Ratan tata: ರತನ್ ಟಾಟಾ ಅವರ ಆಸ್ತಿ ಯಾರದ್ದು? ಸಂಬಂಧಿ, ಮನೆ ಕೆಲಸದವರ ಜತೆ ಸಾಕು ನಾಯಿಗಳಿಗೂ..

Ratan Tata
Published on

ನವದೆಹಲಿ: ಟಾಟಾ ಸಮೂಹದ ಮಾಜಿ ಅಧ್ಯಕ್ಷ ರತನ್ ಟಾಟಾ(Ratan tata) ಅವರ ನಿಧನದ ನಂತರ ಅವರ ಮಲ ಸಹೋದರ ನೋಯೆಲ್ ಟಾಟಾ ಟಾಟಾ ಟ್ರಸ್ಟ್‌ನ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ಆದರೆ ರತನ್ ಟಾಟಾ ಅವರ ಆಸ್ತಿ ಯಾರ ಪಾಲಾಗುತ್ತದೆ ಎಂಬುದು ಪ್ರಶ್ನಾರ್ಹವಾಗಿ ಪರಿಣಮಿಸಿದೆ. ರತನ್ ಟಾಟಾ ಅವರು ತಮ್ಮ ಸಂಪತ್ತಿನ ಹೆಚ್ಚಿನ ಭಾಗವನ್ನು ದಾನಕ್ಕಾಗಿ ಮೀಸಲಿಟ್ಟಿದ್ದಾರೆ. ಟ್ರಸ್ಟ್‌ಗಳಿಗೂ ವಿಲ್​ಪತ್ರ ಬರೆದಿದ್ದಾರೆ ಎಂದು ವರದಿಯಾಗಿದೆ.

ರತನ್ ಟಾಟಾ ಅವರ ಆಸ್ತಿ 10 ಸಾವಿರ ಕೋಟಿ ರೂ.ಇದ್ದು, ಅಲಿಬಾಗ್‌ನಲ್ಲಿ 2000 ಚದರ ಅಡಿ ಬೀಚ್ ಬಂಗಲೆ. ಮುಂಬೈ ಜುಹು ತಾರಾ ರಸ್ತೆ ಬಳಿ 2 ಅಂತಸ್ತಿನ ಕಟ್ಟಡವಿದೆ. ಸ್ಥಿರ ಠೇವಣಿ ರೂಪದಲ್ಲಿ 350 ಕೋಟಿ ರೂ. ಆಸ್ತಿ ಇದೆ. ಟಾಟಾ ಸಮೂಹದ ಹಿಡುವಳಿ ಕಂಪನಿಯಾದ ಟಾಟಾ ಸನ್ಸ್‌ನಲ್ಲಿ ರತನ್ ಟಾಟಾ ಶೇ.0.83 ಪಾಲನ್ನು ಹೊಂದಿದ್ದಾರೆ. ಹೆಚ್ಚಿನ ಸಂಪತ್ತನ್ನು ದತ್ತಿ ಪ್ರತಿಷ್ಠಾನಕ್ಕೆ ವರ್ಗಾಯಿಸಲಾಗಿದೆ ಎಂದು ವರದಿಯಾಗಿದೆ.

ಇನ್ನು ರತನ್ ಟಾಟಾ ಅವರಿಗೆ ನಾಯಿಗಳೆಂದರೆ ತುಂಬಾ ಇಷ್ಟ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಅವರ ಮುದ್ದಿನ ಜರ್ಮನ್ ಶೆಫರ್ಡ್ ಟಿಟೊಗೆ 'ಅನಿಯಮಿತ ಆರೈಕೆ' ಹೆಸರಿನಲ್ಲಿ ವಿಶೇಷ ನಿಬಂಧನೆಗಳನ್ನು ಉಯಿಲಿನಲ್ಲಿ ಮಾಡಲಾಗಿದೆ. ಬಾಣಸಿಗ ರಾಜನ್ ಶಾ ಈ ನಾಯಿಯನ್ನು ನೋಡಿಕೊಳ್ಳುತ್ತಿದ್ದಾರೆ. ಆದರೆ ಟಿಟೊ ಜೊತೆಗೆ, ಟಾಟಾ ತನ್ನ ಆಸ್ತಿಯಲ್ಲಿ ಒಂದು ಭಾಗವನ್ನು ಬಟ್ಲರ್ ಸುಬ್ಬಯ್ಯ ಮತ್ತು ಅಡುಗೆ ಭಟ್ಟ ರಾಜನ್ ಷಾಗೆ ನೀಡುವಂತೆ ತನ್ನ ಉಯಿಲಿನಲ್ಲಿ ಬರೆದಿದ್ದಾರೆ.

ಅದೇ ರೀತಿ ರತನ್ ಟಾಟಾ ಅವರ ಆತ್ಮ ಸಂಗಾತಿ ಶಾಂತನು ನಾಯ್ಡು ಅವರಿಗೆ ಸ್ವಲ್ಪ ಮೊತ್ತವನ್ನು ನೀಡಲು ಬಯಸಿದ್ದರು ಎಂದು ತೋರುತ್ತದೆ. ಇವರಲ್ಲದೆ, ಟಾಟಾ ಫೌಂಡೇಶನ್, ಸಹೋದರ ಜಿಮ್ಮಿ ಟಾಟಾ, ಮಲ ಸಹೋದರಿಯರಾದ ಶಿರೀನ್ ಮತ್ತು ದೀನಾ ಜೆಜೆಬಾಯ್ ಸೇರಿದಂತೆ ಮನೆಯ ಸಿಬ್ಬಂದಿ ಹೆಸರಿನಲ್ಲಿ ಷೇರುಗಳನ್ನು ಕಟ್ಟಿದ್ದಾರೆ.

ಟಾಟಾ ಅವರು ಬೀದಿನಾಯಿಗಳ ಆರೈಕೆಯಲ್ಲಿ ತುಂಬಾ ಉತ್ಸುಕರಾಗಿದ್ದರು. ಈ ಮೂಕಪ್ರಾಣಿಗಳಿಗೆ ಆಸ್ಪತ್ರೆಗಳನ್ನು ನಿರ್ಮಿಸಲಾಗಿದೆ. ಮುಂಬೈನಲ್ಲಿ ಐದು ಅಂತಸ್ತಿನ ಕಟ್ಟಡದಲ್ಲಿ ‘ಪೆಟ್ ಪ್ರಾಜೆಕ್ಟ್’ ಹೆಸರಿನ ಶ್ವಾನ ಆರೈಕೆ ಕೇಂದ್ರ ತೆರೆದಿರುವುದು ಗೊತ್ತೇ ಇದೆ. ಹಾಗಾಗಿ.. ಮನೆಯಲ್ಲಿ ಕೆಲಸ ಮಾಡುವವರಿಂದ ರಕ್ತಸಂಬಂಧಿಗಳಿಗೂ ಕೊನೆಗೆ ತನ್ನ ನೆಚ್ಚಿನ ನಾಯಿಗೂ ಶೇರು ಹಂಚಲಾಗಿದೆ ಎಂಬ ಮಾತುಗಳಿ ಕೇಳಿಬರುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net