ಎರಡು ಸಾವಿರ ಮುಖಬೆಲೆಯ ನೋಟುಗಳ ವಿನಿಮಯಕ್ಕೆ ಗಡುವು ವಿಸ್ತರಿಸಿದ ಆರ್​ಬಿಐ

Two Thousand Rupees Note
Published on

ನವದೆಹಲಿ: ಈಗಾಗಲೇ ಚಲಾವಣೆಯಿಂದ ಹಿಂಪಡೆಯಪಾಗಿರುವ ಎರಡು ಸಾವಿರ ರೂಪಾಯಿ ಮುಖಬೆಲೆಯ ನೊಟುಗಳನ್ನು ಮರಳಿಸಲು ಅಥವಾ ವಿನಿಮಯ ಮಾಡಲು ನೀಡಲಾಗಿದ್ದ ಗಡುವನ್ನು ಭಾರತೀಯ ರಿಸರ್ವ್​ ಬ್ಯಾಂಕ್ (RBI) ಅಕ್ಟೋಬರ್​ 7ರವರೆಗೂ ವಿಸ್ತರಿಸಿದೆ.

ಈ ಕುರಿತು ಪ್ರಕಟಣೆ ಒಂದನ್ನು ಹೊರಡಿಸಿರುವ ಆರ್​ಬಿಐ ಎರಡು ಸಾವಿರ ಮುಖಬೆಲೆಯ ನೊಟುಗಳನ್ನು ಬ್ಯಾಂಕ್​ಗೆ ಮರಳಿಸಲು ಅಥವಾ ವಿನಿಮಯ ಮಾಡಲು ಈ ಹಿಂದೆ ನಿಗದಿಪಡಿಸಿದ್ದ ಅವಧಿಯೂ ಅಂತ್ಯಗೊಂಡಿದೆ. ಈ ಹಿಂದೆ ನೀಡಲಾಗಿದ್ದ ಗಡುವನ್ನು ಅಕ್ಟೋಬರ್​ 7ರವರೆಗೂ ವಿಸ್ತರಿಸಲಾಗುವುದು ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಅದರಂತೆ ಗ್ರಾಹಕರು ಒಂದು ವೇಳೆ ನೋಟು ವಿನಿಮಯ ಮಾಡಿಕೊಳ್ಳದಿದ್ದಲ್ಲಿ ಇನ್ನು ಬಾಕಿ ಉಳಿದಿರುವ ಏಳು ದಿನಗಳ ಒಳಗಾಗಿ ಬ್ಯಾಂಕ್​ಗೆ ಮರಳಿಸಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net