

Cyber crime: ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧಿಸುವುದಾಗಿ ಬೆದರಿಕೆ ಹಾಕಿ 80 ವರ್ಷದ ನಿವೃತ್ತ ಆರ್ಬಿಐ ಉದ್ಯೋಗಿಯೊಬ್ಬರಿಗೆ 49 ಲಕ್ಷ ರೂ. ವಂಚನೆ ಮಾಡಿರುವ ಘಟನೆ ಹೈದ್ರಾಬಾದ್ನ ಮಾಧಾಪುರದಲ್ಲಿ ಇತ್ತೀಚೆಗೆ ನಡೆದಿದೆ.
ಅಪರಿಚಿತ ಸಂಖ್ಯೆಯಿಂದ ಕರೆ
ಸುದ್ದಿಮೂಲಗಳ ಪ್ರಕಾರ, ಮಾಧಾಪುರದ ಸಂತ್ರಸ್ತತನಿಗೆ ಅಪರಿಚಿತ ಸಂಖ್ಯೆಯಿಂದ ಕರೆ ಬಂದಿದೆ. ಕರೆ ಮಾಡಿದ ವ್ಯಕ್ತಿ ಮುಂಬೈನ ಸೈಬರ್ ಅಪರಾಧ ಪೊಲೀಸ್ ಎಂದು ಹೇಳಿದ್ದಾನೆ. ಮುಂಬೈ ಹೈಕೋರ್ಟ್ನಲ್ಲಿ ಹಣ ವರ್ಗಾವಣೆ ವಿರೋಧಿ ಪ್ರಕರಣ ದಾಖಲಾಗಿದ್ದು, ಬಂಧನ ವಾರಂಟ್ ಶೀಘ್ರದಲ್ಲೇ ಬರಲಿದೆ ಎಂದು ವಂಚಕ ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ತ ತಿಳಿಸಿದ್ದಾರೆ.
ಇನ್ನು ವಂಚಕ ಜಾರಿ ನಿರ್ದೇಶನಾಲಯ, ಸಿಬಿಐ ಮತ್ತು ಮುಂಬೈ ಪೊಲೀಸರ ಲೋಗೋಗಳನ್ನು ಹೊಂದಿರುವ ನಕಲಿ ದಾಖಲೆಗಳನ್ನು ವಾಟ್ಸಾಪ್‌ನಲ್ಲಿ ಕಳುಹಿಸಿದ್ದು, ಆಧಾರ್ ಮತ್ತು ಬ್ಯಾಂಕ್ ಖಾತೆಗಳು, ಹಣ ಅಕ್ರಮ ವರ್ಗಾವಣೆ ಆರೋಪಿ ನರೇಶ್ ಗೋಯೆಲ್‌ಗೆ ಸಂಬಂಧಿಸಿವೆ ಎಂದು ಹೇಳಿಕೊಂಡಿದ್ದಾರೆ.
ಹಣ ವರ್ಗಾಯಿಸಲು ಒತ್ತಾಯ
ವಂಚಕರು ಪೋಲಿಸರಂತೆ ನಟನೆ ಮಾಡಿ ಹಣ ವರ್ಗಾವಣೆ ವಿರೋಧಿ ಇಲಾಖೆಯ ಪರಿಶೀಲನೆಗಾಗಿ ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ಹಣವನ್ನು ವರ್ಗಾಯಿಸುವಂತೆ ಒತ್ತಾಯಿಸಿದ್ದಾರೆ. ಇದಕ್ಕೆ ಬೆದರಿದ ಸಂತ್ರಸ್ತ ಹಣ ವರ್ಗಾಯಿಸಿದ್ದಾನೆ.
ವರ್ಗಾಯಿಸಿದ ಮೊತ್ತ?
ಆಗಸ್ಟ್ 8 ರಿಂದ 13 ರ ನಡುವೆ ಸಂತ್ರಸ್ತ 3 ಬಾರಿ ವರ್ಗಾವಣೆ ಮಾಡಿದ್ದು, ತನ್ನ ಎರಡು ಬ್ಯಾಂಕ್ ಖಾತೆಗಳಿಂದ 49 ಲಕ್ಷ ರೂ.ಗಳನ್ನು ವರ್ಗಾಹಿಸಿದ್ದಾರೆ.
ದೂರು ಏನು?
ನನ್ನನು ವಂಚಕರು ಬೆದರಿಸಿ, ಏಳು ವರ್ಷಗಳ ಕಾಲ ಜೈಲಲ್ಲಿರಬೇಕಾಗುತ್ತದೆ ಹಾಗೂ 20 ಲಕ್ಷ ರೂ. ದಂಡ ವಿಧಿಸಲಾಗುತ್ತದೆ ಹಾಗೇ ಆಗಸ್ಟ್ 13 ರವರೆಗೆ 3 ಬಾರಿ ಬೇರೆ ಬೇರೆ ಖಾತೆಗಳಿಂಸದ 49 ಲಕ್ಷ ರೂ.ಗಳನ್ನು ಜಮಾ ಮಾಡಿಸಿಕೊಂಡಿದ್ದಾರೆ ಎಂದು ಆರೋಪ ಮಾಡಿದ್ದು, ಆಗಸ್ಟ್ 14 ರಂದು ಸಂವಹನ ನಿಲ್ಲಿಸಿದ್ದಾರೆ ಎಂದು ದೂರು ದಾಖಲಿಸಿದ್ದಾರೆ. (ಏಜೆನ್ಸೀಸ್)