ಹಿಂದಿನ ವರ್ಷಗಳಲ್ಲಿ ಮಾನ್ಯತೆ ರದ್ದು: ಮಾನ್ಯತೆ ನವೀಕರಣಕ್ಕೆ ಮತ್ತೆ ಅವಕಾಶ

school-children
Published on

ಬೆಂಗಳೂರು: 2023-24ನೇ ಸಾಲು ಮತ್ತು ಹಿಂದಿನ ಶೈಕ್ಷಣಿಕ ವರ್ಷಗಳಲ್ಲಿ ಮಾನ್ಯತೆ ನವೀಕರಣ ಮಾಡಿಕೊಳ್ಳದ ಖಾಸಗಿ ಮತ್ತು ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಮಾನ್ಯತೆ ನವೀಕರಣ ಮಾಡಿಕೊಳ್ಳಲು ಶಾಲಾ ಶಿಕ್ಷಣ ಇಲಾಖೆಯು ಅವಕಾಶ ನೀಡಿದೆ.

ಒಂದು ಬಾರಿಗೆ ಮಾತ್ರ ಷರತ್ತು ವಿಧಿಸಿ ಅವಕಾಶ ನೀಡಲಾಗಿದೆ. ಈ ಅವಕಾಶವನ್ನು ಬಳಸಿಕೊಂಡು ಶಾಲಾ ಆಡಳಿತ ಮಂಡಳಿಗಳು ಬಾಕಿ ಇರುವ ಅವಧಿಗೆ ಘಟನೋತ್ತರ ಮಾನ್ಯತೆ ಪಡೆಯಲು ಕ್ರಮ ವಹಿಸಬೇಕು. ಈ ಅವಧಿಯ ನಂತರವೂ ಪ್ರಥಮ ಮಾನ್ಯತೆ/ಮಾನ್ಯತೆ ನವೀಕರಣ ಪಡೆದ ಖಾಸಗಿ ಶಾಲೆಗಳಿಗೆ ನೋಂದಣಿ ರದ್ದುಪಡಿಸಲಾಗುತ್ತದೆ ಎಂದು ಶಾಲಾ ಶಿಕ್ಷಣ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.

ಅರ್ಜಿ ಸಲ್ಲಿಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೈಪಿಡಿಯನ್ನು ಮಾನ್ಯತೆ ನವೀಕರಣ ತಂತ್ರಾಂಶದ ಲಾಗಿನ್ ಪುಟದಲ್ಲಿ ಅಳವಡಿಸಲಾಗಿದೆ. ಅರ್ಜಿ ಸಲ್ಲಿಕೆ ಮತ್ತು ಪರಿಶೀಲನೆ ಸಂದರ್ಭದಲ್ಲಿ ಯಾವುದೇ ತಾಂತ್ರಿಕ ಸಮಸ್ಯೆಗಳು ಉಂಟಾದಲ್ಲಿ ಜ್ಝಟ್ಟಜಿಞಚ್ಟಢ್ಚಜಿಃಜಞಜ್ಝಿ.್ಚಟಞ ವಿಳಾಸಕ್ಕೆ ಅಗತ್ಯ ಮಾಹಿತಿ ಸಹಿತ ತಮ್ಮ ಸಮಸ್ಯೆಯನ್ನು ಈ ಮೇಲ್ ಮೂಲಕ ಸಲ್ಲಿಸಬಹುದಾಗಿದೆ.

ವೇಳಾಪಟ್ಟಿ:

ಪ್ರಥಮ ಮಾನ್ಯತೆ/ಮಾನ್ಯತೆ ನವೀಕರಣ ಕೋರಿ ಅರ್ಜಿ ಸಲ್ಲಿಸಲು ಏ.28ರಿಂದ ಮೇ 13ರವರೆಗೆ ಸಮಯ ನೀಡಲಾಗಿದೆ. ಸ್ವೀಕರಿಸಿದ ಅರ್ಜಿಗಳನ್ನು ಇತ್ಯರ್ಥಪಡಿಸಿ ಅರ್ಹರಿಗೆ ಮಾನ್ಯತೆ ನವೀಕರಣ ಪತ್ರವನ್ನು ನೀಡಲು ಅಥವಾ ತಿರಸ್ಕರಿಸಲು ಜೂ.17 ಕೊನೆಯ ದಿನವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net