ಕೋವಿಡ್​ನಿಂದ ಕೊನೆಯುಸಿರೆಳೆದ ಆರ್​ಎಲ್​ಡಿ ಮುಖ್ಯಸ್ಥ, ಮಾಜಿ ಕೇಂದ್ರ ಸಚಿವ ಅಜಿತ್​ ಸಿಂಗ್​

Ajith Singh
Published on

ನವದೆಹಲಿ: ರಾಷ್ಟ್ರೀಯ ಲೋಕ ದಳ (ಆರ್​ಎಲ್​ಡಿ) ಮತ್ತು ಮಾಜಿ ಕೇಂದ್ರ ಸಚಿವ ಚೌಧರಿ ಅಜಿತ್​ ಸಿಂಗ್ (82) ಅವರು ಕರೊನಾ ಸೋಂಕಿನಿಂದ ಗುರುವಾರ ಮೃತಪಟ್ಟಿದ್ದಾರೆ.​

ಅಜಿತ್​ ಸಿಂಗ್​ ಪಶ್ಚಿಮ ಉತ್ತರ ಪ್ರದೇಶದ ಓರ್ವ ಸಜ್ಜನ ರಾಜಕಾರಣಿ. ಏಪ್ರಿಲ್​ 20ರಂದು ಅವರಿಗೆ ಕರೊನಾ ಪಾಸಿಟಿವ್​ ಆಗಿತ್ತು. ಆದರೆ, ಆರೋಗ್ಯ ಪರಿಸ್ಥಿತಿ ತೀವ್ರ ಹದಗೆಟ್ಟ ಹಿನ್ನೆಲೆಯಲ್ಲಿ ಮಂಗಳವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಇಹಲೋಕ ತ್ಯಜಿಸಿದ್ದಾರೆ.

ಇಂದು ಅಜಿತ್​ ಸಿಂಗ್​​ ಮೃತಪಟ್ಟರೆಂದು ಭಾರವಾದ ಹೃದಯದಿಂದ ನಿಮಗೆ ತಿಳಿಸುತ್ತಿದ್ದೇನೆ. ಬೆಳಗ್ಗೆ 8.20ರ ಸುಮಾರಿಗೆ ಕೊನೆಯುಸಿರೆಳೆದರು. ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಐಸಿಯು ಮತ್ತು ವೆಂಟಿಲೇಟರ್​ ಬೆಂಬಲದೊಂದಿಗೆ ಕಳೆದ ಕೆಲವು ದಿನಗಳಿಂದ ಚಿಕಿತ್ಸೆ ನೀಡಲಾಗುತ್ತಿತ್ತು ಎಂದು ಅಜಿತ್​ ಸಿಂಗ್​ ಅವರ ಪಿಎ ಮಾಹಿತಿ ನೀಡಿದರು.

ಈ ಬಗ್ಗೆ ಮಾಜಿ ಸಂಸದ ಜಯಂತ್​ ಚೌಧರಿ ಸಹ ಟ್ವೀಟ್​ ಮೂಲಕ ಖಚಿತಪಡಿಸಿದ್ದಾರೆ. ಹೀಗೆ ಅನೇಕರು ಅಜಿತ್​ ಸಿಂಗ್​ ಸಾವಿಗೆ ಕಂಬನಿ ಮಿಡಿದಿದ್ದಾರೆ. ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಸಹ ಸಂತಾಪ ಸೂಚಿಸಿದ್ದಾರೆ.

ಅಜಿತ್​ ಸಿಂಗ್​ ಅವರು ದೇಶದ ಮಾಜಿ ಪ್ರಧಾನಿ ಚೌಧರಿ ಚರಣ್​ ಸಿಂಗ್​ ಅವರ ಮಗ. ಇವರು 8 ಬಾರಿ ಸಂಸತ್ತಿನ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಒಂದು ಬಾರಿ ರಾಜ್ಯಸಭಾ ಸದಸ್ಯರು ಸಹ ಆಗಿದ್ದರು. ನಾಲ್ಕು ಬಾರಿ ಕೇಂದ್ರ ಸಚಿವರಾಗಿಯು ಸೇವೆ ಸಲ್ಲಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net