ಕಡೆಗಣನೆಯಿಂದ ಕೆಂಡವಾದರೆ ಸಚಿನ್​ ಪೈಲಟ್​; ಬಂಡಾಯಕ್ಕೆ ಬುನಾದಿಯಾಗಿದ್ದೇನು?

sachin pilot
Published on

ಜೈಪುರ: ರಾಜಸ್ಥಾನದ ಕಾಂಗ್ರೆಸ್​ ಆಡಳಿತದಲ್ಲಿ ಭುಗಿಲೆದ್ದಿರುವ ಬಂಡಾಯಕ್ಕೆ ಡಿಎಸಂ ಸಚಿನ್​ ಪೈಲಟ್​ನನ್ನು ಕಡೆಗಣಿಸಿದ್ದೇ ಕಾರಣ ಎಂಬುದು ಅವರ ಬೆಂಬಲಿಗರ ವಾದ.

ಸಚಿನ್​ ಪೈಲಟ್​ಗೆ ತನ್ನ ಇಲಾಖೆಯ ಅಧಿಕಾರಿಗಳೊಂದಿಗೆ ಭಾರಿ ಭಿನ್ನಾಭಿಪ್ರಾಯವಿತ್ತು. ಅದರಲ್ಲೂ ಮುಖ್ಯವಾಗಿ ಲೋಕೋಪಯೋಗಿ ಇಲಾಖೆಯಲ್ಲಂತೂ ಇದು ಹೆಚ್ಚಾಗಿತ್ತು ಎಂದು ಹೇಳಲಾಗಿದೆ.

ಜತೆಗೆ, ರಾಜಕೀಯವಾಗಿಯೂ ಹಲವು ಆಕಾಂಕ್ಷೆಗಳು ಈಡೇರಿರಲಿಲ್ಲ. ಪ್ರದೇಶ ಕಾಂಗ್ರೆಸ್​ ಅಧ್ಯಕ್ಷರಾಗಿದ್ದ ಸಚಿನ್​ ಪೈಲಟ್​ 'ಒಬ್ಬ ವ್ಯಕ್ತಿ ಒಂದು ಹುದ್ದೆ' ಅಧ್ಯಕ್ಷ ಹುದ್ದೆಯನ್ನು ತ್ಯಜಿಸಬೇಕಾಗಿತ್ತು. ಆಧರೆ, ಅಧ್ಯಕ್ಷ ಹುದ್ದೆಗೆ ತನ್ನವರನ್ನೇ ತರಬೇಕು ಎಂಬುದು ಸಚಿನ್​ ಪೈಲಟ್​ ಒತ್ತಾಸೆಯಾಗಿತ್ತು ಹಾಗೂ ಪ್ರಮುಖ ಖಾತೆ ಬೇಕು ಎಂದು ಬೇಡಿಕೆ ಇಟ್ಟಿದ್ದರು. ಆದರೆ, ಇದ್ಯಾವುದು ಕೈಗೂಡಿರಲಿಲ್ಲ.

ಸಚಿನ್​ ಪೈಲಟ್​ ಜತೆಗಿನ ಸಿಎಂ ಅಶೋಕ್​ ಗೆಹ್ಲೋಟ್​ ವಿರಸ ಹೆಚ್ಚಾಗುತ್ತಲೇ ಸಾಗಿತ್ತು. ಇದನ್ನು ಪರಿಹರಿಸುವಲ್ಲಿ ಹೈಕಮಾಂಡ್​ ವಿಫಲವಾಗಿತ್ತು ಎಂದು ಬೆಂಬಲಿಗರು ಹೇಳಿದ್ದಾರೆ.

ಇತ್ತೀಚೆಗೆ ನಡೆಸಿದ್ದ ಐಎಎಸ್​, ಐಪಿಎಸ್​ ಅಧೀಕಾರಿಗಳ ವರ್ಗಾವರ್ಗಿಯಲ್ಲಿ ಸಚಿನ್​ ಪೈಲಟ್​ ಬಯಸಿದ್ದ ಒಬ್ಬ ಅಧಿಕಾರಿಯನ್ನು ನೀಡಲಾಗಿರಲಿಲ್ಲ ಎಂದೇ ಹೇಳಲಾಗಿದೆ. ಐಎಎಸ್​, ಐಪಿಎಸ್​ ಅಧಿಕಾರಿಗಳು ದೂರದ ಮಾತು..., ಒಬ್ಬ ತಾಲೂಕು ಮಟ್ಟದ ಅಧಿಕಾರಿಯ ವರ್ಗಾವಣೆ ಅಥವಾ ನಿಯೋಜನೆಗೂ ಪೈಲಟ್​ಗೆ ಅವಕಾಶ ನೀಡಿರಲಿಲ್ಲ ಎಂದೇ ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net