ಇದೇ ಮೊದಲ ಸಲ ಜನರ ವೀಕ್ಷಣೆಗೆ ಲಭ್ಯವಾದ ಆರ್​ಬಿಐ ಚಿನ್ನದ ಗಟ್ಟಿಗಳು

gold
Published on

ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್​ಬಿಐ) ಬಳಿ ಇರುವ ಮೀಸಲು ಚಿನ್ನದ ಗಟ್ಟಿಗಳು ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಾರ್ವಜನಿಕರಿಗೆ ನೋಡಲು ಸಿಕ್ಕಿವೆ. ಜಿಯೊ ಹಾಟ್ ಸ್ಟಾರ್​ನಲ್ಲಿರುವ ‘ಆರ್​ಬಿಐ ಅನ್​ಲಾಕ್ಡ್- ಬಿಯಾಂಡ್ ದಿ ರುಪೀ’ ಎಂಬ ಸಾಕ್ಷ್ಯತ್ರ ಸರಣಿಯಿಂದ ಇದು ಸಾಧ್ಯವಾಗಿದೆ.

ಆರ್​ಬಿಐ ರಹಸ್ಯ ಸ್ಥಳದಲ್ಲಿ ಇಟ್ಟಿರುವ ಮೀಸಲು ಚಿನ್ನದ ಗಟ್ಟಿಗಳನ್ನು ಅಲ್ಪ ಪ್ರಮಾಣದಲ್ಲಿ ಸಾರ್ವಜನಿಕರಿಗೆ ಈ ಸಾಕ್ಷ್ಯತ್ರದಲ್ಲಿ ತೋರಿಸಲಾಗಿದೆ. ಆರ್​ಬಿಐ ಬಳಿ ಸದ್ಯ 870 ಟನ್ ಚಿನ್ನ ಇದೆ. ಒಂದೊಂದು ಗಟ್ಟಿಯೂ 12.5 ಕೆಜಿ ತೂಕವಿದ್ದು, ಕೋಟ್ಯಂತರ ರೂ. ಬೆಲೆ ಬಾಳುತ್ತವೆ. ಲೇಖಕಿ ಜೋಯಾ ಪರ್ವೀನ್ ಈ ಸಾಕ್ಷ್ಯತ್ರ ಸರಣಿಯ ನಿರ್ದೇಶಕಿ. ಮೊದಲ ಸೀಸನ್​ನಲ್ಲಿ 4 ಎಪಿಸೋಡ್ ಇದ್ದು, ಆರ್​ಬಿಐ ಕಾರ್ಯಚಟುವಟಿಕೆ ಬಗ್ಗೆ ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net