ರವಿಕುಮಾರ್ ಬೆಳಗೊಳ ಗ್ರಾಪಂನ ನೂತನ ಅಧ್ಯಕ್ಷ

IMG-20250618-WA0157
ಬೆಳಗೊಳ ಗ್ರಾಪಂ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಬಿ.ರವಿಕುಮಾರ್ ಅವರನ್ನು ಸದಸ್ಯರು ಅಭಿನಂದಿಸಿದರು. ಬಿ.ವಿ.ಸುರೇಶ್, ಪುಟ್ಟರಾಜು, ಅರವಿಂದ್, ರಜನಿಕಾಂತ್, ಶಿವಕುಮಾರ್, ಕೃಷ್ಣ, ನಾಗಣ್ಣ, ಆರ್ಮುಗಂ, ಕಾಂತರಾಜು ಇತರರಿದ್ದರು.
Published on

ಕೆ.ಆರ್.ಸಾಗರ: ಬೆಳಗೊಳ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಬಿ.ರವಿಕುಮಾರ್ ಅವಿರೋಧವಾಗಿ ಬುಧವಾರ ಆಯ್ಕೆಯಾದರು.

ನಿಕಟಪೂರ್ವ ಅಧ್ಯಕ್ಷ ಪುಟ್ಟರಾಜು ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಿಗಧಿಯಾಗಿತ್ತು.

ಬೆಳಗೊಳ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 26 ಸದಸ್ಯರಿದ್ದು, ಚುನಾವಣಾ ಸಭೆಗೆ 24 ಸದಸ್ಯರು ಹಾಜರಾಗಿದ್ದರು. ಬಿ. ರವಿ ಕುಮಾರ್ ಒಬ್ಬರೇ ಅಧ್ಯಕ್ಷ ಗಾದಿಗೆ ನಾಮಪತ್ರ ಸಲ್ಲಿಸಿ, ಬೇರೆ ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆಯಾಗಿರುವುದಾಗಿ ಚುನಾವಣಾಧಿಕಾರಿ ತಾಪಂ ಇಒ ವೇಣು ಘೋಷಿಸಿದರು.

ಪಂಚಾಯಿತಿ ಕಾರ್ಯದರ್ಶಿ ವೆಂಕಟರಾಮು ಚುನಾವಣೆ ಸಹಾಯಕರಾಗಿದ್ದರು. ಗ್ರಾಪಂ ಮಾಜಿ ಅಧ್ಯಕ್ಷರಾದ ಬಿ.ವಿ.ಸುರೇಶ್, ಪುಟ್ಟರಾಜು, ಸದಸ್ಯರಾದ ಅರವಿಂದ್, ರಜನಿಕಾಂತ್, ಶಿವಕುಮಾರ್, ಕೃಷ್ಣ, ನಾಗಣ್ಣ, ಆರ್ಮುಗಂ, ಕಾಂತರಾಜು, ಪ್ರಭಾ ಸುರೇಶ್, ಅಶ್ವಿನಿ ರವಿಕುಮಾರ್, ರಾಧಾ ಬಿ.ಎಂ.ಸ್ವಾಮಿಗೌಡ, ವಿಷಕಂಠೇಗೌಡ ಅವರು ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net