ಅರಣ್ಯ ಇಲಾಖೆ ಅಕ್ರಮ ದಾಖಲೆ ಕೊಟ್ಟರೆ ತನಿಖೆಗೆ ಸಿದ್ಧ ; ಮಾಜಿ ಸಿಎಂ ಕುಮಾರಸ್ವಾಮಿ ಆರೋಪಕ್ಕೆ ಖಂಡ್ರೆ ತಿರುಗೇಟು

Vidhanasoudha
Published on

ಬೆಂಗಳೂರು: ರಾಜ್ಯದಲ್ಲಿ ಅರಣ್ಯ ಇಲಾಖೆಯಲ್ಲಿ ನಡೆದಿದೆ ಎನ್ನಲಾಗಿರುವ ಅಕ್ರಮಗಳ ಬಗ್ಗೆ ಮಾಹಿತಿ, ದಾಖಲೆಗಳನ್ನು ಕೊಟ್ಟರೆ ತನಿಖೆಗೆ ಸಿದ್ಧ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ತಿರುಗೇಟು ನೀಡಿದರು.

ನಾನು ಯಾರಿಗೂ ಸವಾಲು ಹಾಕಲು ಬಯಸುವುದಿಲ್ಲ. ಆದರೆ ನನ್ನ ಇಲಾಖೆ ಪಾರದರ್ಶಕವಾಗಿರಬೇಕು ಎಂದು ಬಯಸುತ್ತೇನೆ. ಅವರು ಸ್ಪಷ್ಟ ದಾಖಲೆ ಒದಗಿಸಿದರೆ ಖಂಡಿತಾ ತನಿಖೆಗೆ ಆದೇಶ ನೀಡಲಾಗುವುದು, ಕ್ರಮ ಜರುಗಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಾನು ಸಚಿವನಾಗಿ ಬಂದ ಕೂಡಲೇ 6 ಮರ ಕಡಿತಲೆಗೆ ಅನುಮತಿ ಕೇಳಿದರೆ 66 ಮರ ಕಡಿಯಲು ಅನುಮತಿ ನೀಡಿದ ಡಿಸಿಎ್ ಚಕ್ರಪಾಣಿ ಅವರನ್ನು ಅಮಾನತು ಮಾಡಿರುತ್ತೇನೆ. ಇನ್ನು ಪರಿಭಾವಿತ ಅರಣ್ಯ ಭೂಮಿಯಲ್ಲಿ ಕಲ್ಲು ಗಣಿಗಾರಿಕೆಗೆ ಅನುಮತಿಗೆ ಶಿಫಾರಸು ಮಾಡಿದ್ದ ಹಾಸನದ ಡಿ.ಸಿ.ಎ್. ಹರೀಶ್ ಅವರನ್ನು ಅಮಾನತು ಮಾಡಿದ್ದೆ. ಇದಾದ ಬಳಿಕ ಬೆಂಗಳೂರು ನಗರದ ಕೊತ್ತನೂರು ಬಳಿ ಸುಮಾರು 500ಕೋಟಿ ಬೆಲೆ ಬಾಳುವ ಅರಣ್ಯ ಜಮೀನನ್ನು ಕಂದಾಯ ಭೂಮಿ ಎಂದು ಪರಿವರ್ತನೆ ಮಾಡಿದ್ದ ಉಪ ವಿಭಾಗಾಧಿಕಾರಿ ಶಿವಣ್ಣ ಮತ್ತು ತಹಸೀಲ್ದಾರ್ ಅಜಿತ್ ರೈ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನೇ ದಾಖಲಿಸಲಾಗಿದೆ. ಈಗ ಹಾಸನದಲ್ಲಿ 66 ಎಕರೆ ಅರಣ್ಯವನ್ನು ಕಂದಾಯ ಜಮೀನು ಎಂದು ಮಂಜೂರು ಮಾಡಿರುವ ಎ.ಸಿ. ಜಗದೀಶ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಸೂಚನೆ ನೀಡಿದ್ದೇನೆ ಎಂದರು.

