

ಬೆಂಗಳೂರು: ಉಡುಪಿಯ ಕಾಲೇಜೊಂದರ ಟಾಯ್ಲೆಟ್ನಲ್ಲಿ 3 ಮುಸ್ಲಿಂ ಯುವತಿಯರು ಹಿಂದೂ ಯುವತಿಯ ವಿಡಿಯೋ ಮಾಡಿದ ಆರೋಪ ಇತ್ತೀಚೆಗೆ ಕೇಳಿಬಂದಿದ್ದು ಅದರ ಸುತ್ತ ನಾನಾ ಬಗೆಯ ವಿವಾದಗಳು ಹುಟ್ಟಿಕೊಳ್ಳುತ್ತಿವೆ. ಕೆಲವರು ರಾಜ್ಯ ಸರ್ಕಾರದ ಮೇಲೆ ಆರೋಪ ಮಾಡಿದರೆ ಇನ್ನೂ ಕೆಲವರು ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಸುಂದರ್ ವಿರುದ್ಧ ಮಾತನಾಡುತ್ತಿದ್ದಾರೆ.
ಈ ನಡುವೆ ಬಿಜೆಪಿಯ ಕಾರ್ಯಕರ್ತೆಯೊಬ್ಬರು, ಸಿದ್ದರಾಮಯ್ಯ ವಿರುದ್ಧ ಮಾತನಾಡಿ ಜೈಲು ಸೇರಿದ್ದಾರೆ. ಬಿಜೆಪಿ ಕಾರ್ಯಕರ್ತೆ ಶಕುಂತಲಾರನ್ನು ಬಂಧಿಸಿರುವ ಕುರಿತು ಪ್ರತಿಕ್ರಿಯಿಸಿರುವ ವಿಧಾನಪರಿಷತ್ ಸದಸ್ಯ ರವಿಕುಮಾರ್ ಸರ್ಕಾರ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.
ಟ್ವೀಟ್ ಮಾಡಿದ್ದಕ್ಕೆ ನಮ್ಮ ಪಕ್ಷದ ಕಾರ್ಯಕರ್ತೆಯನ್ನು ಬಂಧಿಸಲಾಗಿದೆ. ನಿಮ್ಮನೆಯಲ್ಲಿ ಈಥರ ವಿಡಿಯೋ ಮಾಡಿದ್ರೆ ಏನ್ ಮಾಡ್ತಿದ್ರಿ ಅಂತ ಟ್ವೀಟ್ ಮಾಡಿದ್ದಕ್ಕೆ ಅರೆಸ್ಟ್ ಮಾಡಿದ್ದಾರೆ. ಆದರೆ, ವಿಡಿಯೋ ಮಾಡಿದ ವಿದ್ಯಾರ್ಥಿನಿಯರನ್ನು ಪೊಲೀಸರು ಇದುವರೆಗೂ ಬಂಧಿಸಿಲ್ಲ. ಒಂದು ಸಮುದಾಯವನ್ನು ಓಲೈಸಲು ಸರ್ಕಾರ ಈ ರೀತಿಯ ತುಷ್ಟೀಕರಣ ಮಾಡಬೇಕಾ ಎಂದು ಪ್ರಶ್ನಿಸಿದ್ದಾರೆ.
ವಿಡಿಯೋ ಮಾಡಿದ ವಿದ್ಯಾರ್ಥಿನಿಯರ ಹೊಂದೆ ದೊಡ್ಡ ಜಾಲವೇ ಇದೆ ಅಗೆದಷ್ಟು ಆಳ ಎಂಬಂತೆ ಪ್ರಕರಣ ಹಲವು ತಿರುವುಗಳನದನು ಪಡೆದುಕೊಳ್ಳುತ್ತಿದೆ. ವಿಡಿಯೋ ಮಾಡಿದ ನಂತರ ಅದನ್ನು ಪಡೆಯಲು ಕೆಲವು ಯುವಕರು ಬರುತ್ತಿದ್ದರಂತೆ ಮೊದಲು ಅವರು ಯಾರು ಎಂಬುದರ ಕುರಿತು ತನಿಖೆಯಾಗಬೇಕು. ನಿಷೇಧಿತ PFI ಸಂಘಟನೆಯ ಮಹಿಳಾ ಕಾರ್ಯಕರ್ತರು ಇದರ ಹಿಂದೆ ಇದ್ದಾರೆ. ಸರ್ಕಾರ ಈ ಪ್ರಕರಣವನ್ನು NIAಗೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.
ದೇಶಾದ್ಯಂತ ಈ ವಿಚಾರ ಸುದ್ದಿಯಾದರು ಸಹ ಪೊಲೀಸರು ಶಬನಾಜ್,ಆಲೀಫಾ,ಅಲಿಯಾರನ್ನ ಇದುವರೆಗೂ ಬಂಧಿಸಿಲ್ಲ. ಗೃಹ ಸಚಿವರನ್ನು ನೋಡಿದರೆ ಇದು ಮಕ್ಕಳಾಟ ಎಂದು ಹೇಳುತ್ತಿದ್ದಾರೆ. ಸರ್ಕಾರಕ್ಕೆ ಯಾವುದರಲ್ಲೂ ಗಾಂಭೀರ್ಯತೆ ಇಲ್ಲ ತಮಾಷೆಯ ವಿಚಾರವಾಗಿದೆ. ಈ ಕುರಿತು ಖುದ್ದು ಮುಖ್ಯಮಂತ್ರಿಗಳೇ ಸ್ಪಷ್ಟನೆ ನೀಡಬೇಕು.
ಜುಲೈ 14ರಂದು ಘಟನೆ ನಡೆದಿದ್ದು, 24ರಂದು FIR ದಾಖಲಾಗಿದೆ. ಕಳೆದ ಐದಾರು ತಿಂಗಳಿನಿಂದ ಇದು ನಡೆದುಕೊಂಡು ಬಂದಿದ್ದು, ಇದರ ಹಿಂದೆ ದೊಡ್ಡ ಜಾಲವೇ ಇದೆ ಅದರ ಬಗ್ಗೆ ತನಿಖೆಯಾಗಲಿ. ಅದು ಬಿಟ್ಟು ನ್ಯಾಯಾಕ್ಕಾಗು ಆಗ್ರಹಿಸಿ ಟ್ವೀಟ್ ಮಾಡಿದವರನ್ನು ಬಂಧಿಸಿರುವುದು ತುಷ್ಟೀಕರಣ ರಾಜಕಾರಣವಲ್ಲದೆ ಮತ್ತೇನು ಎಂದು ವಿಧಾನಪರಿಷತ್ ಸದಸ್ಯ ರವಿಕುಮಾರ್ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.