VIDEO| ಸಂಕಲ್ಪ ಸಪ್ತಾಹಕ್ಕೆ ಚಾಲನೆ ನೀಡಿದ ಪ್ರಧಾನಿ ಮೋದಿ

PM Narendra Modi
Published on

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಶನಿವಾರ ನವದೆಹಲಿಯ ಪ್ರಗತಿ ಮೈದಾನದಲ್ಲಿರುವ ಭಾರತ ಮಂಟಪಂನಲ್ಲಿ ಸಂಕಲ್ಪ ಸಪ್ತಾಹಕ್ಕೆ ಚಾಲನೆ ನೀಡಿದ್ದಾರೆ. ಈ ಕಾರ್ಯಕ್ರಮವು 112 ಜಿಲ್ಲೆಗಳಲ್ಲಿ ವಾಸಿಸುತ್ತಿರುವ 25ಕೋಟಿಗೂ ಅಧಿಕ ಜನರ ಜೀವನವನ್ನು ಬದಲಿಸಿದೆ ಎಂದು ಹೇಳಿದ್ದಾರೆ.

ಮೂಲ ಮಟ್ಟದಲ್ಲಿ ಅಭಿವೃದ್ಧಿಗಾಗಿ ಸಂಪನ್ಮೂಲಗಳ ಅತ್ಯುತ್ತಮ ಬಳಕೆ, ಒಮ್ಮುಖ ಮತ್ತು ಸಾರ್ವಜನಿಕ ಸಹಭಾಗಿತ್ವದ ಪ್ರಾಮುಖ್ಯತೆಯನ್ನು ಪ್ರಧಾನ ಮಂತ್ರಿ ಒತ್ತಿ ಹೇಳಿದರು. ಮಹತ್ವಾಕಾಂಕ್ಷೆಯ ಜಿಲ್ಲೆಗಳ ಕಾರ್ಯಕ್ರಮವು ದೇಶದ 112 ಜಿಲ್ಲೆಗಳಲ್ಲಿ ವಾಸಿಸುತ್ತಿರುವ ಜನರ ಜೀವನವನ್ನು ಬದಲಾಯಿಸಿದೆ. ಅವರ ಜೀವನದ ಗುಣಮಟ್ಟದಲ್ಲಿ ಬದಲಾವಣೆಯಾಗಿದೆ ಎಂದಿದ್ದಾರೆ.

ಈಗ, ಮಹತ್ವಾಕಾಂಕ್ಷೆಯ ಜಿಲ್ಲೆಗಳ ಕಾರ್ಯಕ್ರಮದ ಯಶಸ್ಸು ಬ್ಲಾಕ್‌ಗಳ ಕಾರ್ಯಕ್ರಮದ ಆಧಾರವಾಗಿದೆ. ನನಗೆ ಸಿಕ್ಕಿದಂತೆ ಇಷ್ಟೊಂದು ಕಾಲ ಸರ್ಕಾರವನ್ನು ನಡೆಸುವ ಅವಕಾಶ ಕೆಲವೇ ಜನರಿಗೆ ಸಿಗುತ್ತದೆ. ನನ್ನ ಅನುಭವದಿಂದ ಹೇಳುತ್ತೇನೆ. ಬಜೆಟ್ ಬದಲಾವಣೆಯನ್ನು ತರುತ್ತದೆ ಮಾತ್ರವಲ್ಲ, ಸಂಪನ್ಮೂಲಗಳ ಅತ್ಯುತ್ತಮ ಬಳಕೆ ಮತ್ತು ಒಮ್ಮುಖವನ್ನು ನಾವು ಖಚಿತಪಡಿಸಿಕೊಂಡರೆ, ಬ್ಲಾಕ್‌ಗಳಿಗೆ ಯಾವುದೇ ಹೊಸ ಹಣ ಬರದೆ ಕೆಲಸ ಮಾಡಬಹುದಾಗಿದೆ.

ಕಾರ್ಯಕ್ರಮವು ನಾಗರೀಕರ ಜೀವನದ ಗುಣಮಟ್ಟವನ್ನು ಹೆಚ್ಚಿಸಲು ಬ್ಲಾಕ್ ಮಟ್ಟದಲ್ಲಿ ಆಡಳಿತವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ದೇಶದ 329 ಜಿಲ್ಲೆಗಳಲ್ಲಿ 500 ಮಹತ್ವಾಕಾಂಕ್ಷೆಯ ಬ್ಲಾಕ್‌ಗಳಲ್ಲಿ ಇದನ್ನು ಜಾರಿಗೊಳಿಸಲಾಗುತ್ತಿದೆ.  ಅಕ್ಟೋಬರ್ 3 ರಿಂದ ಅಕ್ಟೋಬರ್ 9 ರವರೆಗೆ ಸಂಕಲ್ಪ್ ಸಪ್ತಾಹ್ ನ ಪ್ರತಿ ದಿನವು ಒಂದು ನಿರ್ದಿಷ್ಟ ಅಭಿವೃದ್ಧಿ ವಿಷಯಕ್ಕೆ ಮೀಸಲಾಗಿರುತ್ತದೆ, ಅದರ ಮೇಲೆ ಎಲ್ಲಾ ಮಹತ್ವಾಕಾಂಕ್ಷೆಯ ಬ್ಲಾಕ್‌ಗಳು ಕಾರ್ಯನಿರ್ವಹಿಸುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಮೊದಲ ಆರು ದಿನಗಳ ಸಂಪೂರ್ಣ ಸ್ವಾಸ್ಥ್ಯ, ಸುಪೋಷಿತ್ ಪರಿವಾರ, ಸ್ವಚ್ಛತಾ ಕೃಷಿ’, ಶಿಕ್ಷಾ ಮತ್ತು ಸಮೃದ್ಧಿ ದಿವಸ್ ಎಂಬ ಥೀಮ್ ಇಟ್ಟುಕೊಂಡಿವೆ. ಕೊನೆಯ ದಿನ ಅಕ್ಟೋಬರ್ 9ರಂದು ಸಂಕಲ್ಪ ಸಪ್ತಾಹ್ ಸಮಾವೇಶ ಸಮಾರೋಪವನ್ನು ಕಾರ್ಯಕ್ರಮವನ್ನು ನಡೆಸಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net