RBI Monetary Policy : ಪ್ರಮುಖ ಬಡ್ಡಿ ದರ ಯಥಾಸ್ಥಿತಿ - ಪ್ರಸಕ್ತ ಸಾಲಿನಲ್ಲಿ 7.2 ಜಿಡಿಪಿ ಬೆಳವಣಿಗೆ?

RBI
Published on

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಪ್ರಮುಖ ಬಡ್ಡಿದರಗಳನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಿದೆ. RBI Monetary Policy

ರೆಪೋ ದರವನ್ನು ಶೇಕಡಾ 6.5 ರಷ್ಟು ಕಾಯ್ದುಕೊಳ್ಳಲಾಗಿದೆ. 2023ರ ಫೆಬ್ರವರಿ ಯಿಂದ ಸೆಂಟ್ರಲ್ ಬ್ಯಾಂಕ್ ಈ ದರವನ್ನು ಮುಂದುವರಿಸುತ್ತಿದೆ. ಸತತ ಹತ್ತನೇ ಬಾರಿಯೂ ಯಾವುದೇ ಬದಲಾವಣೆ ಮಾಡಿಲ್ಲ ಎಂಬುದು ಗಮನಾರ್ಹ ಸಂಗತಿಯಾಗಿದೆ.

ಆರ್‌ಬಿಐನ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯ ನಿರ್ಧಾರಗಳನ್ನು ಗವರ್ನರ್ ಶಕ್ತಿಕಾಂತ ದಾಸ್ ಬುಧವಾರ(ಅ.9) ಪ್ರಕಟಿಸಿದರು. ನೈಜ ಜಿಡಿಪಿ ಬೆಳವಣಿಗೆಯು 2024-25 ರಲ್ಲಿ 7.2 ಶೇಕಡಾ ಎಂದು ಅಂದಾಜಿಸಲಾಗಿದೆ. ಎರಡನೇ ತ್ರೈಮಾಸಿಕದಲ್ಲಿ ಶೇ.7 ಮತ್ತು ಮೂರನೇ ಮತ್ತು ನಾಲ್ಕನೇ ತ್ರೈಮಾಸಿಕದಲ್ಲಿ ಶೇ.7.4 ಹಾಗೂ 2025-26ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಬೆಳವಣಿಗೆ ದರವು 7.3 ಪ್ರತಿಶತ ಎಂದು ಅಂದಾಜಿಸಲಾಗಿದೆ ಎಂದು ವಿವರಿಸಿದರು.

ಸುಧಾರಿತ ಮಳೆಯ ದಾಖಲೆ. ಸಾಕಷ್ಟು ಮೀಸಲು ಹೊಂದಿರುವ ಆಹಾರ ಹಣದುಬ್ಬರವು ಈ ವರ್ಷದ ಅಂತ್ಯದ ವೇಳೆಗೆ ಮಧ್ಯಮವಾಗುವ ಸಾಧ್ಯತೆಯಿದೆ. ಸೆಪ್ಟೆಂಬರ್‌ನಲ್ಲಿ ಚಿಲ್ಲರೆ ಹಣದುಬ್ಬರ ತೀವ್ರವಾಗಿ ಏರುವ ನಿರೀಕ್ಷೆಯಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಚಿಲ್ಲರೆ ಹಣದುಬ್ಬರ ಶೇ.4.5ರಷ್ಟಿರುವ ಸಾಧ್ಯತೆ ಇದೆ. ಸರ್ಕಾರದ ನೀತಿಗಳು ಮತ್ತು ಹೆಚ್ಚುತ್ತಿರುವ ದೇಶೀಯ ಬೇಡಿಕೆಯಿಂದಾಗಿ ಉತ್ಪಾದನಾ ವಲಯವು ಬೆಳೆಯುತ್ತಿದೆ. ಹಣಕಾಸು ವಲಯವು ಸ್ಥಿರವಾಗಿದೆ. ಬ್ಯಾಂಕ್‌ಗಳ ಕಾರ್ಯಾಚರಣೆ ಬಲವಾಗಿದೆ.ಯುಪಿಐ ಲೈಟ್ ವಾಲೆಟ್ ಮಿತಿಯನ್ನು 2ಸಾವಿರ ರೂ.ನಿಂದ 5ಸಾವಿರ ರೂ.ಗೆ ಹೆಚ್ಚಿಸಲಾಗಿದೆ ಎಂದು ಅವರು ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net