ಕೃಷಿ ವೆಚ್ಚ ತಗ್ಗಿಸುವುದು ಒಳಿತು

eruvakki krushi vv programme
ಶಿಕಾರಿಪುರ ತಾಲೂಕಿನ ಹಳೇಮುಗಳಗೆರೆ ಗ್ರಾಮದಲ್ಲಿ ಅರಣ್ಯ ಕೃಷಿ ವಿಷಯ ಕುರಿತು ಗುಂಪು ಚರ್ಚೆಯಲ್ಲಿ ಪಾಲ್ಗೊಂಡಿದ್ದ ಡಾ. ಮಹೇಶ್ವರಪ್ಪ, ಡಾ. ಸತೀಶ್, ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು.
Published on

ಶಿವಮೊಗ್ಗ: ಅರಣ್ಯವನ್ನು ಅಪ್ಪಿಕೊಳ್ಳುವ ಮೂಲಕ ಸಾವಯವ ಮತ್ತು ನೈಸರ್ಗಿಕ ಕೃಷಿಗೆ ಒತ್ತು ನೀಡಬೇಕಿದೆ ಎಂದು ಶಿವಮೊಗ್ಗ ಕೃಷಿ ವಿಜ್ಞಾನಗಳ ಮಹಾವಿದ್ಯಾಲಯದ ಕೃಷಿ ಅರಣ್ಯ ಪ್ರಾಧ್ಯಾಪಕ ಡಾ. ಮಹೇಶ್ವರಪ್ಪ ಹೇಳಿದರು.

ಶಿಕಾರಿಪುರ ತಾಲೂಕಿನ ಹಳೇಮುಗಳಗೆರೆ ಗ್ರಾಮದಲ್ಲಿ ಇರುವಕ್ಕಿಯ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗದ ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ ಆಶ್ರಯದಲ್ಲಿ ಅರಣ್ಯ ಕೃಷಿ ವಿಷಯದ ಕುರಿತು ಗುಂಪು ಚರ್ಚೆಯಲ್ಲಿ ಮಾತನಾಡಿದರು.

ಅರಣ್ಯ ಕೃಷಿಯೆಂದರೆ ಕೇವಲ ಮರಗಳು ಬೆಳೆಸುವುದಲ್ಲ. ಶ್ರೀಗಂಧ, ರಕ್ತಚಂದನ, ನುಗ್ಗೆ, ಲಿಂಬೆ, ನೆಲ್ಲಿಕಾಯಿ, ನೇರಳೆ, ಹೆಬ್ಬೇವು, ಪೇರಲ ಹೀಗೆ ಬಗೆಬಗೆಯ ಗಿಡಗಳನ್ನು ನೆಡುವುದರಿಂದ ಉತ್ತಮ ಆದಾಯ ಬರುತ್ತದೆ. ಈ ಗಿಡಗಳ ಮಧ್ಯೆದಲ್ಲಿಯೇ ಮಿಶ್ರಬೆಳೆ ಹಾಕಬಹುದು. ಭೂಮಿ ಫಲವತ್ತಾಗಿಲ್ಲ ಮತ್ತು ಕೃಷಿಯಲ್ಲಿ ಆದಾಯ ಇಲ್ಲವೆಂದು ರೈತರು ಕೊರಗಬಾರದು. ಇಂದು ಸರ್ಕಾರದಿಂದ ಸಾಕಷ್ಟು ಸೌಲಭ್ಯಗಳು ಸಿಗುತ್ತಿವೆ. ಇವುಗಳನ್ನು ಸದ್ಬಳಕೆ ಮಾಡಿಕೊಂಡು ಕೃಷಿ ಅರಣ್ಯ ಮಾಡಿ ಕೈತುಂಬ ಸಂಪಾದನೆ ಮಾಡಬಹುದು ಎಂದು ಸಲಹೆ ನೀಡಿದರು.

ರೈತರು ಕೃಷಿಗಾಗಿ ಸಾಕಷ್ಟು ವೆಚ್ಚ ಮಾಡುತ್ತಿದ್ದು, ಇದನ್ನು ಕಡಿಮೆ ಮಾಡಬೇಕು. ಆದರೆ ಇಂದು ಕೃಷಿಯಲ್ಲಿ ಮಾಡುವಿಕೆ ಹೋಗಿ ಕೊಂಡುಕೊಳ್ಳುವಿಕೆ ಬಂದಿದೆ. ಬೆಳೆ ಉತ್ಪಾದನೆಗೆ ಬೀಜ, ಗೊಬ್ಬರ, ಔಷಧ ಹೀಗೆ ಎಲ್ಲವನ್ನೂ ಕೊಂಡು ಬೆಳೆಯಬೇಕಾಗಿದೆ. ಆದರೆ ಈ ಹಿಂದೆ ಕೃಷಿಯಲ್ಲಿ ಹೆಚ್ಚು ಖರೀದಿ ಮಾಡುತ್ತಿರಲಿಲ್ಲ. ಹಿಂದೆ ಪೂರ್ವಜರು ಮಾಡಿದಂತೆ ಇಂದು ಕೃಷಿ ಅರಣ್ಯ ಅಳವಡಿಸಿಕೊಂಡರೆ ಕೃಷಿಯಲ್ಲಿ ಹಾನಿಯಾಗುವುದಿಲ್ಲ ಎಂದು ಹೇಳಿದರು.

ಆನ್‌ಲೈನ್ ವಂಚನೆ ಕುರಿತು ಸಂಖ್ಯಾಶಾಸ್ತ್ರದ ಸಹಾಯಕ ಪ್ರಾಧ್ಯಾಪಕ ಡಾ. ಸತೀಶ್ ಮಾತನಾಡಿದರು. ವಿದ್ಯಾರ್ಥಿಗಳು ಆನ್‌ಲೈನ್ ವಂಚನೆ ಕುರಿತು ಕಿರುನಾಟಕ ಪ್ರದರ್ಶಿಸಿ ಗ್ರಾಮಸ್ಥರಲ್ಲಿ ಅರಿವು ಮೂಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net