ಕಡೂರು ತಹಸೀಲ್ದಾರ್ ಆಗಿದ್ದ ಉಮೇಶ್ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅಕ್ರಮವಾಗಿ ಅರಣ್ಯ ಭೂಮಿ ಮಂಜೂರು ಮಾಡಿದ್ದರು ಅವರನ್ನು ಬಂಧಿಸಿ, ಪ್ರಕರಣ ದಾಖಲಿಸಲಾಗಿದೆ. ಹಾಸನ ವಲಯದ ಯಸಳೂರು ವಲಯದಲ್ಲಿ ಅಕ್ರಮ ಮರಗಳ ಕಡಿತಲೆ ಪ್ರಕರಣದಲ್ಲಿ ಆರ್.ಎ್.ಓ. ಜಗದೀಶ್‌ರನ್ನು ಅಮಾನತು ಮಾಡಲಾಗಿದೆ. ನಂದಗೊಂಡನಹಳ್ಳಿ 126 ಮರಗಳ ಅಕ್ರಮ ಕಡಿತಲೆ ಪ್ರಕರಣದಲ್ಲೂ 5 ಜನರ ಅಮಾನತಾಗಿದೆ. ಯಾವುದೇ ಇಂತಹ ಪ್ರಕರಣಗಳು ನನ್ನ ಗಮನಕ್ಕೆ ಬಂದರೂ ನಾನು ಕ್ರಮ ಕೈಗೊಳ್ಳುತ್ತಿದ್ದೇನೆ. ತನಿಖೆ ಮಾಡಿಸುತ್ತಿದ್ದೇನೆ ಎಂದು ವಿವರಿಸಿದರು.

ಕುಮಾರಸ್ವಾಮಿ ಅವರು ಆರೋಪ ಮಾಡಿರುವ ಭದ್ರಾ ವನ್ಯಜೀವಿ ವ್ಯಾಪ್ತಿಯ ತಣಿಗೆಬೈಲು ಗುಡ್ಡದಬೀರನಹಳ್ಳಿ ಗುರುಪುರ ರಾಜ್ಯ ಅರಣ್ಯದ ಮನ್ನಾ ಜಂಗಲಿ ಅರಣ್ಯ ಪ್ರದೇಶದ ಬಫರ್ ಅರಣ್ಯದಲ್ಲಿ ಸಾಗುವಾನಿ ಮರಗಳನ್ನು ಅಕ್ರಮವಾಗಿ ಕಡಿದ ಪ್ರಕರಣದಲ್ಲಿ ಈಗಾಗಲೇ ಉಪ ವಲಯ ಅರಣ್ಯಾಧಿಕಾರಿ ಸುನೀಲ್ ಬಿ.ಎಂ. ಮತ್ತು ಇತರ ಇಬ್ಬರು ಸಿಬ್ಬಂದಿಯ ಅಮಾನತು ಮಾಡಲಾಗಿದೆ ಎಂದರು.

ವೀರಾಜಪೇಟೆಯಲ್ಲಿನ ಪ್ರಕರಣ ಪ್ರಸ್ತಾಪಿಸಿದ್ದಾರೆ. ಐ.ಎ್.ಎಸ್. ಅಧಿಕಾರಿ ಚಕ್ರಪಾಣಿ ಮತ್ತು ಇತರರನ್ನು ಅಮಾನತು ಮಾಡಲಾಗಿದೆ. ಅವರು ನ್ಯಾಯಾಲಯದಲ್ಲಿ ತಡೆಯಾಜ್ಞೆ ಪಡೆದಿದ್ದಾರೆ. ಈ ಸಂಬಂಧ ಇಲಾಖೆ ವಿಚಾರಣೆ ನಡೆಯುತ್ತಿದೆ. ಈ ಸಂಬಂಧ ವರದಿ ಇನ್ನೂ ಸಚಿವಾಲಯಕ್ಕೆ ಬಂದಿಲ್ಲ. ಬಂದ ಕೂಡಲೇ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

ಮರಗಳನ್ನು ಕಡಿದ ಪ್ರಕರಣದಲ್ಲಿ ಸಂಸದ ಪ್ರತಾಪ್ ಸಿಂಹ ಸಹೋದರ ವಿಕ್ರಮ್ ಸಿಂಹರನ್ನು ಬಂಧಿಸಲಾಗಿತ್ತು. ಆದರೆ ಅವರ ಹೆಸರು ಎ್ಐಆರ್‌ನಲ್ಲಿ ಇಲ್ಲದಿರುವುದು ಮೈಸೂರು ಜಿಲ್ಲೆಯಲ್ಲಿ ರಾಜಕೀಯ ಕೆಸರೆರಚಾಟ ನಡೆಯುತ್ತಿದೆ. ಈ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ, ನನ್ನ ಪ್ರಭಾವ ಇರುವುದಿಲ್ಲ ಎಂದು ಈಶ್ವರ ಖಂಡ್ರೆ ಸ್ಪಷ್ಟಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net