ಗಮನ ಸೆಳೆದ ‘ರೆಡ್ ಅಂಬಾರಿ’

22
Published on

ನಾಡಹಬ್ಬ ದಸರಾ ಪ್ರಯುಕ್ತ ‘ರೆಡ್‌ಎಫ್ 93.5’ ರೇಡಿಯೋ ಸಂಸ್ಥೆ ಹಮ್ಮಿಕೊಂಡಿ ‘ರೆಡ್ ಅಂಬಾರಿ’ ಕಾರ್ಯಕ್ರಮ ಯಶಸ್ವಿಯಾಗಿದೆ.
ಲೈವ್ ಸ್ಟುಡಿಯೋ ಆನ್ ವೀಲ್ಸ್ ಪರಿಕಲ್ಪನೆಯೊಂದಿಗೆ ನಗರದಲ್ಲಿ ನೆಡೆಯುವ ಎಲ್ಲ ಚಟುವಟಿಕೆಗಳ ಬಗ್ಗೆ ಜನರಿಗೆ ರೇಡಿಯೋ ಮೂಲಕ ಮಾಹಿತಿಯನ್ನು ತಲುಪಿಸಲು ಮತ್ತು ಅದನ್ನು ಹೆಚ್ಚು ಆಕರ್ಷಕವಾಗಿಸುವ ನಿಟ್ಟಿನಲ್ಲಿ ಕಾರ್ಯಕ್ರಮಕ್ಕೆ ಹೆಚ್ಚಿನ ಜನ ಮನ್ನಣೆ ದೊರೆಯಿತು. ರೆಡ್‌ಎಫ್ 93.5’ ರೇಡಿಯೋ ಸಂಸ್ಥೆ ದಸರಾ ಮಹೋತ್ಸವದಲ್ಲಿ ಸತತ 12ನೇ ವರ್ಷ ಆಯೋಜಿಸಿದ್ದ ಕಾರ್ಯಕ್ರಮ ಇದಾಗಿದೆ.

ಸಾಮಾನ್ಯವಾಗಿ ರೇಡಿಯೋ ಚಟುವಟಿಕೆಗಳು ಸ್ಟುಡಿಯೋದ ನಾಲ್ಕು ಗೋಡೆಯ ಒಳಗೆ ನಡೆಯುತ್ತದೆ. ಆದರೆ, ದಸರಾ ಸಂದರ್ಭದಲ್ಲಿ ‘ರೆಡ್‌ಎಫ್ 93.5’ ಸಂಸ್ಥೆಯು ‘ರೆಡ್ ಅಂಬಾರಿ’ ಮೂಲಕ ಸ್ಟುಡಿಯೋವನ್ನು ಜನರ ಬಳಿಗೆ ಕೊಂಡೊಯ್ಯಲಿದೆ. ಅದು ಈ ಬಾರಿಯೂ ಮುಂದುವರೆಯಿತು. ರೆಡ್ ಅಂಬಾರಿಯು 9 ದಿನಗಳ ಕಾಲ ಕಾರ್ಯನಿರ್ವಹಿಸಿ ಯಶಸ್ವಿಯಾಗಿದೆ. ದಸರಾ ಉತ್ಸವದ ಪ್ರಮುಖ ಕಾರ್ಯಕ್ರಮಗಳು ನಡೆಯುವ ಸ್ಥಳಕ್ಕೆ ‘ರೆಡ್ ಅಂಬಾರಿ’ಯು ತೆರಳಿ ಕಾರ್ಯಕ್ರಮದ ಮಾಹಿತಿಯನ್ನು ಜನರಿಗೆ ತಿಳಿಸುವ ಕಾರ್ಯ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಅಲ್ಲದೆ, ಸದರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನರೊಂದಿಗೆ ಮುಖಾಮುಖಿಯಾಗುವ ಮೂಲಕ ದಸರಾ ಕುರಿತು ಅವರ ಅಭಿಪ್ರಾಯಗಳನ್ನು ಸಹ ಸಂಗ್ರಹಿಸುವಲ್ಲಿ ಯಶಸ್ವಿಯಾಯಿತು. ಮುಖ್ಯವಾಗಿ ಆಹಾರ ಮೇಳ, ಫಲಪುಷ್ಪ ಪ್ರದರ್ಶನ, ಯುವ ದಸರಾ, ದಸರಾ ಕ್ರೀಡಾಕೂಟ, ದಸರಾ ವಸ್ತು ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ, ಮಹಿಳಾ ಮತ್ತು ಮಕ್ಕಳ ದಸರಾದ ಕಾರ್ಯಕ್ರಮಗಳು ಜರುಗಿದ ಸ್ಥಳಗಳಿಗೆ ಭೇಟಿ ನೀಡಿ ಪ್ರಚಾರ ನಡೆಸಿತ್ತು.

ಮೊದಲ ದಿನ ‘ರೆಡ್ ಅಂಬಾರಿ’ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ್ ರೆಡ್ಡಿ ಚಾಲನೆ ನೀಡಿದ್ದರು. ನಟಿಯರಾದ ದೀಪಿಕಾ ದಾಸ್, ಪೂನಂ ನಾಯಕ್ ಸೇರಿದಂತೆ ಇತತರು ಭಾಗವಹಿಸಿದ್ದರು.

ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ, ಎಂ.ಎಸ್. ಗೋಲ್ಡ್ ಅಂಡ್ ಡೈಮಂಡ್, ಜಿ 9 ಪ್ರಾಜೆಕ್ಟ್, ಕೆಪಿಆರ್ ಹೋಡೈ, ಅಪೋಲೋ ಆಸ್ಪತ್ರೆ, ಮಹಾಲಕ್ಷ್ಮೀ ಸ್ವೀಟ್ಸ್, ಫೋರ್‌ಫ್ರಂಟ್ ಹೆಲ್ತ್‌ಕೇರ್, ಪ್ಯಾಲೆಸ್ ಹೋಂಡಾ, ಸೈಕಲ್ ಪ್ಯೂರ್ ಅಗರ್‌ಬತ್ತಿ ಸಂಸ್ಥೆಗಳು ಕಾರ್ಯಕ್ರಮಕ್ಕೆ ಸಹಯೋಗ ನೀಡಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net