ಮಹಾಕುಂಭದಲ್ಲಿ ನಟಿ ಕತ್ರಿನಾ ಕೈಫ್ ಪುಣ್ಯಸ್ನಾನ; ವಿಡಿಯೋ ಮಾಡ್ಡಿದ್ದ ಹುಡುಗರಿಗೆ ರವೀನಾ ಟಂಡನ್​​ ಕ್ಲಾಸ್​​​​ | Raveena Tandon

Untitled design (65)
Published on

ಮುಂಬೈ: ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾಕುಂಭದಲ್ಲಿ ಬಾಲಿವುಡ್ ನಟಿ ಕತ್ರಿನಾ ಕೈಫ್ 2025 ಫೆಬ್ರವರಿ 24ರಂದು ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದರು. ಅವರು ಪುಣ್ಯಸ್ನಾನ ಮಾಡುತ್ತಿದ್ದಾಗ ಕೆಲವು ಜನರು ನಟಿಯ ಸುತ್ತಲೂ ನಿಂತು ವಿಡಿಯೋವನ್ನು ರೆಕಾರ್ಡ್​​ ಮಾಡುತ್ತಿದ್ದರು. ಈಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಇದನ್ನು ನೋಡಿದ ನಟಿ ರವೀನಾ ಟಂಡನ್(Raveena Tandon) ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವೈರಲ್​ ವಿಡಿಯೋದಲ್ಲಿ ಒಬ್ಬ ವ್ಯಕ್ತಿ ಗಂಗಾ ನದಿಯಲ್ಲಿ ಸೊಂಟದ ಆಳದ ನೀರಿನಲ್ಲಿ ನಿಂತು ವಿಡಿಯೋ ರೆಕಾರ್ಡ್​​ ಮಾಡುತ್ತಿದ್ದಾನೆ. 'ಇದು ನಾನು, ಇದು ನನ್ನ ಸಹೋದರ ಮತ್ತು ಇದು ಕತ್ರಿನಾ ಕೈಫ್!' ಎಂದು ಹೇಳುತ್ತಿದ್ದಾನೆ. ಇದಾದ ನಂತರ ಅವರು ಕ್ಯಾಮೆರಾವನ್ನು ನಟಿಯ ಕಡೆಗೆ ತಿರುಗಿಸಿದರು. ಆ ಸಮಯದಲ್ಲಿ ಕತ್ರಿನಾ ತನ್ನ ಸುತ್ತಲೂ ಆಗುತ್ತಿರುವ ಶಬ್ದವನ್ನು ಅರಿಯದೆ ಸಂಗಮದಲ್ಲಿ ಸ್ನಾನ ಮಾಡುತ್ತಿದ್ದರು.

ಈ ವಿಡಿಯೋ ನೋಡಿದ ನಂತರ ನಟಿ ರವೀನಾ ಟಂಡನ್ ಕೋಪಗೊಂಡು 'ಇದು ಅಸಹ್ಯಕರ.' ಎಂದು ಕಾಮೆಂಟ್ ಮಾಡಿದ್ದಾರೆ. ಈ ರೀತಿಯ ಜನರು ಶಾಂತಿಯುತ ಮತ್ತು ಅರ್ಥಪೂರ್ಣವಾಗಿರಬೇಕಾದ ಕ್ಷಣವನ್ನು ಹಾಳು ಮಾಡುತ್ತಾರೆ ಎಂದು ಟೀಕಿಸಿದ್ದಾರೆ.

ಇದಕ್ಕೂ ಮೊದಲು ಜಾಲತಾಣದಲ್ಲಿ ಡ್ರೋನ್‌ನಲ್ಲಿ ರೆಕಾರ್ಡ್​ ಮಾಡಲಾದ ವಿಡಿಯೋವೊಂದು ವೈರಲ್​ ಆಗಿದೆ. ಅದರಲ್ಲಿ ಕತ್ರಿನಾ ತನ್ನ ಅತ್ತೆಯೊಂದಿಗೆ ಸಂಗಮದಲ್ಲಿ ಪುಣ್ಯಸ್ನಾನ ಮಾಡಿ ಪೂಜೆ ಸಲ್ಲಿಸುತ್ತಿರುವಾಗ ನೂರಾರು ಜನರು ನಟಿಯನ್ನು ಸುತ್ತುವರೆದಿರುವುದು ಕಂಡುಬಂದಿತು. ಭದ್ರತಾ ಅಧಿಕಾರಿಗಳ ತಂಡವೊಂದು ಜನಸಂದಣಿಯನ್ನು ನಿಯಂತ್ರಿಸಲು ಪ್ರಯತ್ನಿಸಿತು. ಆದರೆ ಕತ್ರಿನಾ ಜನರ ಕಡೆಗೆ ಯಾವುದೇ ಗಮನ ಹರಿಸಲಿಲ್ಲ ಮತ್ತು ಆಚರಣೆಗಳ ಪ್ರಕಾರ ಪೂಜೆಯನ್ನು ಮುಂದುವರಿಸಿದ್ದಾಋಎ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net