ಈ ವರ್ಷವಾದ್ರೂ ಮದುವೆ ಮಾಡಪ್ಪ...! ದೇವರಿಗೆ ಅರ್ಪಿಸುವ ಬಾಳೆಹಣ್ಣಲ್ಲಿ ವಿಚಿತ್ರ ಹರಕೆ...

Banana 12 Feb 20
Published on

ಧಾರವಾಡ: ರಥೋತ್ಸವ ಸಂದರ್ಭದಲ್ಲಿ ತೇರಿಗೆ ಉತ್ತತ್ತಿ, ನಿಂಬೆಹಣ್ಣು, ಬಾಳೆಹಣ್ಣು, ಧವನ, ಹೂವು ಎಸೆದು ಇಷ್ಟಾರ್ಥ ಸಿದ್ಧಿಗೆ ಬೇಡಿಕೊಳ್ಳುವುದು ಸಾಮಾನ್ಯ.

ಆದರೆ, ಗರಗದ ಶ್ರೀಗುರು ಮಡಿವಾಳೇಶ್ವರ ಜಾತ್ರೆಯಲ್ಲಿ ಸಚಿನ್ ಕ್ಯಾತನವರ ಎಂಬ ಯುವಕ, ‘ಈ ವರ್ಷವಾದ್ರೂ ಮದುವೆ ಫಿಕ್ಸ್ ಮಾಡಪ್ಪ...’ ಎಂದು ಬಾಳೆಹಣ್ಣಿನ ಮೇಲೆ ಬರೆದು ದೇವರಲ್ಲಿ ಪ್ರಾರ್ಥಿಸಿ ತೇರಿಗೆ ಎಸೆದಿದ್ದಾನೆ. ಈ ಕೋರಿಕೆಯನ್ನು ವಿಡಿಯೋ ಮಾಡಿ ಟಿಕ್​ಟಾಕ್​ನಲ್ಲಿ ಅಪ್​ಲೋಡ್ ಮಾಡಿದ್ದಾನೆ. ಈ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದ್ದು, 1.60 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net