲೇ ಮಾಡಿ' ಎಂದು ಪ್ರಾಂಶುಪಾಲರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಕಾಲೇಜಿನ ಪ್ರಾಂಶುಪಾಲರಾದ ಪ್ರತ್ಯುಷ್ ವತ್ಸಲಾ ಅವರು ತಮ್ಮ ಕಾಲೇಜಿನ ಗೋಡೆಗಳಿಗೆ ಸಗಣಿ ಲೇಪಿಸಿರುವ ವಿಡಿಯೊವೊಂದನ್ನು ಏ. 13ರಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, ಪ್ರಾಂಶುಪಾಲೆ ಪ್ರತ್ಯುಷ್ ವತ್ಸಲಾ ಅವರು ಸಿ ಬ್ಲಾಕ್‌ನಲ್ಲಿರುವ ಕೋಣೆಯ ಗೋಡೆಗಳಿಗೆ ಹಸುವಿನ ಸಗಣಿ ಹಚ್ಚುತ್ತಾ ಕುರ್ಚಿಯ ಮೇಲೆ ನಿಂತಿರುವುದು ಕಂಡುಬರುತ್ತದೆ. ಇದೇ ಸಂದರ್ಭದಲ್ಲಿ ಕಾಲೇಜು ಸಿಬ್ಬಂದಿ ಅವರಿಗೆ ಸಹಾಯ ಮಾಡುತ್ತಿರುವುದನ್ನು ಸಹ ವಿಡಿಯೋದಲ್ಲಿ ನೋಡಬಹುದು.

ಈ ಬಗ್ಗೆ ಗ್ರೂಪ್​ನಲ್ಲಿ ಬರೆದುಕೊಂಡಿರುವ ಪ್ರಾಂಶುಪಾಲರು, ಸಿ ಬ್ಲಾಕ್‌ನಲ್ಲಿ ಶಾಖದ ಬಗ್ಗೆ ಕೇಳಿಬಂದ ದೂರುಗಳನ್ನು ಪರಿಹರಿಸಲು ದೇಸಿ ವಿಧಾನಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಇಲ್ಲಿ ತರಗತಿಗಳನ್ನು ನಡೆಸುತ್ತಿರುವವರಿಗೆ ಶೀಘ್ರದಲ್ಲೇ ಅಲ್ಲಿನ ಕೊಠಡಿಗಳು ಹೊಸ ರೂಪದಲ್ಲಿ ಸಿಗುತ್ತವೆ. ನಿಮ್ಮ ಬೋಧನಾ ಅನುಭವವನ್ನು ಹೆಚ್ಚು ಆರಾಮದಾಯಕವಾಗಿಸಲು ಎಲ್ಲ ಪ್ರಯತ್ನಗಳು ನಡೆಯುತ್ತಿವೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net