Stock Market | ಲಾಭದಲ್ಲಿ ಆರಂಭವಾದ ಷೇರುಪೇಟೆ ನಷ್ಟದತ್ತ..ವಾರದ ಮೊದಲ ದಿನದ ವಹಿವಾಟು ಹೇಗಿದೆ?

Stock Market
Published on

ಮುಂಬೈ: ಐದಾರು ದಿನಗಳಿಂದ ನಷ್ಟ ಅನುಭವಿಸುತ್ತಿದ್ದ ಷೇರುಪೇಟೆ(Stock Market) ಸೋಮವಾರ(ಅ.7)ಲಾಭದೊಂದಿಗೆ ಆರಂಭಗೊಂಡಿದ್ದು,ಮಧ್ಯಾಹ್ನ ಮತ್ತೆ ನಷ್ಟದಲ್ಲಿ ಮುಂದುವರಿದಿವೆ.

ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದಿಂದಾಗಿ ಷೇರು ಮಾರುಕಟ್ಟೆಗಳು ಐದು ದಿನಗಳಿಂದ ಕುಸಿಯುತ್ತಿವೆ. ಆದರೆ ವಾರದ ಆರಂಭದ ದಿನ ಲಾಭದೊಂದಿಗೆ ಆರಂಭಗೊಳ್ಳುತ್ತಿದ್ದಂತೆ ಇನ್ನೇನು ಮಾರುಕಟ್ಟೆಗಳು ಚೇತರಿಸಿಕೊಂಡವು ಎನ್ನುವಷ್ಟರಲ್ಲಿ ಮತ್ತೆ ನಷ್ಟದಲ್ಲಿ ನಡೆದವು.

ಸೋಮವಾರ ಷೇರು ಮಾರುಕಟ್ಟೆಗಳು ಗಳಿಕೆಯೊಂದಿಗೆ ಆರಂಭಗೊಂಡವು. ಎನ್​ಎಸ್​ಇ ನಿಫ್ಟಿ 69.50 ಅಂಕಗಳನ್ನು ಗಳಿಸಿತು ಮತ್ತು ಸೆನ್ಸೆಕ್ಸ್ 81,927.29 ನಲ್ಲಿ 238.83 ಅಂಕಗಳಲ್ಲಿ ಕೊನೆಗೊಂಡಿತು. ಸೆನ್ಸೆಕ್ಸ್ ಕ್ರಮೇಣ 400 ಅಂಕ ಕಳೆದುಕೊಂಡರೆ, ನಿಫ್ಟಿ 150 ಅಂಕ ಕುಸಿಯಿತು.

ಬ್ಯಾಂಕ್‌ಗಳ ನಿಫ್ಟಿ ಮತ್ತು ನಿಫ್ಟಿ ಮಿಡ್ ಕ್ಯಾಪ್ಸ್ 100 ಸೂಚ್ಯಂಕಗಳು ಕ್ರಮವಾಗಿ 320 ಮತ್ತು 1537 ಅಂಕಗಳನ್ನು ಕಳೆದುಕೊಂಡಿವೆ. ಎಚ್‌ಡಿಎಫ್‌ಸಿ ಲೈಫ್, ಭಾರ್ತಿ ಏರ್‌ಟೆಲ್, ಐಸಿಐಸಿಐ ಬ್ಯಾಂಕ್, ಸಿಪ್ಲಾ ಮತ್ತು ಐಟಿಸಿ ಕಂಪನಿಗಳು ಪ್ರಸ್ತುತ ಲಾಭದಲ್ಲಿದ್ದರೆ, ಅದಾನಿ ಪೋರ್ಟ್ಸ್, ಕೋಲ್ ಇಂಡಿಯಾ, ಎನ್‌ಟಿಪಿಸಿ, ಒಎನ್‌ಜಿಸಿ ಮತ್ತು ಅದಾನಿ ಎಂಟರ್‌ಪ್ರೈಸಸ್ ಕಂಪನಿಗಳ ಷೇರುಗಳು ನಷ್ಟದಲ್ಲಿವೆ. ನಿಫ್ಟಿಯಲ್ಲಿ ಕೇವಲ 43 ಷೇರುಗಳು ಲಾಭದಲ್ಲಿವೆ. ಉಳಿದ ಷೇರುಗಳು ನಷ್ಟದಲ್ಲಿ ವಹಿವಾಟಾಗುತ್ತಿವೆ.

ಮಧ್ಯಾಹ್ನ ಓಲಾ ಎಲೆಕ್ಟ್ರಿಕ್ ಮೊಬಿಲಿಟಿ ಷೇರುಗಳು, ಟಾಟಾ ಷೇರುಗಳೂ ಸಹ ಕುಸಿಯುತ್ತಿವೆ. ಇದು ಷೇರು ಮಾರುಕಟ್ಟೆ ಆತಂಕಕ್ಕೂ ಕಾರಣವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net