ಆನ್​ಲೈನ್ ಪಾವತಿಗೆ ಆರ್​ಬಿಐ ಹೊಸ ನಿಯಮ

RBI
Published on

ಮುಂಬೈ: ಕಾರ್ಡ್ ತಯಾರಕರು ಹಾಗೂ ಬ್ಯಾಂಕುಗಳು ಮಾತ್ರ ಗ್ರಾಹಕರ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್​ಗಳ ಮಾಹಿತಿಯನ್ನು ಸಂಗ್ರಹ ಮಾಡಿಟ್ಟುಕೊಳ್ಳಬಹುದು. ವಿವಿಧ ಪೇಮೆಂಟ್ ಗೇಟ್​ವೇಗಳು, ಆನ್​ಲೈನ್ ಶಾಪಿಂಗ್ ಪೋರ್ಟಲ್​ಗಳು ಕಾರ್ಡ್ ಮಾಹಿತಿಯನ್ನು ತಮ್ಮ ಸರ್ವರ್​ನಲ್ಲಿ ಸಂಗ್ರಹ ಮಾಡುವಂತಿಲ್ಲ ಎಂದು ಆರ್​ಬಿಐ ಸೂಚನೆ ನೀಡಿದೆ.

ಮುಂದಿನ ವರ್ಷ ಜನವರಿ 1ರಿಂದ ಇದು ಜಾರಿಗೆ ಬರಲಿದೆ. ವ್ಯಾಲೆಟ್​ಗಳು, ಆನ್​ಲೈನ್ ಶಾಪಿಂಗ್ ಪೋರ್ಟಲ್​ಗಳು, ವಾಪತಿ ವ್ಯವಸ್ಥೆಗಳು ತಮ್ಮ ಗ್ರಾಹಕರ ಕಾರ್ಡ್ ಸಂಖ್ಯೆಯನ್ನು ಸಂಗ್ರಹ ಮಾಡಿಕೊಂಡಿರುತ್ತವೆ. ಮುಂದಿನ ಬಾರಿ ಅವರು ವ್ಯವಹಾರ ಮಾಡುವಾಗ ಪುನಃ ಕಾರ್ಡ್ ಸಂಖ್ಯೆಯನ್ನು ನಮೂದು ಮಾಡುವ ಅಗತ್ಯ ಇರುವುದಿಲ್ಲ. ಕೇವಲ ಪಾಸ್​ವರ್ಡ್, ಒಟಿಪಿ ಮೂಲಕ ವ್ಯವಹಾರ ನಡೆಸಬಹುದು. ಆದರೆ ಇದರಿಂದ ಗ್ರಾಹಕರ ಡೇಟಾ ಸೋರಿಕೆಯಾಗಿ ವಂಚನೆ ಆಗುವ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಆರ್​ಬಿಐ ಹೊಸ ನಿಯಮ ಜಾರಿಗೆ ಮುಂದಾಗಿದೆ.

ಎಸ್​ಬಿಐ ಕೊಡುಗೆ: ತನ್ನ ಡೆಬಿಟ್ ಕಾರ್ಡ್ ಬಳಕೆದಾರರಿಗೆ ಎಸ್​ಬಿಐ ಹೊಸ ಕೊಡುಗೆ ಘೋಷಿಸಿದೆ. ಇನ್ನು ಎಸ್​ಬಿಐ ಡೆಬಿಟ್ ಕಾರ್ಡ್ ಬಳಕೆ ಮಾಡಿ ವಸ್ತುಗಳನ್ನು ಖರೀದಿಸುವಾಗ ಇಎಂಐ ಸೌಲಭ್ಯ ಸಿಗಲಿದೆ. ಇದು ಆನ್​ಲೈನ್ ಖರೀದಿಗಳಿಗೂ ಅನ್ವಯ ಆಗಲಿದೆ ಎಂದು ಬ್ಯಾಂಕ್ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net