

ಅಹಮದಾಬಾದ್: ಕರ್ನಾಟಕದ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ (91*ರನ್, 57 ಎಸೆತ, 7 ಬೌಂಡರಿ, 5 ಸಿಕ್ಸರ್), ಯುನಿವರ್ಸಲ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ (46ರನ್, 24 ಎಸೆತ, 6 ಬೌಂಡರಿ, 2 ಸಿಕ್ಸರ್) ಜೋಡಿಯ ಅಬ್ಬರದ ಬ್ಯಾಟಿಂಗ್ ಹಾಗೂ ಎಡಗೈ ಸ್ಪಿನ್ನರ್ ಹರ್‌ಪ್ರೀತ್ ಬ್ರಾರ್ (19ಕ್ಕೆ 3) ಮಾರಕ ದಾಳಿಗೆ ನಲುಗಿದ ಆರ್‌ಸಿಬಿ ತಂಡ ಐಪಿಎಲ್-14ರ ತನ್ನ 7ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಎದುರು 34 ರನ್‌ಗಳಿಂದ ಸೋಲುನುಭವಿಸಿತು. ಆರಂಭಿಕ ನಾಲ್ಕು 4 ಪಂದ್ಯಗಳಲ್ಲೂ ಅಜೇಯ ಸಾಧನೆಯೊಂದಿಗೆ ಮುನ್ನುಗ್ಗುತ್ತಿದ್ದ ವಿರಾಟ್ ಕೊಹ್ಲಿ ಬಳಗಕ್ಕೆ ಕಡೇ ಮೂರು ಪಂದ್ಯದಲ್ಲಿ 2ನೇ ಸೋಲು ಇದಾಗಿದೆ. ಮತ್ತೊಂದೆಡೆ ಸತತ ಸೋಲುಗಳಿಂದ ಕಂಗೆಟ್ಟಿದ್ದ ಕನ್ನಡಿಗ ಅನಿಲ್ ಕುಂಬ್ಳೆ ಮಾರ್ಗದರ್ಶನದ ಪಂಜಾಬ್ ತಂಡಕ್ಕೆ ಈ ಗೆಲುವು ಕೊಂಚ ಸಮಾಧಾನ ತಂದಿದೆ.
ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ತಂಡ 5 ವಿಕೆಟ್‌ಗೆ 179 ರನ್ ಕಲೆಹಾಕಿತು. ಪ್ರತಿಯಾಗಿ ಆರ್‌ಸಿಬಿ ತಂಡ 8 ವಿಕೆಟ್‌ಗೆ 145 ರನ್‌ಗಳಿಸಲಷ್ಟೇ ಶಕ್ತವಾಯಿತು.
ಪಂಜಾಬ್ ಕಿಂಗ್ಸ್: 5 ವಿಕೆಟ್‌ಗೆ 179 (ಕೆ.ಎಲ್.ರಾಹುಲ್ 91*, ಕ್ರಿಸ್ ಗೇಲ್ 46, ಹರ್‌ಪ್ರೀತ್ ಬ್ರಾರ್ 25*, ಕೈಲ್ ಜೇಮಿಸನ್ 32ಕ್ಕೆ 2, ಡೇನಿಯಲ್ ಸ್ಯಾಮ್ಸ್ 24ಕ್ಕೆ 1, ಯಜುವೇಂದ್ರ ಚಾಹಲ್ 34ಕ್ಕೆ 1, ಶಹಬಾಜ್ ಅಹಮದ್ 11ಕ್ಕೆ 1), ರಾಯಲ್ ಚಾಲೆಂಜರ್ಸ್ ಬೆಂಗಳೂರು: 8 ವಿಕೆಟ್‌ಗೆ 145 (ವಿರಾಟ್ ಕೊಹ್ಲಿ 35, ರಜತ್ ಪಾಟಿದಾರ್ 31, ಹರ್ಷಲ್ ಪಟೇಲ್ 31, ಕೈಲ್ ಜೇಮಿಸನ್ 16*, ಹರ್‌ಪ್ರೀತ್ ಬ್ರಾರ್ 19ಕ್ಕೆ 3, ರವಿ ಬಿಷ್ಣೋಯಿ 17ಕ್ಕೆ 2, ರಿಲಿ ಮೆರಿಡಿತ್ 29ಕ್ಕೆ 1, ಮೊಹಮದ್ ಶಮಿ 28ಕ್ಕೆ 1).