ಗಂಗಾವತಿ: ರಾಜ್ಯದಲ್ಲಿ ಸ್ವಾತಂತ್ರ್ಯೋತ್ಸವದ ಪ್ರಮುಖ ವೇದಿಕೆಗಳಲ್ಲಿ ಸಂಗೋಳ್ಳಿ ರಾಯಣ್ಣ ಜಯಂತ್ಯುತ್ಸವ ಮತ್ತು ಪುಣ್ಯ ಸ್ಮರಣೆ ಕಡ್ಡಾಯವಾಗಿ ಆಚರಿಸಬೇಕೆಂದು ಸರ್ಕಾರ ಆದೇಶ ಹೊರಡಿಸಬೇಕಿದೆ ಎಂದು ಶ್ರೀ ಕನಕದಾಸ ತಾಲೂಕು ಕುರುಬರ ಸಂಘದ ಅಧ್ಯಕ್ಷ ವಿಠಲಾಪೂರ ಯಮನಪ್ಪ ಹೇಳಿದರು.
ನಗರದ ಕೊಪ್ಪಳ ರಸ್ತೆಯ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ಸೇನಾನಿ ಸಂಗೋಳ್ಳಿ ರಾಯಣ್ಣ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಸಾಪಟ್ಟಣದ ನಂಜುಂಡೇಶ್ವರ ಮಠದ ಸಿದ್ದಯ್ಯ, ಸಿದ್ದರಾಮಯ್ಯ ಗುರುವಿನ್, ಹಾಲುಮತ ಸಮಾಜದ ಮುಖಂಡರಾದ ಶರಣೇಗೌಡ ಮಾಲಿ ಪಾಟೀಲ್, ಸಣ್ಣಕ್ಕಿ ನೀಲಪ್ಪ, ಸಿದ್ದಲಿಂಗಪ್ಪಗೌಡ, ನಾಗೇಶಪ್ಪ, ಹನುಮೇಶ ಆಗೋಲಿ, ಮೋರೆ ದುರುಗಪ್ಪ, ಡ್ಯಾಗಿ ರುದ್ರೇಶ, ಅಶೋಕಗೌಡ, ಯಮನೂರಪ್ಪ, ಗಡ್ಡಿ ಮುದುಕಪ್ಪ, ಮುಸ್ಟೂರು ಮುದುಕಪ್ಪ, ನವಲಿ ಯಮನಪ್ಪ, ಗೀತಾ ವಿಕ್ರಂ, ಕಸ್ತೂರಮ್ಮ, ಕನಕಪ್ಪ ಮಳಗಾವಿ, ರವಿ ಜೋಗದ, ಹುಸೇನಪ್ಪ ಹಂಚಿನಾಳ, ವಿರೂಪಾಕ್ಷಪ್ಪ ಹೊಸಳ್ಳಿ, ಕರಿಯಪ್ಪ, ಬೆಣಕಲ್ ಬೆಟ್ಟಪ್ಪ ಇತರರಿದ್ದರು.