

ಮುಂಬೈ: ಪ್ರಸ್ತುತ ದಕ್ಷಿಣ ಭಾರತದ ಅತ್ಯಂತ ಯಶಸ್ವಿ ನಟಿಯರ ಪೈಕಿ ಮುಂಚೂಣಿಯಲ್ಲಿರುವ ಸೌತ್ ಬ್ಯೂಟಿ ರಶ್ಮಿಕಾ ಮಂದಣ್ಣ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಟಾಲಿವುಡ್, ಬಾಲಿವುಡ್ನ ಟಾಪ್ ನಟರ ಚಿತ್ರಗಳಿಗೆ ಹೀರೋಯಿನ್ ಆಗಿ ಆಯ್ಕೆಯಾಗುತ್ತಿದ್ದಾರೆ. ತಮ್ಮ ಚೊಚ್ಚಲ ಚಿತ್ರವನ್ನು ಕನ್ನಡದಿಂದ ಶುರುಮಾಡಿದ ರಶ್ಮಿಕಾ, ತೆಲುಗು ಚಿತ್ರರಂಗಕ್ಕೆ ಕಾಲಿಡುತ್ತಿದ್ದಂತೆ ಅಪಾರ ಜನಮನ್ನಣೆ ಗಳಿಸಿ, ಇಂದು ಹೆಸರಾಂತ ನಟಿಮಣಿಯರ ಸಾಲಿನಲ್ಲಿ ಮೊದಲಿಗರಾಗಿದ್ದಾರೆ.
ಭಾರತೀಯ ಚಲನಚಿತ್ರೋದ್ಯಮದಲ್ಲಿ ತನ್ನದೇ ವಿಶೇಷ ಛಾಪು ಮೂಡಿಸಿರುವ ರಶ್ಮಿಕಾ, ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ಇದೀಗ ಅವರ ಅಭಿಮಾನಿಗಳಲ್ಲಿ ಭಾರೀ ಸಂತಸ ಉಂಟುಮಾಡಿದೆ. ಸ್ಟಾರ್ ನಟರ ಚಿತ್ರಗಳಿಗೆ ರಶ್ಮಿಕಾನೇ ಮೊದಲ ಆಯ್ಕೆ ಎನ್ನುತ್ತಿರುವ ನಿರ್ದೇಶಕರು, ನಿರ್ಮಾಪಕರು ಇದೀಗ ಟಾಲಿವುಡ್ ನಟಿ ಸಮಂತಾ ಅವರ ಜಾಗಕ್ಕೆ ರಶ್ಮಿಕಾರನ್ನು ತಂದಿರುವುದು ಸಿನಿಪ್ರಿಯರಲ್ಲಿ ಅಚ್ಚರಿ ಮೂಡಿಸಿದೆ.
ಬಾಲಿವುಡ್ನಲ್ಲಿ 'ಅನಿಮಲ್' ಚಿತ್ರದ ಬಳಿಕ ಹೊಸ ಟ್ರೆಂಡ್ ಹುಟ್ಟುಹಾಕಿರುವ ರಶ್ಮಿಕಾ ಮಂದಣ್ಣ, ಇದೀಗ ಹಿಂದಿ ಭಾಷೆಯ ಹಾರರ್-ಕಾಮಿಡಿ ಜಾನರ್ನ ಸಿನಿಮಾಗೆ ನಾಯಕಿಯಾಗಿದ್ದಾರೆ. ವರದಿಗಳ ಪ್ರಕಾರ, ನಿರ್ಮಾಪಕರಾದ ದಿನೇಶ್ ವಿಜನ್ ಅವರ 'ವಾಂಪೈರ್ಸ್ ಆಫ್ ವಿಜಯನಗರ' ಚಿತ್ರಕ್ಕೆ ಮೊದಲು ಸಮಂತಾರನ್ನು ನಾಯಕಿಯಾಗಿ ಆಯ್ಕೆ ಮಾಡಲಾಗಿತ್ತು. ಆದರೆ, ಕಾರಣಾಂತರಗಳಿಂದ ಇದೀಗ ಸ್ಯಾಮ್ ಚಿತ್ರದಿಂದ ಹೊರನಡೆದಿದ್ದು, ಅವರ ಜಾಗದಲ್ಲಿ ರಶ್ಮಿಕಾ ಇರಲಿದ್ದಾರೆ ಎಂದು ವರದಿಯಾಗಿದೆ,(ಏಜೆನ್ಸೀಸ್).