

ಮುಂಬೈ: ರವೀನಾ ಟಂಡನ್ ಬಾಲಿವುಡ್‌ನ ಬಹುತೇಕ ಎಲ್ಲಾ ಸೂಪರ್‌ಸ್ಟಾರ್‌ಗಳೊಂದಿಗೆ ಕೆಲಸ ಮಾಡಿದ್ದಾರೆ. 90 ರ ದಶಕದಲ್ಲಿ ಅತ್ಯಂತ ಯಶಸ್ವಿ ನಟಿಯಾಗಿದ್ದ ರವೀನಾ, ತಮ್ಮ ವೃತ್ತಿ ಜೀವನದಲ್ಲಿ ವಿಶೇಷ ನೀತಿ ಅಳವಡಿಸಿಕೊಂಡಿದ್ದರು. ಅದೇನಪ್ಪಾ ಅಂದ್ರೆ... ರವೀನಾ ಟಂಡನ್ ತಮ್ಮ ಚಿತ್ರಗಳಲ್ಲಿ ಚುಂಬನದ ದೃಶ್ಯ ಮಾಡಿಲ್ಲ. ಅಂದಹಾಗೆ ರವೀನಾ ಇತ್ತೀಚಿನ ಸಂದರ್ಶನವೊಂದರಲ್ಲಿ ಚುಂಬನಕ್ಕೆ ಸಂಬಂಧಿಸಿದ ಆಸಕ್ತಿದಾಯಕ ಘಟನೆಯನ್ನು ಹಂಚಿಕೊಂಡಿದ್ದಾರೆ. ಒಮ್ಮೆ ಆಕೆಯ ಸಹನಟರೊಬ್ಬರು ಆಕಸ್ಮಿಕವಾಗಿ ಚುಂಬಿಸಿದರಂತೆ.
ರವೀನಾ ಟಂಡನ್ ಲೆಹರೆನ್ ರೆಟ್ರೊ ಅವರೊಂದಿಗಿನ ಸಂಭಾಷಣೆಯಲ್ಲಿ ಈ ಕಥೆಯನ್ನು ವಿವರಿಸಿದ್ದಾರೆ. ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ನಟಿಸುತ್ತಿರುವ ಸಹನಟನೊಂದಿಗೆ ದೃಶ್ಯವನ್ನು ಚಿತ್ರೀಕರಿಸಲಾಗುತ್ತಿತ್ತು. ಖಳನಾಯಕನೊಂದಿಗೆ ಒರಟು ದೃಶ್ಯವನ್ನು ಚಿತ್ರೀಕರಿಸುವಾಗ, ಆಕೆಯ ತುಟಿ ಆಕಸ್ಮಿಕವಾಗಿ ಸಹನಟನ ತುಟಿಗಳನ್ನು ಮುಟ್ಟಿದವು. ಆದರೆ, ದೃಶ್ಯದಲ್ಲಿ ಇದರ ಅಗತ್ಯವಿರಲಿಲ್ಲ. ಇದು ತಪ್ಪಾಗಿ ಸಂಭವಿಸಿತು. ಆದರೆ ರವೀನಾಗೆ ಮಾತ್ರ ಹೇಳಿಕೊಳ್ಳಲಾಗದ ಸ್ಥಿತಿ ಎದುರಾಗಿತ್ತು.
ವಾಂತಿ ಮಾಡತೊಡಗಿದರು...
ಶಾಟ್ ಮುಗಿದ ನಂತರ, ರವೀನಾ ಟಂಡನ್ ನೇರವಾಗಿ ತನ್ನ ಕೋಣೆಗೆ ಹೋಗಿ ವಾಂತಿ ಮಾಡಿಕೊಂಡರು. ಆದರೂ ಅಸಮಾಧಾನವನ್ನು ಅನುಭವಿಸಿದರು. ಅದನ್ನು ಸಹಿಸಲಾಗಲಿಲ್ಲ. "ಛೆ, ಹೋಗಿ ಹಲ್ಲುಜ್ಜಿ, 100 ಬಾರಿಯಾದರೂ ಹಲ್ಲುಜ್ಜಿ'' ಎಂಬಂತಿತ್ತು ಅವರ ಪ್ರತಿಕ್ರಿಯೆ. ಆದರೆ ಅವರು ದೃಶ್ಯದಲ್ಲಿ ಈ ಗೊಂದಲವು ತಪ್ಪಿನಿಂದ ಸಂಭವಿಸಿದೆ. ಅದು ಕೂಡ ತನ್ನ ತಪ್ಪಾಗಿದೆ. ಆದರೂ ಸಹನಟ ಕ್ಷಮೆಯಾಚಿಸಿದರು ಎಂದು ತಿಳಿಸಿದ್ದಾರೆ.
ಮಗಳು ಆನ್‌ಸ್ಕ್ರೀನ್ ಕಿಸ್ ಮಾಡ್ತಾರಾ?
ರವೀನಾ ಟಂಡನ್ ಈ ಸಂದರ್ಶನದಲ್ಲಿ ಮಗಳು ರಾಶಾ ಥಡಾನಿ ಬಗ್ಗೆ ಮಾತನಾಡಿದ್ದಾರೆ. ಮಗಳ ಆನ್‌ಸ್ಕ್ರೀನ್ ಚುಂಬನದ ಬಗ್ಗೆ ಕೇಳಿದಾಗ, ಅದು ಅವಳ ಮೇಲೆ ಅವಲಂಬಿತವಾಗಿರುತ್ತದೆ. ಆಕೆಗೆ ಮುತ್ತು ಕೊಡುವುದರಲ್ಲಿ ಯಾವುದೇ ತೊಂದರೆ ಇಲ್ಲದಿದ್ದರೆ ನಾನು ನಿರಾಕರಿಸುವುದಿಲ್ಲ ಎಂದಷ್ಟೇ ತಿಳಿಸಿದ್ದಾರೆ.