ಜ.23ಕ್ಕೆ ಎಸ್‌ಐ 545 ಹುದ್ದೆಗಳ ನೇಮಕಾತಿಗೆ ಮರು ಪರೀಕ್ಷೆ

KIA 1
Published on

ಬೆಂಗಳೂರು: ಸಬ್‌ಇನ್‌ಸ್ಪೆಕ್ಟರ್ 545 ಹುದ್ದೆಗಳ ನೇಮಕಾತಿಗೆ ಮರು ಲಿಖಿತ ಪರೀಕ್ಷೆಯನ್ನು ಜ.23ಕ್ಕೆ ನಿಗದಿಪಡಿಸಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವೇಳಾ ಪಟ್ಟಿ ಪ್ರಕಟಿಸಿದೆ.

ಎಸ್‌ಐ ನೇಮಕಾತಿಯಲ್ಲಿ ಲಿಖಿತ ಪರೀಕ್ಷೆಯಲ್ಲಿ ಹಗರಣ ನಡೆದು ಅಧಿಸೂಚನೆಯನ್ನೇ ಸರ್ಕಾರ ರದ್ಧುಪಡಿಸಿತ್ತು. ಹೈಕೋರ್ಟ್‌ನಲ್ಲಿ ಇತ್ಯಾರ್ಥವಾಗಿ ಕೊನೆಗೀಗ ಜ.23ಕ್ಕೆ ಮರು ಲಿಖಿತ ಪರೀಕ್ಷೆಗೆ ದಿನಾಂಕ ನಿಗದಿಯಾಗಿದೆ.

ಬೆಳಗ್ಗೆ 10.30ರಿಂದ 12ರ ವರೆಗೆ 50 ಅಂಕಗಳ ಪೇಪರ್-1 ಮತ್ತು ಮಧ್ಯಾಹ್ನ 1 ರಿಂದ 2.30ರ ವರೆಗೆ 150 ಅಂಕಗಳಿಗೆ ಪೇಪರ್-2 ಪರೀಕ್ಷೆ ನಡೆಯಲಿದೆ. ಪರೀಕ್ಷಾ ಕೊಠಡಿಗೆ ಜೀನ್ಸ್ ಪ್ಯಾಂಟ್, ಬೆಲ್ಟ್, ಶೂ ಧರಿಸಿ ಮತ್ತು ಕಿವಿ ಅಥವಾ ಬಾಯಿ ಮುಚ್ಚಿಕೊಳ್ಳುವ ಬಟ್ಟೆ ಧರಿಸಿ ಬರದಂತೆ ನಿರ್ಬಂಧ ವಿಧಿಸಿ ಕೆಇಎ ಆದೇಶಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net