ಶಾಸಕ ರವೀಂದ್ರನಾಥ್​ ಮೊಮ್ಮಗ ಚಲಾಯಿಸುತ್ತಿದ್ದ ಕಾರು ವಿದ್ಯುತ್​ ಕಂಬಕ್ಕೆ ಡಿಕ್ಕಿ

car acident feb 2020
Published on

ದಾವಣಗೆರೆ: ಶಾಸಕ ರವೀಂದ್ರನಾಥ್​ ಅವರ ಮೊಮ್ಮಗ ಚಲಾಯಿಸುತ್ತಿದ್ದ ಕಾರು ಭಾನುವಾರ ತಡ ರಾತ್ರಿ ಶಾಮನೂರು ಬಳಿ ವಿದ್ಯುತ್​ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಂಬ ಮುರಿದು ಮನೆ ಮೇಲೆ ಬಿದ್ದಿದೆ.

ಅಪಘಾತ ಸಂಭವಿಸಿದ ವೇಳೆ ವಿದ್ಯುತ್​ ಕಂಬದ ತಿಂತಿಗಳಲ್ಲಿ ವಿದ್ಯುತ್​ ಪೂರೈಕೆಯಾಗುತ್ತಿತ್ತು. ಹೀಗಿದ್ದರೂ ಯಾರಿಗೂ ಅಪಾಯ ಸಂಭವಿಸಲಿಲ್ಲ.

ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್​.ಎ.ರವೀಂದ್ರನಾಥ್​ ಅವರ ಪುತ್ರಿ ಪಾಲಿಕೆ ಸದಸ್ಯೆ ವೀಣಾ ನಂಜಪ್ಪ ಅವರ ಮಗ ಅರುಣ್​ ಕುಮಾರ್​ ಭಾನುವಾರ ತಡ ರಾತ್ರಿ ಕಾರು ಚಲಾಯಿಸಿಕೊಂಡು ಬರುತ್ತಿದ್ದರು. ದಾವಣಗೆರೆ ಹೊರವಲಯದಲ್ಲಿರುವ ಶಾಮನೂರು ಬಳಿ ಕಾರು ವಿದ್ಯುತ್​ ಕಂಬಕ್ಕೆ ಡಿಕ್ಕಿ ಹೊಡೆಯಿತು. ಡಿಕ್ಕಿಯ ರಭಸಕ್ಕೆ ಕಂಬ ಮುರಿದು ಮನೆ ಮೇಲೆ ಬಿತ್ತು. ಇದನ್ನು ಗ್ರಾಮಸ್ಥರು ಪ್ರಶ್ನಿಸಲು ಮುಂದಾದರು. ಇದರಿಂದ ಉದ್ರಿಕ್ತಗೊಂಡ ಅರುಣ್​ ಕುಮಾರ್​ ಗ್ರಾಮಸ್ಥರ ಮೇಲೆ ಹಲ್ಲೆ ನಡೆಸಲು ಮುಂದಾದರು. ಗ್ರಾಮಸ್ಥರು ಒಟ್ಟಾಗಿ ಪ್ರತಿರೋಧ ತೋರಿದ ನಂತರ ಅರುಣ್​ ಕುಮಾರ್​ ಕಾರು ಬಿಟ್ಟು ನಾಪತ್ತೆಯಾದರು. ಕಾರಿನಲ್ಲಿ ಶಾಸಕ ಎಸ್​.ಎ.ರವೀಂದ್ರನಾಥ್​ ಅವರ ಪಾಸ್​ ಪತ್ತೆಯಾಗಿದೆ.

ವಿದ್ಯಾನಗರ ಪೊಲೀಸರು ದೂರು ದಾಖಲಿಸಿದ್ದಾರೆ. ಶಾಸಕರ ಮೊಮ್ಮಗ ಅರುಣ್​ ಕುಮಾರ್​ ಅವರನ್ನು ಸ್ಥಳಕ್ಕೆ ಕರೆಸಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net