ಜಾತಿ ಗಣತಿಯಲ್ಲಿ ಕೆಂಬಟ್ಟಿ ಎಂದೇ ದಾಖಲಿಸಿ

Published on

ವಿರಾಜಪೇಟೆ: ಸೆ.22ರಿಂದ ಅ.7ರವರೆಗೆ ಜಾತಿ ಜನಗಣತಿ ನಡೆಯಲಿದ್ದು ಮೂಲ ನಿವಾಸಿ ಕೆಂಬಟ್ಟಿ ಜನಾಂಗದವರು ತಪ್ಪದೆ ತಮ್ಮ ಧರ್ಮವನ್ನು ಹಿಂದು ಮತ್ತು ಜಾತಿಯನ್ನು ಕೆಂಬಟ್ಟಿ, ಉಪಜಾತಿ ಕಾಲಂನಲ್ಲಿ ಯಾವುದು ಇಲ್ಲವೆಂದು, ಭಾಷೆ ಕಾಲಂನಲ್ಲಿ ಕೊಡವ ಭಾಷೆಯೆಂದು ದಾಖಲಿಸಬೇಕೆಂದು ಕೆಂಬಟ್ಟಿ ಮುಖಂಡ ಮಾಜಿ ಸೈನಿಕ ಬಿಲ್ಲರಿ ಕುಟ್ಟಡ ಪ್ರಭು ಮನವಿ ಮಾಡಿದ್ದಾರೆ.

ಕೊಡಗು ಕೆಂಬಟ್ಟಿ ಜನಾಂಗವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾತಿವಾರು ಪಟ್ಟಿಯಲ್ಲಿ ಕೆಂಬಟ್ಟಿ ಎಂದೇ ಗುರುಸಿರುವುದರಿಂದ ಜಾತಿ ಕಾಲಂನಲ್ಲಿ ಕೆಂಬಟ್ಟಿ ಎಂದೇ ದಾಖಲೀಕರಣ ಮಾಡುವುದರಿಂದ ಆರ್ಥಿಕ ಸ್ಥಿತಿಗತಿಗಳ ಅಧಾರದಲ್ಲಿ ಉದ್ಯೋಗ, ಶಿಕ್ಷಣ ಮತ್ತಿತರ ಸೌಲಭ್ಯಗಳಲ್ಲಿ ಸರ್ಕಾರದಿಂದ ವಿನಾಯಿತಿ ಪಡೆಯಲು ಅನುಕೂಲಕರವಾಗಲಿದೆ. ಕೆಂಬಟ್ಟಿ ಜನಾಂಗದ ಸಮಸ್ತರು ಈ ವಿಷಯಗಳನ್ನು ಗಮನದಲ್ಲಿರಿಸಿಕೊಂಡು ಜನಗಣತಿಯಲ್ಲಿ ಭಾಗವಹಿಸಿ ಸ್ಪಷ್ಟ ಮಾಹಿತಿ ನೀಡಿ ಸರ್ಕಾರದ ಗಣತಿ ಕಾರ್ಯದ ಯಶಸ್ಸಿಗೆ ಸಹಕರಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net