ಮರು ಹರಾಜು ತಾತ್ಕಾಲಿಕವಾಗಿ ಮುಂದೂಡಿಕೆ

Published on

ಯಳಂದೂರು: ತಾಲೂಕಿನ ಬಿಳಿಗಿರಿರಂಗನಬೆಟ್ಟದ ವಾಹನ ಪ್ರವೇಶ ಶುಲ್ಕ ವಸೂಲಾತಿ ಹಾಗೂ ಹರಕೆ ಮುಡಿ ತೆಗೆಯುವ ಹಕ್ಕುಗಳ ಮರು ಹರಾಜನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.

ತಾಲೂಕಿನ ಬಿಳಿಗಿರಿರಂಗನಬೆಟ್ಟದ ಬಿಳಿಗಿರಿರಂಗನಾಥಸ್ವಾಮಿ ದೇವಾಲಯದ 2025-26ನೇ ಸಾಲಿನ ವಾಹನ ಪ್ರವೇಶ ಶುಲ್ಕ ವಸೂಲಾತಿ ಹಾಗೂ ಹರಕೆ ಮುಡಿ ತೆಗೆಯುವ ಹಕ್ಕುಗಳ ಬಾಬ್ತುಗಳ ಬಹಿರಂಗ ಮರು ಹರಾಜನ್ನು ಏ.15 ರ ಮಂಗಳವಾರ ಬಿಳಿಗಿರಿ ಭವವನದ ಅಥಿತಿಗೃಹದಲ್ಲಿ ಬೆಳಗ್ಗೆ 11 ಗಂಟೆಗೆ ತಹಸೀಲ್ದಾರ್ ಸಮಕ್ಷಮದಲ್ಲಿ ನಡೆಯಬೇಕಾಗಿತ್ತು. ಆದರೆ, ಕಾರಣಾಂತರದಿಂದ ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಆದ್ದರಿಂದ ಸಾರ್ವಜನಿಕರು ಸಹಕರಿಸಬೇಕೆಂದು ಬಿಳಿಗಿರಿರಂಗನಾಥಸ್ವಾಮಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಮೋಹನ್‌ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net